Wednesday, October 7, 2015

ಸ್ಮಾರ್ಟ್ ಫೋನ್


ಇತ್ತೀಚಿಗೆ ಒಂದೆರಡು ದಿನಗಳ ಮಟ್ಟಿಗೆ  ರೈಲಿನಲ್ಲಿ  ಪ್ರಯಾಣ ಮಾಡುವ ಅವಕಾಶ ಒದಗಿ  ಬಂದಿತ್ತು .  ಯಾಕೆ ಹೀಗೆ ಹೇಳುತ್ತಿರುವೆ  ಎಂದರೆ ಅಪರೂಪಕ್ಕೆ  ಟ್ರೈನಿನಲ್ಲಿ  ಪ್ರಯಾಣ ಮಾಡುತ್ತೇವೆ ಉಳಿದಂತೆ ಬಸ್ ಪ್ರಯಾಣ ತುಂಬಾ ಇದ್ದೆ ಇರುತ್ತದೆ.   ಬೆಂಗಳೂರಿನಿಂದ  ಶಿವಮೊಗ್ಗ ಗೆ ಹೊರಡುವ ಟ್ರೈನ್ ಹೊರಡಲು ಇನ್ನು ಬಹಳ ಸಮಯ ಇತ್ತು.  ಪುಣ್ಯಕ್ಕೆ ಟ್ರೈನ್ ಕೂಡ ಖಾಲಿ ಇದ್ದಿದ್ದರಿಂದ ಸೀಟ್ ಕೂಡ ಸಲೀಸಾಗಿ ಸಿಕ್ಕಿ ಬಿಟ್ಟಿ ತ್ತು .   ನಮ್ಮ ಕಂಪಾರ್ಟ್ ಮೆಂಟಿನಲ್ಲಿ  ನಮ್ಮ ಎದುರು ಬದುರು ಒಂದು ಮುಸ್ಲಿಂ ಫ್ಯಾಮಿಲಿ ಕುಳಿತ್ತಿದ್ದರು .  ಅವರ ಇಬ್ಬರು ಮಕ್ಕಳು ಉರ್ದುವಿನಲ್ಲಿ ನನ್ನೊಂದಿಗೆ  ಮಾತನಾಡಲು ಪ್ರಯತಿಸುತ್ತಿದ್ದರು .  ನನಗೆ ಸ್ವಲ್ಪ ಮಟ್ಟಿಗೆ  ಹಿಂದಿ  ಬರುತ್ತಿದ್ದುದರಿಂದ  ಅವರೊಟ್ಟಿಗೆ  ಮಾತನಾಡುತ್ತಾ  ಪ್ರಯಾಣ  ಮಾಡಿದ್ದೆ   ಗೊತ್ತಾಗಲಿಲ್ಲ .  ಇದರ ಮಧ್ಯದಲ್ಲಿ ಕಾಫಿ  ಟೀ  , ಮದ್ದೂರ್ ವಡೆ , ಚು ರು ಮುರಿ , ಸೇವನೆ ನಡಿತಾನೆ ಇತ್ತು.   ಮಕ್ಕಳೊಂದಿಗೆ ಮಾತನಾಡುತ್ತ ಆ ಕಡೆ ಈ ಕಡೆ ಕಣ್ಣು ಹಾಯಿಸುತ್ತಿದ್ದಂತೆ ಎಲ್ಲರ ಕೈಯಲ್ಲೂ   ಸ್ಮಾರ್ಟ್ ಫೋನ್ ಕಂಡು  ಬಂತು .   ಆ ಎರದು ಮಕ್ಕಳು ಸುಮಾರು ೬ ವರುಷ ಹಾಗೂ ೯ ವರ್ಷದವರು , ೧ನೆ ಹಾಗೂ ೩ನೆ ತರಗತಿ ಅವರ ಅಪ್ಪ ಅಮ್ಮನ ಮೊಬೈಲ್ ತೆಗೆದು ಕೊಂಡು  ಗೇಮ್ಸ್ ಆಡ್ತಾ ಇದ್ದರು.                          ಇನ್ನು ಒಂದು ತಮಾಷೆ ಅಂದರೆ ಅವರ ಅಪ್ಪ ಅಮ್ಮ ನೋಡಲಿಕ್ಕೆ ಅನಕ್ಷ ರಸ್ತರು  ಎನಿಸುತ್ತಿತ್ತು .  ಇದು ಹೇಗೆ  ತಿಳಿಯಿತು ಎಂದರೆ ಅವರಿಗೆ ಕಾಲ್ ಬಂದಾಗ ಅಟೆಂಡ್ ಮಾಡಲಿಕ್ಕೆ ಗೊತ್ತಾಗುತ್ತಿರಲಿಲ್ಲ !!  ಅ ಮಕ್ಕಳೇ ಗ್ರೀನ್ ಕಲರ್ ಬಟನ್   swipe   ಮಾಡಿ ಕೊಟ್ಟು ಮಾತನಾಡಲು ಹೇಳಿ ಅವರೇ ಕಾಲ್ ಎಂಡ್ ಮಾಡಿ ನಂತರ ಆಟ ಆಡಲು ಶುರು ಮಾಡುತ್ತಿದ್ದರು .   ಆಗ ಕೇಳಿದೆ ಯಾಕೆ ಅಪ್ಪ ಅಮ್ಮನಿಗೆ ಫೋನ್ operate  ಮಾಡಲು  ಬರುವುದಿಲ್ಲವೇ ಎಂದು,  ಆ ಮಕ್ಕಳು   ನಹಿ ಜಾನತೇ ಅಂತ ಹೇಳಿದರು .  ಅದೇ ರೀತಿ ಟ್ರೈನಿನಲ್ಲಿ  ಕಡ್ಲೆಕಾಯಿ  ಮಾರುವ ಹೆಂಗಸು , ಸುಮಾರು ಜನ  ತಮಗೆ ಫೋನ್ ಉಪಯೋಗಿಸಲು ಬರದಿದ್ದರೂ  ಸ್ಮಾರ್ಟ್ ಫೋನ್ ನ ಬಳಕೆ ಎಷ್ಟರ ಮಟ್ಟಿಗೆ ಆವರಿಸಿದೆ ಎಂದು ಟ್ರೈನಿನ  ಪ್ರಯಾಣದಲ್ಲಿ ನಮಗೆ ಅರಿವಾಯಿತು .    ಒಬ್ಬಾಕೆ  ಹೂ ಕೂಡ ಮಾರಿಕೊಂಡು ನಮ್ಮ ಕಂಪಾರ್ಟ್  ಮೆಂಟಿನಲ್ಲಿ ಓಡಾಡುತ್ತಿದ್ದಳು . ಆಕೆ  ಫೋನಿನಲ್ಲಿ ಮಾತನಾಡುತ್ತಾ  ಕರೆ ಕಟ್ ಆಯಿತು.   ಆಕೆ ನನ್ನ ಮಗಳಿಗೆ ಕಾಲ್ ಹಚ್ಚಿಕೊಡಿ  ಎಂದು ತನ್ನ ಫೋನ್ ಕೊಟ್ಟಳು .    ಆಕೆಯ  ಮಗಳ ಹೆಸರು ಪಾರ್ವತೀ ಎಂದು ಕಾಂಟ್ಯಾಕ್ಟ್ಸ್  ಇಂದ ತೆಗೆದು ಅವಳ ಮಗಳಿಗೆ ಕರೆ ಮಾಡಿ ಕೊಟ್ಟೆ  .   ಅವಳು ಮಾತನಾಡಿದ  ನಂತರ ಅವಳ ಅಳಿಯನೊಡನೆ  ಮಾತನಾಡಲು ಮತ್ತೆ ನನ್ನ ಕೈಗೆ ಫೋನ್ ಕೊಟ್ಟು   ಚಂದ್ರು ಎಂದು ಹೇಳಿದಳು .  ಮತ್ತೆ ಫೋನಾಯಿಸಿ ಅವಳಿಗೆ ಕೊಟ್ಟೆ   ಕಾಲ್ ಮುಗಿದ ನಂತರ  ಒಂದು  ಥ್ಯಾಂಕ್ಸ್ ಹೇಳಲು ಮರೆಯಲಿಲ್ಲ ಆ ಹೂವಾಡಗಿತ್ತಿ ,  ಅಮ್ಮಾವ್ರೇ  ತುಂಬಾ ಥ್ಯಾಂಕ್ಸ್ ಎಂದು ಬಹಳ ಮುಗ್ದತೆ ಇಂದ  ಹೇಳಿದಳು .  ಆಗ ನನಗಾದ ಆನಂದ ಅಷ್ಟಿಷ್ಟಲ್ಲ  !   ಏನೇ ಆದರೂ  ಈ ಸ್ಮಾರ್ಟ್  ಫೋನ್ ಹಾವಳಿ ಎಲ್ಲೆಲೂ   ಹರಡಿ ತನ್ನ ಇರುವಿಕೆಯನ್ನು ರಾರಾಜಿಸುತ್ತಿದೆ  !    ಒಂದು ಸಮೀಕ್ಷೆಯ ಪ್ರಕಾರ  ಈ ೨೦೧೫ ರ  ಕೊನೆಗೆ ೨,೦೦೦ ಬಿಲಿಯನ್   users  ಇದ್ದಾರೆ ಎಂದು ತಿಳಿದು ಬಂದಿದೆ !!!!!ಜೈ  ಸ್ಮಾರ್ಟ್ ಫೋನ್