Friday, May 15, 2015

ಬಾಲ್ಯದ ಮಧುರ ಕ್ಷಣಗಳು !! ನನ್ನ ನೆನಪಿನಂಗಳದಿಂದ



 ನನ್ನ ನೆನಪಿನಂಗಳದಿಂದ ೧


ನಾನು ತುಂಬಾ ಚಿಕ್ಕವಳಿದ್ದಾಗ ನನ್ನಮ್ಮ ನಮ್ಮನ್ನೆಲ್ಲ ಕುಳ್ಳಿರಿಸಿ ಕೊಂಡು  ಸಂಜೆ ದೇವರ ಮುಂದೆ ದೀಪ ಹಚ್ಚಿ ನಾವೆಲ್ಲಾ ಮಕ್ಕಳು ಕೈ ಕಾಲು ತೊಳೆದು ಕೊಂಡು ದೇವರ ನಾಮ ಶ್ಲೋಕಗಳನ್ನು ಬಾಯಿ ಪಾಠ ಮಾಡಿಸಿ, ಪ್ರತಿ ದಿನ ದೀಪ ಹಚ್ಚಿದ ನಂತರ ನಾವುಗಳೆಲ್ಲ ಅಮ್ಮನೊಂದಿಗೆ ದೇವರ ನಾಮ, ಕೇಶವ ನಾಮ, ರಾಮ ನಾಮ, ಗಣಪತಿ, ಶಾರದೆ ಶ್ಲೋಕಗಳನ್ನು ಭಜನೆ ರೀತಿ ಹಾಡಿ ಕೊಳ್ಳುತ್ತಿದೆವು . ನಂತರ ಎರಡು ತಾಸು ಓದಿ ಕೊಂಡು , ಬರೆದು ಕೊಂಡು , ನಂತರ ದೇವರು ಕೊಟ್ಟದ್ದನು ತಿಂದು ಮಲಗುವ ಮುನ್ನ ದುಃಸ್ವಪ್ನಗಳು  ಬೀಳದಂತೆ ನಮ್ಮಮ್ಮ ಹೇಳಿ ಕೊಟ್ಟಿದ್ದ ''ರಾಮಸ್ಕಂದಂ  ಹನುಮಂತಂ ವೈನತೆಯಮ್ ವ್ರುಕೊದರಂ, ಶಯನೇಯಾ ಸ್ಮರೆನಿತ್ಯಂ ದುಃಸ್ವಪ್ನನಂ ತಷ್ಯ ನಶ್ಯತಿ'' ಈ ಶ್ಲೋಕ ವನ್ನು ಹೇಳಿಕೊಂಡು ನಿದಿರೆಯ ಮಡಿಲಿಗೆ ಜಾರುತ್ತಿದೆವು.   ನನಗೇನಾದರೂ ನಿದ್ದೆ ಇನ್ನು ಬಂದಿಲ್ಲ ಎಂದರೆ ನನ್ನಮ್ಮ ನನಗೆ ಶ್ರೀ ರಾಮನ ಕಥೆಗಳು, ಶ್ರೀ ಕೃಷ್ಣನ ಕಥೆಗಳು, ಭಕ್ತ ಧ್ರುವ, ಭಕ್ತ ಪ್ರಹ್ಲಾದ, ಸತ್ಯ ಹರಿಶ್ಚಂದ್ರ ಇಂತಹ ಒಳ್ಳೊಳ್ಳೆ ಕಥೆಗಳನ್ನು ಹೇಳಿ ಮಲಗಿಸುತ್ತಿದ್ದರು. ಹೀಗೆ ಸುಖ ನಿದ್ದೆಗೆ ಜಾರುತ್ತಿದೆ. ಮತ್ತೆ ಬೆಳಿಗ್ಗೆ ಏಳುವ ಮುನ್ನಕೈಗಳನ್ನು ಎರಡೂ ಕೈ ಜೋಡಿಸಿ ಕರ ದರ್ಶನ ಮಾಡಿ 'ಕರಾಗ್ರೆ ವಸತೇ ಲಕ್ಷ್ಮಿ ಕರಮಧ್ಯೇ ಸರಸ್ವತಿ ಕರಮೂರ್ಲೆ ಸ್ತಿತೆ  ಗೌರಿ ಪ್ರಭಾತೆ ಕರದರ್ಶನಂ '' ಎಂದು ಹೇಳಿಕೊಂಡು ದೇವರ ಫೋಟೋ ನೋಡಿ ನಂತರ ಬೇವಿನ ಕಡ್ಡಿ ಇಂದ ಹಲ್ಳುಜಿ ಕೊಂಡು , ಹಂಡೆ ಇಂದ ಬಿಸಿ ನೀರು ಬಸಿದು ಕೊಂಡು ಎಲ್ಲರು ಕೈ ಕಾಲು ಮುಖ ತೊಳೆದು ಕೊಂಡು ಕಾಪಿ ಸೇವಿಸುವ ಹೊತ್ತಿಗೆ ಅಪ್ಪನ ಸ್ನಾನ ಸಂಧ್ಯಾವಂದನೆ , ದೇವರ ಪೂಜೆ ಎಲ್ಲ ಮುಗಿದು ಅಪ್ಪ ಸೈಕಲ್ ಏರಿ ಕೆಲಸಕ್ಕೆ ಹೊರಡುತ್ತಿದ್ದರು .  ಅಮ್ಮ ಬೆರಣಿ ಸೌದೆ ಇತ್ತು ಓಲೆ ಹೊತ್ತಿಸಿ ನಮಗೆಲ್ಲ ಏನಾದರು ತಿನ್ನಲು ತಯಾರಿಸಿ ನಮ್ಮಣ್ಣ ಶಾಲೆಗೇ ಸಾಗ ಹಾಕುತ್ತಿದ್ದರು.  ನಂತರ ನಮ್ಮ ಶಾಲೆ ಸಮೀಪ ಇದ್ದ ಕೆರೆಯಲ್ಲಿ ನಮ್ಮ ಬಟ್ಟೆಗಳನ್ನು ಶುಭ್ರ ವಾಗಿ ಒಗೆದು ಒಣಗಿಸಿಕೊಂಡು ನಂತರ ಮನೆಗೆ ಹೋಗಿ ಮನೆ ಕೆಲಸ ಎಲ್ಲ ಮುಗಿಸಿ ನಮ್ಮ ಬರುವನ್ನು ನಿರೀಕ್ಷಿಸಿ ನಮಗಾಗಿ ಕಾಯುತ್ತ ಬಾಗಿಲ ಬಳಿಯೇ ಇರುತ್ತಿದ್ದರು.  ನಮ್ಮನ್ನೆಲ್ಲ ಕಂಡಾಗ ಆಕೆಯ ಕಂಗಳಲಿ ಕಾಣುತ್ತಿದ್ದ ಆ ಆನಂದ ವರ್ಣಿಸಲಸಾಧ್ಯ  ಆಗ ನಮ್ಮ ಮನೆಯಲ್ಲಿ ರೇಡಿಯೋ ಸಹಾ ಇರಲಿಲ್ಲ.  ಅಂದಿನ ದಿನಗಳಲ್ಲಿ ಪಾಪ ಆಕೆಗೆ ಎಂತಹ ಮನರಂಜನೆ ಕೂಡ ಇಲ್ಲ.  ನಮ್ಮ ಲಾಲನೆ ಪೋಷಣೆ ಯಲ್ಲೇ ಅದೆಂತಹ ಆನಂದಮಯಿ ಆಕೆ.  ನಮ್ಮ ಬೆಳವಣಿಗೆಯಲ್ಲೆ  ನಮ್ಮ ತಾಯಿ ಸ್ವರ್ಗ ಸುಖ ಅನುಭವಿಸುತ್ತಿದ್ದರು.  ಎಂದೂ ಶಾಪಿಂಗ್  ಆಗಲಿ, ಅಥವಾ ನಮ್ಮ ತಂದೆ ಯೊಂದಿಗೆ ಎಲ್ಲಾದರೂ ಹೊರಗಡೆ ಹೋಗುವುದಾಗಲೀ  ಇಂತಹ ಕ್ಷಣಗಳು ದೊರೆಯುತ್ತಲೇ ಇರಲಿಲ್ಲ ಯಾಕೆಂದ್ರೆ ನಮ್ಮ ತಂದೆ ತಮ್ಮ ಹೋಟೆಲ್ ನಡೆಸುವ ಕೆಲಸದೊಂದಿಗೆ, ಸ್ವತಂತ್ರ ಹೋರಾಟಗಾರರು ಕೂಡ,  ಇದ್ದ ಬದ್ದದನ್ನೇಲ ದಾನ ಧರ್ಮ ಮಾಡುವ ಪರಿ ಕೇಳಲೇ ಬೇಡಿ   ಕಸ್ತೂರಿ ನಿವಾಸದ ರಾಜಣ್ಣ ನ ಕಥೆಯೇ ನಮ್ಮ ತಂದೆಯದು.   ಅವರು ಹೋಟೆಲ್ ಉದ್ಯಮದಲ್ಲಿ ಒಳ್ಳೆ ಹೆಸರು ಮಾಡಿದ್ದರು ಅದೇ ಸಮಯದಲ್ಲಿ ರಾಜ ಶಂಕರ್ ನಂತೆ ಒಬ್ಬರು ನಮ್ಮ ತಂದೆಯ ಪಾಲುದಾರರಾಗಿ ಬಂದು ಅಪ್ಪನ ಮನ ವೊಲಿಸಿ ಇದ್ದ ಬದ್ದದ್ದನ್ನೆಲ್ಲ ಅವನ ಹೆಸರಿಗೆ ಮಾಡಿಕೊಂಡು ಅಪ್ಪನಿಗೆ ಮೋಸ ಮಾಡಿ ಅವರು ಉದ್ಧಾರ ಆದರಂತೆ  .  ನಮ್ಮ ತಂದೆಯೇ  ಹೇಳಿದಂತೆ ಅವರು ಮಾಡಿದ  ದಾನ-ಧರ್ಮ ನಮ್ಮನ್ನು ಕಾಯುತ್ತಿದೆ'' ದೇವರು ಒಳ್ಳೆಯವರನ್ನು ಎಂದಿಗೂ ಕಾಯುತ್ತಾನೆ ಎಂದು ನಮ್ಮ ಅಪ್ಪ ಅಮ್ಮ ಯಾವಾಗಲೂ ಹೇಳುತ್ತಿದ್ದರು .  ಅದು ಖಂಡಿತ ಸತ್ಯ ನಾವೆಲ್ಲಾ ಅಂದರೆ ನನ್ನ ಅಕ್ಕಂದಿರು ಅಣ್ಣಂದಿರು ಹಾಗು ನಾನು ಕೂಡ ಈಗ ತುಂಬಾ ಸುಖವಾಗಿದ್ದೇವೆ ಅದು ನಮ್ಮ ತಂದೆ ತಾಯಿ ಮಾಡಿದ ಪುಣ್ಯದ ಫಲ.  ಅಂತಹ ತಂದೆ ತಾಯಿಗಳನ್ನು ಪಡೆದ ನಾವೇ ಧನ್ಯರು!  ನಾನು ದೇವರಿಗೆ ಸದಾ ಚಿರಋಣಿ.  ಇಂತಹ ನೂರು ನೆನಪುಗಳು , ನಮ್ಮ ಬಾಲ್ಯದ ಆ ಸಿಹಿ ಕ್ಷಣಗಳನ್ನು  ನಿಮ್ಮೊಂದಿಗೆ ಹಂಚಿ ಕೊಂಡರೆ ನನಗೂ ಅದೆಂತಹ ಆನಂದ ವಾಗುತ್ತಿದೆ ಗೊತ್ತೇ !!!  

3 comments:

  1. ನಮ್ಮ ತಂದೆ ತಾಯಿಗಳು ಮಾಡಿದ ಪುಣ್ಯದ ಕೆಲಸಗಳ ಫಲವಾಗಿಯೇ ಈವತ್ತು ನಾವು ಹೊಟ್ಟೆ ತುಂಬ ಊಟ ಮಾಡುತ್ತಿರುವುದು.
    ತಾವು ಶ್ಲೋಕಗಳ ಪಠಣವನ್ನು ಉಲ್ಲೇಖಿಸಿ ನನ್ನನ್ನು ನನ್ನ ಮುದ್ದೇನಹಳ್ಳಿ ಸಾಯಿಬಾಬಾ ಶಾಲಾದಿನಗಳಿಗೆ ಕೊಂಡೊಯ್ದಿರಿ.

    ReplyDelete
  2. ಬಾಲ್ಯದ ನೆನಪುಗಳು ಎಂತಹ ಸುಂದರ !! ಮೆಚ್ಚುಗೆ ವ್ಯಕ್ತ ಪಡಿಸಿದಕ್ಕೆ ಧನ್ಯವಾದಗಳು Bro

    ReplyDelete
  3. ನನ್ನ ಬಾಲ್ಯದ ದಿನವನ್ನು ಮೆಲುಕು ಹಾಕುವಂತೆ ಮಾಡಿದ ನಿಮಗೆ ನನ್ನ ವಂದನೆಗಳು.ತುಂಬಾ ಸರಳ,ನೇರ ನಿರೂಪಣೆ.

    ReplyDelete