Friday, May 15, 2015

ನಾಯಿಗೆ ಇನ್ನೊದು ಹೆಸರು 'ನಿಯತ್ತು' (ಎಂದೋ ಓದಿದ ಕಥೆ )




ಎಂದೋ ಓದಿದ ಕಥೆ 

ಮಲ್ಲಿಗೆ ಹಳ್ಳಿಯಲ್ಲಿ ಮಲ್ಲಿಗೆ ಸೋಮಯ್ಯನೆಂಬ ಮಲ್ಲಿಗೆ  ಹೂ ಬೆಳೆಯುವ
ರೈತನಿದ್ದ. ಅವನನ್ನು ಮಲ್ಲಿಗೆ ಸೋಮಯ್ಯಎಂದೇ ಊರಿನ   ಜನರೆಲ್ಲಾ ಕರೆಯುತ್ತಿದ್ದರು.   ಅವನಿಗೆ ಸುಂದರವಾದ ಏಕಮಾತ್ರ ಕುವರಿಯಿದ್ದಳು. ಅವಳ ಹೆಸರು ರಜನಿ . ಅವಳು ಸೋಮಯ್ಯ ಬೆಳೆಸಿದ ಹೂಗಳನ್ನು ಮಾಲೆಕಟ್ಟಿ ಬುಟ್ಟಿಯಲ್ಲಿ ಹೊತ್ತುಕೊಂಡು ಹೋಗಿ ಊರಿನಲ್ಲಿ ಸುತ್ತಾಡಿ ಮಾರಾಟ ಮಾಡುತ್ತಿದ್ದಳು. ತದನಂತರ ಊರಿನ ಕಾಳಿಕಾ ದೇವಿಯ ಗುಡಿಯ ಎದುರುಗಡೆ ವ್ಯಾಪಾರ ಮಾಡುತ್ತಿದ್ದಳು. ಈ ರೀತಿಯಲ್ಲಿ ರಜನಿ ತಂದೆಯ ಕಾಯಕದಲ್ಲಿ ಸಹಕಾರಿಯಾಗುತ್ತಿದ್ದಳು.  ತಂದೆಗೆ ಮಗಳ ಮೇಲೆ ಎಲ್ಲಿಲ್ಲದ ಪ್ರೀತಿ.  ತಾಯಿ ಇಲ್ಲದ ತಬ್ಬಲಿ ಎಂದು ಅವಳನ್ನು ಅತಿ ಮುದ್ದಿನಿಂದ ತಾಯಿ ಇಲ್ಲ ಎಂಬ ಕೊರತೆ ಬಾರದಂತೆನೋಡಿಕೊಂಡಿದ್ದ

ಹೀಗೊಂದು ದಿನ ರಜನಿ  ಹೂ ವ್ಯಾಪಾರ ಮಾರಿ ಬರುವಾಗ 
ಕಾಳಿಕಾ ದೇವಿಯ ಗುಡಿಯ ಹತ್ತಿರ ಆಹಾರವಿಲ್ಲದೆ ಹಸಿವಿನಿಂದ ಕೊರಗಿ ಕೃಶವಾದ  ಬಡಕಲು ಶರೀರದ  ನಾಯಿ ಮರಿಯೊಂದು ಕಾಣಿಸಿತು. ಆ ಮೂಕ ಪ್ರಾಣಿಯನ್ನು  ನೋಡಿ  ಅವಳಿಗೆ ಪಾಪ ಎನಿಸಿ ಅದನ್ನು ಕರೆದು ಕೊಂದು ಹೋಗಿ ತನ್ನ ಮನೆಗೆ ಹೊತ್ತುತಂದು ಹಾಲು ಅನ್ನ ಕೊಟ್ಟು ಚೆನ್ನಾಗಿ ಸಾಕಿದಳು. ಒಳ್ಳೆ ಊಟ ಪ್ರೀತಿ ಸಿಕ್ಕ ನಾಯಿ ಬಲಿಷ್ಟವಾಗಿ ಬೆಲೆಯಿತು.  ಚೆನ್ನಾಗಿ ಬುದ್ಧಿ ಕಳಿಸಿ ಅವಳ ಹಿಂದೆ ಮುಂದೆ ಓಡಾಡಿ  ಕೊಂಡು  ಇದ್ದ  ತನ್ನ ಪ್ರೀತಿಯ ನಾಯಿಗೆ  ಪ್ರೀತಿ ಇಂದ   'ರಾಜ ' ಎಂದು ಹೆಸರಿಟ್ಟಳು. ರಜನಿ  ಎಲ್ಲಿಗೆ ಹೊರಟರೂ ಅವಳನ್ನು ಹಿಂಬಾಲಿಸಿ ಬರುತ್ತಿತ್ತು ಹೋಗುತಿತ್ತು . ಅಷ್ಟರಮಟ್ಟಿಗೆ ಆವರಿಬ್ಬರ ನಡುವೆ ಬಿಟ್ಟಿರಲಾರದ ಬಾಂಧವ್ಯ ಬೆಸೆದು ಕೊಂಡಿತ್ತು.   

ಮಟಮಟ ಮಧ್ಯಾಹ್ನದ ಏರುಹೊತ್ತಿನ ಸಮಯದಲ್ಲಿ ರಜನಿ  ಪಟ್ಟಣದಲ್ಲಿ ಹೂ ವ್ಯಾಪಾರ ಮಾಡಿ ಹಿಂತಿರುಗಿ ಬರುವಾಗ ನಡುದಾರಿಯಲ್ಲಿ ಕಾಮುಕನೊಬ್ಬ ತಡೆದು ನಿಲ್ಲಿಸಿದ. ಆತ ರಜನಿಯ  ಸೌಂದರ್ಯದ ಮೇಲೆ ಕಣ್ಣಿಟ್ಟಿದ.  ರಾಜ ಇಲ್ಲದ ಸಮಯದಲ್ಲಿ ಮತ್ತು ಆ ಸಂದರ್ಭಕ್ಕಾಗಿ ಕಾಯುತ್ತಿದ. ರಜನಿಯ ಸೀರೆ ಸೆರೆಗೆಳೆದು ಬಲಾತ್ಕರಿಸಲು ಯತ್ನಿಸಿದ. ಮಾನ ರಕ್ಷಣೆಗಾಗಿ ಪುಷ್ಪಗಂಧಿನಿ 'ರಾಜ  ರಾಜಾ''  ಎಂದು ಕೂಗಿಟ್ಟಳು ಅವಳ ಆಕ್ರಂದನ ಆಲಿಸಿದ ರಾಜಾ   ಎಲ್ಲಿಂದಲೋ ಶರವೇಗದಲ್ಲಿ ಓಡಿ ಬಂದು ಕಾಮುಕನನ್ನು ಕಚ್ಚಿ ರಕ್ತಬರಿಸಿ ಅಟ್ಟಿಸಿ ಕೊಂಡು ಹೋಗಿ ಓಡಿಸಿಬಿಟ್ಟಿತು.  ಅವಳ ಮಾನ ಕಾಪಾದಿತು.    ರಜನಿ ಕಣ್ಣೀರು ಹಾಕುತ್ತ 'ಮೂಕ ಪ್ರಾಣಿಯಾದ  ನಿನಗೆ ನಿಯತ್ತಿದೆ. ಅನ್ನದ ಋಣದ ಅರಿವಿದೆ. ಆದರೆ ಆ ರಾಕ್ಷಸ ಗುಣದ  ಕೆಲವು ಮನುಜರ ಬಗ್ಗೆ ಅಸಹ್ಯ ಅನಿಸುತ್ತಿದೆ. ನೀನು ನನ್ನನ್ನು ಕಾಪಾಡಿದ ನಾರಾಯಣ ರೂಪಿ ಭಗವಂತ' ಎನ್ನುತ್ತ ಮನೆಯ ಹಾದಿಯತ್ತ ನಡೆಯಲಾರಂಭಿಸಿದಳು. ಆದ್ದರಿಂದಲೇ ನಾಯಿಯನ್ನು ನಾರಾಯಣ ಎನ್ನುತಾರೆ,    ನಾಯಿಗೆ ಇನ್ನೊದು ಹೆಸರು 'ನಿಯತ್ತು'    ಎಂದೋ ಓದಿದ ಕಥೆ ನೆನಪಾಯಿತು ಹಂಚಿ ಕೊಂಡೆ  ( ಈ ಚಿತ್ರದಲ್ಲಿರುವುದು ನಮ್ಮ ಮನೆಯ ನಾರಾಯಣ ಕಿಲ್ಲರ್ ಎಂದು ಇವನ ಹೆಸರು ) 

3 comments:

  1. ಕಿಲ್ಲರ್ ಸಖತ್ತಾಗಿದೆ...

    ReplyDelete
  2. ನರನ ಕಿಲ್ಲರ್ರೋ ನಾರಾಯಣನ ಕಿಲ್ಲರ್ರೋ.. ನಾಯಿ ಪೂಜನೀಯ ಪ್ರಾಣಿ

    ReplyDelete