Friday, May 15, 2015

ಈ ಜಗವೆಂಥಾ ಸುಂದರ !!








ಸ್ನೇಹಿತರೆ  ನನ್ನ ವಿಚಾರಧಾರೆಗಳು ಮತ್ತೆ ನನ್ನನ್ನು ನನ್ನ ಬಾಲ್ಯಕ್ಕೆ ಕರೆದು ಕೊಂಡು ಹೋಗುತ್ತಿದೆ 

ನಮ್ಮ ಬಾಲ್ಯದಲ್ಲಿ ಆರ್ಥಿಕವಾಗಿ  ಸುಖ ಕಾಣದಿದ್ದರೂ'  ಪ್ರೀತಿಯ ಸುಖ ಉಂಡು ಬೆಳೆದಿದ್ದೆವು.  ಕಷ್ಟದಲ್ಲಿ ಬೆಳೆದಿದ್ದರೂ ನನ್ನ ತಾಯಿ ''ಕಷ್ಟವೇನೆ ಇದ್ದರೂ ಬಾಳಿ ಮರೆತು'' ಎಂದು ನಮ್ಮನು ಪ್ರತಿ ದಿನ ಮಂತ್ರ , ಭಜನೆ , ಶ್ಲೋಕಗಳನ್ನು  ಬಾಯಿ ಪಾಠ ಮಾಡಿಸುವ ಮುಖಾಂತರ ನಮ್ಮಲ್ಲಿ ಅದನ್ನು ತಪ್ಪದೆ ರೂಡಿಯಲ್ಲಿ ಇಟ್ಟಿದ್ದರು.  ದೇವರ ತಲೆ ಮೇಲೆ ಹೂ ತಪ್ಪಿದ್ದರೂ ಬಹುಶಃ  ನಮ್ಮ ದೈನಂದಿನ ಭಜನೆ, ಶ್ಲೋಕ ಪಠಣ ಯಾವುದೇ ಕಾರಣಕ್ಕೂ ತಪ್ಪದೆ ಅವ್ಯಾಹತವಾಗಿ ನಡೆಯುತ್ತಿತ್ತು .      ಮಂತ್ರ ಶ್ಲೋಕಗಳ ಪಠಣದಿಂದ ಮನಸ್ಸು ಹುರುಪು ಉಲ್ಲಾಸಗಳಿಂದ ಮತ್ತು  ತೇಜಸ್ಸಿನಿಂದ ತುಂಬಿರುತ್ತಿತ್ತು . ಆ ದಿನಗಳಲ್ಲಿ ನನಗೆ ತಿಳಿದಂತೆ ಕೊಲೆ, ಸುಲಿಗೆ, ಅತ್ಯಾಚಾರ ಪ್ರಕರಣಗಳು ಬಹಳ ವಿರಳ ಅಥವಾ ಇಲ್ಲವೇ ಇಲ್ಲ ಎಂಬಂತೆ  ನಮ್ಮ ಮುಗ್ದ ಮನಸ್ಸುಗಳಲ್ಲಿ ನೆಲೆ ಮಾಡಿತ್ತು .  ಯಾಕೆಂದ್ರೆ ನಮ್ಮ ತಂದೆ ತಾಯಿಗಳು ನಮ್ಮ ಮನಸ್ಸುಗಳಿಗೆ ಧಾರೆ ಏರೆದಿದ್ದ ಒಳ್ಳೆಯ ಅಂಶಗಳು. ಮಂತ್ರ ಶ್ಲೋಕಗಳು ನಮ್ಮ ಮನಸ್ಸುಗಳಿಗೆ ದೇವರಲ್ಲಿ,  ಗುರು ಹಿರಿಯರಲ್ಲಿ, ಮಹಿಳೆಯರಲ್ಲಿ  ಒಳ್ಳೆಯ ಭಾವನೆ  ಮುಡುವಂತೆ ಮಾಡಿತ್ತು .   ''ಒಳ್ಳೆಯ ಗುಣಗಳಿಂದ ಮನುಷ್ಯ ಮನುಷ್ಯ ನಾಗುತ್ತಾನೆ ಹಾಗೂ  ಕೆಟ್ಟ ಗುಣಗಳಿಂದ ಮನುಷ್ಯ ಮನುಷ್ಯ ರೂಪದ ರಾಕ್ಷಸನಾಗುತ್ತಾನೆ'' ಎಂದು ನನ್ನಮ್ಮ ಯಾವಾಗಲು ಹೇಳುತ್ತಿದ್ದರು.   ಯಾವುದೇ ಕಾರಣಕ್ಕೆ ನಾವು ಮಕ್ಕಳು ಕೋಪ ಮಾಡಿ ಕೊಂಡರೂ ಸಹಾ ನನ್ನಮ್ಮ ಕೋಪ ಬಂದಾಗ ನಮ್ಮಲ್ಲಿ ರಕ್ಕಸ ಗುಣ ಗಳು ಬರುತ್ತವೆ ಎಂದು ಹೇಳಿದ್ದ ನೆನಪು ನನಗಿನ್ನೂ ನನ್ನ ನೆನಪಿಂದ ಮಾಸಿಲ್ಲ.   ಅಂತಹ ಸಹನಾಮಯಿ ಆಕೆ.   ಆಹಾ !  ಬಾಲ್ಯದ ನೆನಪುಗಳು ಎಂತಹ ಸುಂದರ !!  ಮತ್ತೆ ಬಾಲ್ಯಕ್ಕೆ ಹೋಗಿ ಬಂದಷ್ಟೇ ಖುಷಿ ಕೊಡುತ್ತೆ 'ಆ ದಿನಗಳು'   ಆದರೆ ಈಗಿನ ದಿನಗಳಲ್ಲಿ  ಎಲ್ಲಿ ನೋಡಿದರೂ  ಕೊಲೆ, ಸುಲಿಗೆ, ಕಳ್ಳತನ, ಅತ್ಯಾಚಾರ, ಅನಾಚಾರದ ಬೀಡಾಗಿದೆ.  ಮಕ್ಕಳು ದೇವರ ಸಮಾನ ಎನ್ನುತ್ತಿದ್ದ ದಿನಗಳೆಲ್ಲಿ ಹೋದವು ?? ಈಗ ಮಕ್ಕಳು , ಹಸುಗೂಸುಗಳ ಮೇಲೂ ಅತ್ಯಾಚಾರ ಪ್ರಕರಣಗಳು ದಿನೇ ದಿನೇ ಹೆಚ್ಚುತಲೇ ಇವೆ.  ಓ ದೇವರೇ ಇಂತಹ ಅನಾಚಾರಗಳಿಗೆ ಕೊನೆ ಎಂದು??   ಇಂತಹ ಅನಾಚಾರಿಗಳಿಗೆ ನೀನೆ ಒಳ್ಳೆಯ ಬುದ್ದಿ ಕೊಟ್ಟು ಅವರಲ್ಲಿ ಒಳ್ಳೆಯ ಗುಣಗಳು ಮೂಡುವಂತೆ ಮಾಡು ಇದು ನನ್ನ ಸವಿನಯ ಕೋರಿಕೆ.  ಓ ದಯಾಮಯ  ಭಗವಂತ ನಿನ್ನಲ್ಲಿ ನನ್ನ ಒಂದೇ ಕೊನೆ ಅಸೆ ಎಂದರೆ  ಎಲ್ಲರೂ ಒಳ್ಳೆಯವರಾಗ ಬೇಕು, ಈ ಪ್ರಪಂಚದಲ್ಲಿ ಕೆಟ್ಟವರೆ ಇಲ್ಲದಂತೆ ಮಾಡು.  ಅಗ ಈ ಜಗವೆಂಥಾ  ಸುಂದರ !!  ಒಹ್ ನನಗೆ ಅಣ್ಣಾವ್ರ ಹಾಡು ನೆನಪಿಗೆ ಬಂತು '' ಈ ಲೋಕವೆಲ್ಲ  ನೀನೆ ಇರುವಾ ಪೂಜಾ ಮಂದಿರ, ನಾ ಕಾಣುತ್ತಿರುವ ನೋಟವೆಲ್ಲಾ ಸತ್ಯಾ ಸುಂದರ!! ವಾಹ್  ಆ ದಿನಗಳು ಬಹು ಬೇಗ ನೋಡುವಂತಾಗಲಿ !!!

1 comment:

  1. ನನ್ನ ನೆಚ್ಚಿನ ಚಿತ್ರ ಗೀತೆ ಇದು. ಎಲ್ಲರೂ ಒಳ್ಳೆಯವರಾಗಲಿ ಎಂಬ ತಮ್ಮ ಮಾತು ನೆರವೇರಲಿ.

    ReplyDelete