Wednesday, September 23, 2015

ಅರಿಶಿನ ಕುಂಕುಮ


ಹಿಂದೆಲ್ಲ ಮನೆಗೆ ಯಾರೇ ಮುತ್ತೈದೆ  ಬಂದರೂ ಸಹ ಎಷ್ಟೇ ಕಡು ಬಡವರ ಮನೆಯಲ್ಲೂ  ಅರಿಶಿನ ಕುಂಕುಮ  ಹರಿವಾಣ ವನ್ನು ದೇವರ ಮನೆ ಇಂದ ತಂದು ಅರಿಶಿನ ಕುಂಕುಮ ಹೂ ಕೊಡದೆ  ಮುತ್ತೈದೆಯನ್ನು ಕಳುಹಿಸಿ ಕೊಡುತ್ತಿರಲಿಲ್ಲ.  ಮನೆಗೆ  ಮುತ್ತೈದೆ  ಬಂದರೆ ಲಕ್ಷ್ಮಿ ಬಂದಂತೆ ಎಂದು ನಮ್ಮಮ್ಮ ಯಾವಾಗಲು ಹೇ ಳು ತ್ತಿದ್ದರು .  ಒಂದು ಸ್ಟೀಲ್ ತಟ್ಟೆ  ಅದರಲ್ಲಿ ಎರಡು ಸ್ಟೀಲ್ ಅರಿಶಿನ ಕುಂಕುಮದ ಬಟ್ಟಲು ದೇವರ ಮುಂದೆ  ಸದಾ ಇರುತ್ತಿತ್ತು.   ಅಮ್ಮ ಅಕ್ಕ ಪಕ್ಕ ಮನೆಯವರು ನೆಂಟರಿಷ್ಟರು  ಯಾರೇ ಬಂದರು ಕುಂಕುಮ ಹೂ ಕೊಡುತ್ತಿದ್ದರು .  ನೆಂಟರಿಷ್ಟರು ಬಂದರೆ ತಾಂಬೂಲ  ಕೊಡಬೇಕಾಗುತಿತ್ತು .  ಆದರೆ ಆಗಿನ ಪರಿಸ್ತಿತಿ ಅಷ್ಟೊಂದು ಚೆನ್ನಾಗಿರಲಿಲ್ಲ  ಅಗ ಅಮ್ಮ ತುಂಬಾ ಬೇಸರ ಪಟ್ಟು ಕೊಂಡಿದ್ದುಂಟು .   ಬಂದವರಿಗೆ  ಒಂದೊಳ್ಳೆ   ರೀತಿ  ಆದರಿಸಲಾಗಲಿಲ್ಲ , ನಮ್ಮ ಸ್ತಿತಿ ಸುಧಾರಿಸು ಭಗವಂತ  ಎಂದು ಪ್ರತಿನಿತ್ಯ  ಎರಡು ಹೊತ್ತು ದೇವರಿಗೆ ದೀಪ ಹಚ್ಚುವಾಗ ಬೇಡಿ ಕೊಂಡು  ನಮ್ಮಗಳ ಕೈಲಿ ಕೂಡ ಪ್ರತಿ ನಿತ್ಯ ದೇವರ ನಾಮಗಳನ್ನು ಹಾಡಿಸಿ ಬೇಡಿ ಕೊಳ್ಳುವಂತೆ  ಹೇಳುತ್ತಿದ್ದರು .  ನಾವು ಕೂಡ ಅಷ್ಟೇ ಭಕ್ತಿ ಇಂದ ದೇವರಲ್ಲಿ ನಮ್ಮ ಮೊರೆ  ಕೇಳಿಸದೆ  ಭಗವಂತ ಎಂದು ಅವನ ನ್ನು    ಪ್ರಶ್ನಿಸುತ್ತಿದ್ದೆವು.

ಆದರೆ ಬೇಸರದ ಸಂಗತಿ ಎಂದರೆ ಈಗ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಬೆಳ್ಳಿಯ ಹಾರಿವಾಣ  ಅದರಲ್ಲಿ ಬೆಳ್ಳಿಯ ಬಟ್ಟಲಿನಲ್ಲಿ ಅರಿಶಿನ ,ಕುಂಕುಮ,  ಚಂದನ, ಅಕ್ಷತೆ , ಗಂಧ  ಇವೆಲ್ಲವೂ ಸಾಲಂಕೃತ  ವಾಗಿ ಜೋಡಿಸಿಟ್ಟಿ ರುತ್ತಾರೆ  ಆದರೆ ಅದೆಲ್ಲ ಹಬ್ಬ ಹುಣ್ಣಿಮೆಗಳಂದು  ಆಹ್ವಾನಿತ  ಮುತ್ತೈದೆ ಯರಿಗೆ ನೀಡುತ್ತಾರೆ .   ಉಳಿದಂತೆ ಬೇರೆ ದಿನಗಳಲ್ಲಿ  ಯಾರೇ ಮುತ್ತೈದೆ  ಬಂದರೂ ಅದರಲ್ಲೂ ಮಂಗಳವಾರ , ಶುಕ್ರವಾರಗಳೇ ಆಗಲಿ  ಬರಿದೆ ಮಾತನಾಡಿಸಿ ಕಳುಹಿಸುತ್ತಾರೆ .   ಆದರೆ ನಮ್ಮ ಮನೆಗಳಲ್ಲಿ ಅರಿಶಿನ ಕುಂಕುಮ ಹೂ ಕೊಡದೆ  ಮುತ್ತೈದೆಯರನ್ನು  ಹಾಗೆ ಕಳುಹಿಸುವುದಿಲ್ಲ .  ಈ ಗಲೂ  ನಮ್ಮ ತಾಯಿ ಹೇಳಿ ಕೊಟ್ಟಿದ್ದನ್ನು  ಚಾಚೂ ತಪ್ಪದೆ ಪಾಲಿಸುತ್ತಾ  ಬರುತ್ತಿದ್ದೇವೆ .  ಆ ಭಗವಂತನ ಕರುಣೆ ಇಂದ ಈಗಲೂ ಇಂತಹ ಸು ಸಂಸ್ಕಾರಗಳನ್ನು   ನಡೆಸಿ ಕೊಂಡೆ ಹೋಗುತ್ತಿದ್ದೇವೆ .   ಯಾಕ್ ಹೀಗೆ ನಮ್ಮ ಜನ ಒಳ್ಳೆಯ ಸಂಪ್ರದಾಯ ಗಳನ್ನ ಬಿಡುತ್ತ ಬರುತ್ತಿದ್ದಾರೆ .  ಈ ಬೆಳವಣಿಗೆಗಳು  ಶುಭ ಸೂಚಕವಲ್ಲ .   ಕೆಲವು  ಹೆಂಗಸರಂತೂ  ಹಣೆಗೆ ಕುಂಕುಮ ಇಲ್ಲಾ  , ತಲೆಗೆ ಹೂ ಮುಡಿ ಯುವುದಿಲ್ಲ,  ಕಾಲಿಗೆ ಕಾಲುಂಗರ ತೊಡುವುದಿಲ್ಲ , ಕೈಗಳಿಗೆ ಬಳೆಗಳನ್ನು  ಕೇಳಲೇ ಬೇಡಿ .   ನಾನು ತಲೆ ತುಂಬಾ ಹೂ ಮುಡಿದು , ಕೈ ತುಂಬಾ ಗಾಜಿನ ಬಳೆ ಗಳನ್ನೂ ತೊಟ್ಟಿದ್ದರೆ  ನನ್ನ ಮಕ್ಕಳೇ ''ಅಮ್ಮ ಈ ರೀತಿ ಬಂದರೆ ನಿನ್ನನ್ನು ಹಳ್ಳಿ ಗಮಾರಿ  ಅಂತ ತಿಳ್ಕೋತಾರೆ ಎಲ್ಲರೂ ,  ಹೂ ಒಂದೇ ಒಂದು ಮುಡ್ ಕೊ , ಎರಡೆರಡು ಬಳೇ ಗಳು ಸಾಕು , ಇದೆಲ್ಲ ಪಾರ್ಟಿ manners  ಅಮ್ಮ ತಿಳ್ಕೊ  ಅನ್ತಾರೆ;    ದೇವಸ್ತಾನಕ್ಕೆ  ಬೇಕಾದರೆ ನಿನ್ನ ಇಷ್ಟ ಬಂದಂತೆ  ಉಡು , ತೊಡು  ಓಕೆ ಅಂತಾರೆ '' .  ಶ್ರೀ ಹರಿ ಇದೇನಪ್ಪ ನಮ್ಮ ಮುಂದಿನ ಪರಂಪರೆಗೆ ಇವೆಲ್ಲ ಹೊರಟೆ ಹೋಗುತ್ತೆ ಅಂತ ಭಯ ಹುಟ್ಟುತ್ತಿದೆ !!!    ಆರೇ ಎಫ್ ಎಮ್  ನಲ್ಲಿ  ಇದೆ ಹಾಡೇ ಬರ ಬೇಕೇ ನನ್ನ ಅದೃಷ್ಟಕ್ಕೆ ''ಹೆಣ್ಣು  ಎಂದರೆ ಹೇಗಿರಬೇಕು ?  ಹಣೆ ಯಲ್ಲಿ ಕುಂಕುಮ ಧರಿಸಿರಬೇಕು ,  ಅರಿಶಿನ ಕೆನ್ನೆಯ ತುಂಬಿರ ಬೇಕು , ಮೈ ತುಂಬಾ ಸೆರಗನ್ನು ಹೊದ್ದಿರಬೇಕು '' ಅಣ್ಣಾವ್ರ ಹಾಗೂ ಮುದ್ದು ಮೊಗದ ಭಾರತಿಯ  ಆ ಜೋಡಿ ಅದೆಷ್ಟು ಸುಂದರ !  ನೆನಪುಗಳೇ ಅತಿ ಮಧುರ ಅಲ್ಲವೇ ?

ಜಯ ದೇವ ಜಯ ದೇವ ಶ್ರೀ ಗಣಪತಿ ರಾಯ






ಧಾರ್ಮಿಕತೆಯ  ಹೆಸರಿನಲ್ಲಿ ಮಾನವೀಯತೆ ಮೆರೆದ ಗೋಕಾಕ್ ನಲ್ಲೊಂದು ಗಣಪತಿ  ಯುವಕ ಸಂಘದಿಂದ ಸ್ಮಶಾನ ಕಾಯುವ ಸೋಮಯ್ಯ  ಪೂಜಾರಿ ಎಂಬವವರಿಗೆ ನಾಲಕ್ಕೂ  ಲಕ್ಷ ರೂಪಾಯಿಗಳಿಂದ ಒಂದು ಸುಂದರ ಗೃಹವನ್ನು ನಿರ್ಮಿಸಿ ಗಣಪತಿ ಹಬ್ಬದಂದು ಅವರಿಗೆ ಹಸ್ತಾಂತರಿಸಿದ ಒಂದು ಘಟನೆಯನ್ನು ಖಾಸಗಿ ಚಾನೆಲ್ ಒಂದರಲ್ಲಿ ನೋಡಿ ಹೃದಯ ತುಂಬಿ ಬಂತು . ೪ ಹೆಣ್ಣು ಮಕ್ಕಳ ತಂದೆ ಯಾದ ಸೋಮಯ್ಯ ನವರು ಪತ್ನಿ ಮತ್ತು ಪುತ್ರಿಯರೊಡನೆ  ಸ್ಮಶಾನ ಕಾಯುವ ಕಾಯಕದಿಂದ ಜೀವನ ನಡೆಸುತ್ತಿದ್ದರು .  ಅವರಿಗೆ ಸೂರು ಕಲ್ಪಿಸಿ ಹೆಂಡತಿ ಮಕ್ಕಳೊಡನೆ ನೆಮ್ಮದಿಯ  ಬಾಳು ನಡೆಸುವಂತೆ  ಮಾಡಿ ಕೊಟ್ಟ ಗಣಪತಿ ಯುವಕ ಸಂಘದವರು ಕಳೆದ ೨೬ ವರುಷಗಳಿಂದ ಈ ರೀತಿ ಸಮಾಜಮುಖಿ ಕಾರ್ಯಕ್ರಮಗಳನ್ನು ಮುಂದುವರಿಸಿ ಕೊಂಡು  ಬರುತ್ತಿದ್ದಾರೆ .  ಅವರು ಇದೆ ರೀತಿಯ ಒಳ್ಳೊಳ್ಳೆ  ಯೋಜನೆಗಳನ್ನು ಆಯೋಜಿಸಿ ಅರ್ಹರಿಗೆ ಈ ರೀತಿ ಸಹಾಯ ಹಸ್ತ ಚಾಚುತ್ತಿರುವುದು ಪ್ರಶಂಸನೀಯ .  ಆ ವಿಘ್ನ ವಿನಾಶಕ  ಗಜಮುಖನು ಇವರ ಈ  ಸಮಾಜಮುಖಿ ಕಾರ್ಯಗಳಿಗೆ ಇನ್ನು ಹೆಚ್ಚಿನ ಹಣವನ್ನು , ಸಹಕಾರವನ್ನು ಅಲ್ಲಿನ ಜನರಿಂದ ಒದಗಿಸಿ ಅರ್ಹರಿಗೆ ಸೂರು ಇಲ್ಲದವರಿಗೆ ದೀನರಿಗೆ ಒಂದು ಸೂರು ದೊರಕಿಸಿ ಕೊಡುವಂತೆ ಆಶಿರ್ವಾದ ನೀಡಲಿ.  ಇಂತಹ ಸಂಘಗಳು ಅತಿ ಹೆಚ್ಚಿನ ಸಂಖೆಯಲ್ಲಿ  ಮುಂದೆ ಬರಲಿ.   ಧಾರ್ಮಿಕತೆಯ  ಹೆಸರಿನಲ್ಲಿ  ಆಡಂಬರ ದ ಸದ್ದು ಗದ್ದಲ ತೋರದೆ ಇವ ರುಗಳು ನಡೆದ ಹಾದಿಯಲ್ಲಿ,  ಎಲ್ಲ ಸಂಘಗಳು ಇದನ್ನು ಆದರ್ಶವಾಗಿ ಟ್ಟು  ಕೊಂಡು ಮುಂಬರುವ  ದಿನಗಳಲ್ಲಿ ಈ ರೀತಿ ಕೈಂಕರ್ಯ ಗಳನ್ನ ಮುಂದುವರಿಸಿ ಕೊಂಡು ಹೋದಲ್ಲಿ ನಮ್ಮದು ರಾಮ ರಾಜ್ಯ ವಾಗುವುದರಲ್ಲಿ ಸಂದೇಹವೇ ಇಲ್ಲ .    ಜಯ ದೇವ ಜಯ ದೇವ ಶ್ರೀ ಗಣಪತಿ ರಾಯ ಜಯ ಗಣಪತಿ ರಾಯ ಜಯ ಕಾರಕ ಭಾವ ಹಾರಕ ಓಂಕಾರ ಕಾಯ : ಜಯ ದೇವ ಜಯ ದೇವ ಜಯ ದೇವ ಜಯ ದೇವ . ಸಾರ್ವ  ಜನಿಕರು ಇಂತಹ ಕಾರ್ಯಗಳಿಗೆ ತಮ್ಮ ಒಪ್ಪಿಗೆ ಸೂಚಿಸುವದರ ಮೂಲಕ  ಇದನ್ನು ಲೈಕಿ ಸ ಬೇಕಾಗಿ ಕೋರಿಕೆ .