Tuesday, May 26, 2015
kavyamayee: ಮುಂದೇನು ???
kavyamayee: ಮುಂದೇನು ???: ನಾಳೆ ಏನಾಗುವುದು ಎಂದು ಯಾರೂ ಅರಿಯರು ಇಂದು ಏನಾಗುವುದು ಎಂಬ ಕುರುಹು ಅರಿಯರು ಇಂದು-ನಾಳೆಗಳ ಮಧ್ಯೆ ಮುಂದಿನ ಜೀವನ ಅಗೋಚರ ! ಸೀತಾ ಮಾತೆಯಂತಹವರ...
Monday, May 25, 2015
ಮುಂದೇನು ???
ನಾಳೆ ಏನಾಗುವುದು ಎಂದು ಯಾರೂ ಅರಿಯರು
ಇಂದು ಏನಾಗುವುದು ಎಂಬ ಕುರುಹು ಅರಿಯರು
ಇಂದು-ನಾಳೆಗಳ ಮಧ್ಯೆ ಮುಂದಿನ ಜೀವನ ಅಗೋಚರ !
ಸೀತಾ ಮಾತೆಯಂತಹವರೆ ತನ್ನ ಬದುಕು ಕಾಡಿನಲ್ಲಿ
ಅದು ಕೂಡ ತುಂಬು ಗರ್ಭಿಣಿಯನ್ನು ಶ್ರೀ ರಾಮಚಂದ್ರ
ಕಾಡಿಗಟ್ಟ ಬಹುದು ಎಂಬ ಒಂಚೂರು ಸುಳಿವು ಇಲ್ಲದೆ
ದಿಕ್ಕೇ ತೋಚದದವಳಂತೆ ತನ್ನ ಬಸಿರು-ಬಾಣಂತನ ವನ್ನು
ಶ್ರೀ ವಾಲ್ಮೀಕಿ ಗಳ ಆಶ್ರಮದಲ್ಲಿ ತನ್ನ ಮಕ್ಕಳ
ಲಾಲನೆ-ಪಾಲನೆ ಪೋಷಣೆಯಲ್ಲಿ
ಲವ-ಕುಶರೀರ್ವರ ಜೊತೆ ಕಳೆದಳು
ದ್ರುಪದನ ಮಗಳು ದ್ರೌಪದಿ ಸಹಾ ತಾನು
ಪಂಚ-ಪಾಂಡವರ ಒಬ್ಬಳೇ ಮಡದಿ ಆಗುತ್ತೇನೆಂದು
ಕನಸು-ಮನಸ್ಸಿನಲ್ಲೂ ಅರಿತವಳಲ್ಲ ಪಾಪ
ಪೌರಾಣಿಕ ಯುಗದಲ್ಲೂ ಕುರುಹು ನೀಡದ
ಇಂದು-ನಾಳೆಗಳು ನಮಗೆಲ್ಲಿಯ ಮುನ್ಸೂಚನೆ ನೀಡುತ್ತದೆ?
ಆದ್ದರಿಂದ ಇಂದು-ಇಂದಿಗೆ; ನಾಳೆ-ನಾಳೆಗೆ
ಮುಂದು ಸಹಾ ನಮ್ಮದೇ ಎಂದು
ಶಾಂತ-ಚಿತ್ತತೆ ಇಂದ 'ಜೀವನವ'
ಜೀವ ಇರುವವರೆಗೂ ಸವೆಸಬೇಕು !
ಇದುವೇ ಜೀವ ; ಇದು ಜೀವನ
Thursday, May 21, 2015
ಕಪ್ಪು ಹಣ !
ಈ ಕಪ್ಪು ಹಣ ಹೊಂದಿರುವವರ ಬಗ್ಗೆ ತುಂಬಾ ಕೇಳಿದ್ದೇವೆ. ಶ್ರೀಮಂತರಲ್ಲಿ ಕಪ್ಪು ಹಣ ಯಾಕೆ ಇರುತ್ತೆ ?? ಅವರ ಹಣ ಯಾಕೆ ಕಪ್ಪು ಬಣ್ಣದ್ದಾಗಿರುತ್ತದೆ ಎಂದು ಎಷ್ಟೋ ವರುಷಗಳ ಹಿಂದೆ ನನ್ನ ಮಗ ಪುಟ್ಟವನಾಗಿದ್ದಾಗ ಕೇಳುತ್ತಿದ್ದ . ಅಗ ನಾನು ಅವನಿಗೆ ಅರ್ಥ ವಾಗುವಂತೆ ಹೇಳಲು ಪ್ರಯತ್ನ ಪದುತ್ತಿದ್ದೆ. ಆದರೂ ಅವನಿಗೆ ನನ್ನ ಉತ್ತರ ಅಷ್ಟೊಂದು ಕ್ಲಿಯರ್ ಇರ್ತಾ ಇರಲಿಲ್ಲ . ಅದೇ ವಿಷಯದ ಬಗ್ಗೆ ಮಾತಾಡ್ತಾ ಹಳೆಯದನ್ನು ಮೆಲುಕು ಹಾಕ್ತಾ ಇದ್ದೆವು.
ನಿನ್ನೆ ಹೀಗೆ ಮಾತಾಡ್ತಾ ನನ್ ಮಗ ಹೇಳ್ತಾ ಇದ್ದ ''ಅಮ್ಮ ನಮ್ ನೋಟ್ಸ್ (ಇಂಡಿಯನ್ ಕರೆನ್ಸಿ ) ಮೇಲೆ ಎಕ್ಷ್ ಪಾಯ್ರಿ ಡೇಟ್ಸ್ ಇದ್ದಿದ್ದರೆ
ಬಹುಷಃ ಯಾರೂ ಸಹ ದುಡ್ಡನ್ನ ಕೋಟಿ ಕೋಟಿ ಕೂಡಿಡ್ತಾ ಇರ್ಲಿಲ್ಲ , ಕಪ್ಪು ಹಣ ಹೊಂದಿರ್ತಿರ್ಲಿಲ್ಲ ಆಲ್ವಾ ಅಂದ smile emoticon ನನಗೆ ಹಾ !! ಹೌದಲ್ಲ
ನಮ್ ಸರ್ಕಾರಕ್ಕೆ ಇದ್ ಯಾಕೆ ಹೊಳಿಲಿಲ್ಲ ಅನ್ನಿಸ್ತು. ಭೇಷ್ ಕಣೋ ಮಗನೆ ಅಂತ ಅವನ ಬೆನ್ನು ತಟ್ಟಿದೆ like emoticon ಹೌದು ನೋಟ್ಸ್ ಗಳು ಎಕ್ಷ್
ಪೈರ್ಯ್ ಆದ್ರೆ ಹಳೆ ಹರಿದ ನಂಬರ್ ಮಾಸಿದ ನೋಟ್ಸ್ ಗಳ ಚಲಾವಣೆಗೆ ಪಿರಿ ಪಿರಿ ಉಂಟಾಗುವುದಿಲ್ಲ. ಅಟ್ ಲೀಸ್ಟ್ ೫-೧೦ ಇಯರ್ಸ್
ಇದ್ದರೆ ಒಳ್ಳೆಯದು like emoticon
''ಅತಿಥಿ ದೇವೋ ಭವ ''
ನನ್ನ ನೆನಪಿನಂಗಳದಿಂದ ೭ ::
ನಾವೆಲ್ಲಾ ಶಾಲೆಯಲ್ಲಿ ಓದುತ್ತಿರುವಾಗ ಹಿರಿಯರು ಯಾರೇ ಮನೆಗೆ ಬರಲಿ ನಮ್ಮ ತಂದೆ ನಮ್ಮನ್ನೆಲ್ಲ ಅವರಿಗೆ ಪರಿಚಯಿಸುತ್ತಿದ್ದ ರೀತಿಯೇ ಎಷ್ಟು ಅದ್ಭುತ ಗೊತ್ತೇ . ಯಾರಾದ್ರೂ ಪರಿಚಯಸ್ತರು, ಅಪ್ಪನ ಸ್ನೇಹಿತರು ಮನೆಗೆ ಬಂದಾಗ ನಮ್ಮಮ್ಮನನ್ನು ಲಕ್ಷ್ಮಿ ಇಲ್ಲಿ ಸ್ವಲ್ಪ ಬಾ ಎಂದಾಗ ಅಮ್ಮ ಮೈ ತುಂಬಾ ಸೆರಗು ಹೊದ್ದು ಪಡಸಾಲೆಗೆ ಹೋಗಿ ನಿಲ್ಲುತ್ತಿದ್ದರು. ಅಗ ನಮ್ ತಂದೆ ಬಂದವರಿಗೆ ''ಈ ಕೆ ನನ್ನ ಧರ್ಮ ಪತ್ನಿ ಎಂದು ಪರಿಚಯಿಸುತ್ತಿದ್ದರು ಆಗ ಅಮ್ಮ ಬಂದವರಿಗೆ ಕೈ ಜೋಡಿಸಿ ನಮಸ್ತೆ ಎಂದು ಪ್ರತಿಕ್ರಿಯಿಸುತ್ತಿದ್ದರು. ನಂತರ ಮಕ್ಕಳನ್ನು ಕರೆಯಲು ಅಮ್ಮನಿಗೆ ಹೇಳುತ್ತಿದ್ದರು ಅಮ್ಮ ನಮ್ಮನ್ನು ಅಪ್ಪ ಕರೆಯುತ್ತಿದ್ದಾರೆ ಎಂದಾಗ ನಾವು ಹೊರಗಡೆ ಪಡಸಾಲೆಗೆ ಬಂದು ಸಾಲಾಗಿ ನಿಲ್ಲುತ್ತಿದ್ದೆವು. ಆಗ ಅಪ್ಪ ಅವರಿಗೆ ನಮ್ಮನ್ನೆಲ್ಲ ಹೆಸರು ಹೇಳಿ ನಾವು ಏನು ಓದುತ್ತಿದೇವೆ ಎಂದು ನಮ್ಮ ಬಾಯಿಂದ ಕೇಳಿ ತಿಳಿಸುತ್ತಿದ್ದರು. ನಂತರ ''ಆಯಿತು ಮಕ್ಕಲ್ಲೇ ಈಗ ಎಲ್ಲರು ಒಳಗೆ ಹೋಗಿ ಓದಿ ಕೊಳ್ಳಿ ಎಂದು ಹೇಳಿ ನಮ್ಮನ್ನ ಒಳಗೆ ಕಳುಹಿಸಿ ಅವರು ಸ್ನೇಹಿತರೊಡನೆ ಲೋಕಾಭಿರಾಮವಾಗಿ ಮಾತನಾದುವಷ್ಟರಲ್ಲಿ ಅಮ್ಮ ಅವರಿಗೆ ಉಪ್ಪಿಟ್ಟು ಕಾಫಿ ತಯಾರಿಸಿ ಬಂದವರಿಗೆ ಆತಿಥ್ಯ ನೀಡಿಯೇ ಕಲುಹಿಸುತ್ತಿದ್ದರು. ಯಾರೇ ಮನೆಗೆ ಬಂದರೂ ಅವರಿಗೆ ಏನಾದರೂ ನೀಡಿ ಕಡೆ ಪಕ್ಷ ಒಂದು ಲೋಟ ಕಾಪಿ ಕೊಟ್ಟೆ ಕಳುಹಿಸ ಬೆಕು. ಬಂದವರನ್ನು ಹಾಗೆ ಕಳುಹಿಸ ಬಾರದು ಎಂದು ನಮ್ಮ ತಂದೆ-ತಾಯಿ ನಮಗೆ ಕಲಿಸಿ ಕೊಟ್ಟ ಪಾಠ ನಾವು ಈಗಲೂ ನಡೆಸಿ ಕೊಂಡು ಬರುತ್ತಿದ್ದೆವೆ. ಬಂದವರನ್ನ ಹಾಗೆ ಕಳುಹಿಸಬಾರದು ಅವರು ಸಂಕೋಚದಿಂದ ಬೇಡ ಅಂದರೂ ನಮ್ಮ ಆತಿಥ್ಯ ನೀಡಿ ಅವರನ್ನು ಸತ್ಕರಿಸಬೇಕು ಎಂದು ಅಪ್ಪ ಅಮ್ಮ ಹೇಳ್ತಾ ಇದ್ದದ್ದು ಈಗಲೂ ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿದೆ. ಆದರೆ ಇತ್ತೀಚಿಗೆ ಈ ರೀತಿ ಆತಿಥ್ಯ ಅತಿ ವಿರಳ ಎನ್ನ ಬಹುದು. ಕೆಲವರಂತೂ ಗೇಟಿನಲ್ಲಿ ಮಾತನಾಡಿಸಿ ಸಾಗ ಹಾಕುತ್ತಾರೆ. ಮತ್ತೆ ಕೆಲವರು ಮಾತಿನಲ್ಲಿಯೇ ಹೊಟ್ಟೆ ತುಂಬಿಸಿ ಕಳುಹಿಸುತ್ತಾರೆ. ಮತ್ತೂ ಕೆಲವರು ಕಾಪಿ ಆಯ್ತಾ, ತಿಂಡಿ ಆಯ್ತಾ, ಎಂದು ಬಾಗಿಲಿನಲ್ಲಿ ವಿಚಾರಿಸಿ ಸಾಗ ಹಾಕುತ್ತಾರೆ. ''ಅತಿಥಿ ದೇವೋ ಭವ '' ಅನ್ನೋರು ಹಿಂದಿನ ಕಾಲದ ಸುಸಂಸ್ಕೃತ ಜನ. ಆದರೆ ಈಗೆಲ್ಲಾ ''ಅತಿಥಿ ದೆವ್ವೊ ಭವ '' ಆಗಿ ಹೋಗಿ ಬಿಟ್ಟಿದೆ. ಯಾಂತ್ರಿಕ ಬದುಕಿನಲ್ಲಿ ಈಗಿನ ಜನ ಪಾಪ ತಮ್ಮದೇ ತಮಗೆ ಅಂದು ಕೊಳ್ಳುತ್ತಿರುತ್ತಾರೆ ಇನ್ನು ಬಂದು ಹೋಗುವವರಿಗೆ ಮಾಡಿ ಹಾಕುವುದು ಅವರಿಗೂ ಕಷ್ಟ !! ಹಿಂದೆಲ್ಲಾ ಪಾಪ ಅಮ್ಮ ಹಸಿ ಸೌದೆ , ಬೆರಣಿ , ಇಟ್ಟು ಊದುಕೊಳವೆ ಇಂದ ಊದಿ ಊದಿ ಓಲೆ ಹೊತ್ತಿಸಿ ೭-೮ ಜನರ ಅಡುಗೆ ಮಾಡುವುದಲ್ಲದೆ ಬಂದು ಹೋಗುವ ಅತಿಥಿಗಳನ್ನು ನಗು ಮೊಗದಿಂದ ಸ್ವಾಗತಿಸಿ ಅವರ ಸತ್ಕಾರ ಮಾಡಿ ಅಪ್ಪನಿಂದ ಕೂಡ ಭೇಷ್ ಅನ್ನಿಸಿಕೊಳ್ಳುತ್ತಿದ್ದರು. ಈಗ ಗಂಡ ಯಾರಾದರು ಒಬ್ಬ ಸ್ನೇಹಿತನನ್ನೋ , ನೆಂಟನನ್ನೋ ಕರೆದು ಕೊಂಡು ಬಂದರೆ ಹೆಂಡತಿ ''ರೀ ಸ್ವಲ್ಪ ಇಲ್ಲಿ ಬರ್ತೀರಾ ಎಂದು ಅಡುಗೆ ಕೋಣೆಗೆ ಕರೆದು ಆಫೀಸ್ ನಿಂದ ಬಂದು ಸುಸ್ತಾಗಿ ಒಂದು ಲೋಟ ಕಾಫಿ ಕುಡಿದು ಟಿವಿ ನೋಡ್ತಾ relaax ಮಾಡೋಣ ಅಂದ್ರೆ ಇದ್ಯಾರೋ ವಕ್ಕರಿಸಿ ಕೊಂಡರು ಯಾರ್ರೀ ಇದು , ಇದೆ ಕೊನೆ ಇನ್ನೊದು ಸಾರಿ ಯಾರನ್ನದ್ರೂ ಕರೆದು ಕೊಂಡು ಬಂದ್ರೆ ನಾನೇ ಹೋಟೆಲ್ಗೆ ಹೋಗಿ ಕಾಫಿ ಕುಡ್ಕೊಂಡು ಬರ್ತೇನೆ , ನೀವೇ ಅವರಿಗೆ ಕಾಫಿ ಮಾಡಿ ಕುಡ್ಸಿ '' ಎಂದು ಗೊಣಗಿ ಕೊಂಡು ಕಾಫಿ ಲೋಟ ತಂದು ಸ್ನೇಹಿತನ ಮುಂದೆ ಕುಕ್ಕುತ್ತಾಳೆ. ಆತ ಇನ್ನೆಂದೂ ಇವರ ಮನೆ ಕಡೆ ತಲೆ ಹಾಕಿ ಮಲಗ ಬಾರದು. ಇದು ''ಅತಿಥಿ ದೆವ್ವೊ ಭವ '' ಅಲ್ಲದೆ ಇನ್ನೇನು ಹೇಳಿ ??
Tuesday, May 19, 2015
ನನ್ನ ನೆನಪಿನಂಗಳದಿಂದ 6
ನನ್ನ ನೆನಪಿನಂಗಳದಿಂದ 6 ::
ನನ್ನ ಸ್ಮೃತಿ ಪಟಲದ ಪುಟಗಳನ್ನ ತಿರುವಿ ಹಾಕುತ್ತಿರುವಾಗ ಮತ್ತೊಂದು ಘಟನೆ ನೆನಪಾಯಿತು. ಅದೇನಪ್ಪ ಅಂದ್ರೆ ಆಗೆಲ್ಲ ಈಗಿನ ಹಾಗೆ ೩-೪ ವರುಷ ಗಳಿಗೆಲ್ಲ ಡೇ ಕೇರ್ , L K G - U K G ಇವೆಲ್ಲಾ ಇರುತ್ತಲೇ ಇರಲಿಲ್ಲ. ನಾವಿನ್ನು ಅಮ್ಮನ ತೋಳಿನಲ್ಲಿ ಬೆಳೆಯುತ್ತಿದ್ದೆವು, ಅಕ್ಕ ಅಣ್ಣಂದಿರು ಮುದ್ದಿನಲ್ಲಿ, ಅಪ್ಪ - ಅಮ್ಮನ ತೋಳಿನಲ್ಲಿ ಅದೆಷ್ಟು ಆನಂದ ಕಂಡಿದ್ದೇವೆ . ಈಗಿನ ಮಕ್ಕಳನ್ನು ೩ ವರ್ಷಕ್ಕೆಲ್ಲಾ ಬೇಬಿ ಸಿಟ್ಟಿಂಗ್ , ನಂತರ ಎರಡೆರಡು KG ಪಾಸಾದ ನಂತರ ಮೊದಲನೇ ತರಗತಿ ಗೆ ಸೇರಿಸಿಕೊಳ್ಳುತ್ತಾರೆ. ನಾವೆಲ್ಲಾ ಒಂದೇ ಸಲ ಮೊದಲನೇ ತರಗತಿ ಗೆ ಸೇರಿದ್ದು . ಸ್ಲೇಟು ಬಳಪ ಅಷ್ಟೇ ಹಿಡಿದು ಶಾಲೆಗೇ ಹೊಗುತ್ತಿದ್ದೆವು. ಸಮ ವಸ್ತ್ರ ನೀಲಿ ಬಣ್ಣದ ಲಂಗ ಬಿಳಿ ಬ್ಲೌಸ್ ತೊಟ್ಟರೆ ಅಷ್ಟೇ ಸಾಕು . ಸರ್ಕಾರಿ ಶಾಲೆ ಆದುದರಿಂದ ಉಚಿತ ಪ್ರವೇಶ ಇತ್ತು. ಈಗಿನ ಮಕ್ಕಳಿಗೆ L K G - U K Gಗಳಿಗೆ ಒಳ್ಳೆ ಶಾಲೆಗೇ ಸೇರಿಸಲು ಲಕ್ಷ ಲಕ್ಷ ತೆ ರ ಬೆಕಾಗುತ್ತದೆ. ಈಗ ವಿಧ್ಯಾಭ್ಯಾಸ ಮಾರುಕಟ್ಟೆಯಲ್ಲಿ ಮಾರಾಟ ಆಗುವ ವಸ್ತುವಿನಂತೆ , ಪೋಷಕರು ಒಳ್ಳೆ ಶಾಲೆಗಳನ್ನ ಹುಡುಕಿ ಹುಡುಕಿ ಅದರ ಬಗ್ಗೆ ಅವರಿವರಿಂದ ತಿಳಿದು ಕೊಂಡು ನಂತರ ಮಕ್ಕಳನ್ನು ಶಾಲೆಗೆ ಸೆರಿಸುತ್ತರೆ. ಮತ್ತೆ ಅವರಿಗೆ ಶಾಲಾ ವಾಹನದ ವ್ಯವಸ್ತೆ ಮಾಡಬೇಕು. ತದ ನಂತರ ಪೋಷಕರಿಬ್ಬರೂ ದುಡಿಯುತ್ತಿದ್ದರೆ ಇನ್ನೊ೦ದು ರೀತಿ ಪೀಕಲಾಟ ಮಕ್ಕಳನ್ನು ಒಳ್ಳೆ ಬೇಬಿ ಸಿಟ್ಟಿಂಗ್ ಹುಡುಕಿ ಅವರ ಕೇರ್-ಟೆಕರ್ಸ್ ಬಗ್ಗೆ ಗಮನ ಇಡ ಬೆಕು. ಒಂದಾ ಎರಡಾ ಈಗಿನ ಮಕ್ಕಳ ಸಮಸ್ಯೆ ಹೇಳ ತೀರದು. ನಮ್ಮ ಕಾಲದಲ್ಲಿ ಈ ರೀತಿ ಅತ್ಯಾಚಾರ -ದುರಾಚಾರ ಇರಲಿಲ್ಲ. ನಾವೆಲ್ಲ ೪-೫ ಮೈಲಿಗಳನ್ನು ನಡೆದು ಕೊಂಡೆ ಹೋಗಿ ನಡೆದು ಕೊಂಡೆ ಬರುತ್ತಿದ್ದೆವು. ಸ್ನೇಹಿತೆಯರೊಡನೆ ಮಾತನಾಡುತ್ತ ಶಾಲೆಗೆ ಹೊರಡುವುದೇ ಒಂದು ಸಡಗರ. ಅವರು ರೆಡಿ ಯಾಗಿ ನಮ್ಮ ಮನೆ ಮುಂದೆ ಬಂದು ಕರೆಯುತ್ತಿದ್ದರು ಅಗ ಅಮ್ಮನಿಗೆ ''ಅಮ್ಮ ಹೋಗಿ ಬರ್ತೀವಿ' ಎಂದು ಹೇಳದೆ ಹೊರಗಡೆ ಗೆ ಅಡಿ ಇಟ್ಟಿದ್ದೆ ಇಲ್ಲ. ಅದು ನಮ್ಮ ಮನೆಯಲ್ಲಿ ಚಿಕ್ಕಂದಿನಿಂದ ಎಲ್ಲಿಗೇ ಹೊರಟರು ಎಲ್ಲರಿಗು ಹೇಳಿ ಹೋಗುವ ಪದ್ಧತಿ. ಅಮ್ಮ ಹೋಗ್ಬರ್ತೀನಿ, ಅಪ್ಪ ಹೋಗ್ಬರ್ತೀನಿ ಇದು ವಾಡಿಕೆ. ಅರೆರೆ ಇದೇನು ನಾನು ನನ್ನ ಬಾಲ್ಯದ ಬಗ್ಗೆ ಮಾತನಾಡುತ್ತ ಮಾತನಾಡುತ್ತ ನನ್ನನ್ನು ಶಾಲೆಗೆ ಸೇರಿಸಿದ ದಿನವನ್ನು ಹೇಳುವುದೇ ಮರೆತೇ ಬಿಟ್ಟೆ . ಸರಿ ನನಗಾಗ ಆರು ವರುಷ ಶಾಲೆಗೆ ಸೇರಿಸುವ ದಿನ ಬಂದೆ ಬಟ್ಟಿತು !! ಅಮ್ಮ ದೇವರ ಮುಂದೆ ನನಗೆಂದು ತಂದ ಹೊಸ-ಬಳಪ ಸ್ಲೇಟು ಅನ್ನು ಇಟ್ಟು , ಮೊದಲಿಗೆ '' ಶುಕ್ಲಾಂ ಬರದರಂ ವಿಷ್ಣುಂ ಶಶಿವರಣಂ ಚತುರ್ಭುಜಂ ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಜ್ನೋಪ ಶಾಂತಯೇ'' , ''ಸರಸ್ವತಿ ನಮಸ್ತುಬ್ಯಂ ವರದೇ ಕಾಮ ರೂಪಿಣಿ ವಿದ್ಯಾರಂಭಂ ಕರಿಶ್ಯಾಮಿ ಸಿದ್ಧಿರ್ ಭವತು ಮೇ ಸದಾ'' , ವಕ್ರ ತುಂದ ಮಹಾ ಕಾಯ ಸೂರ್ಯ ಕೋಟಿ ಸಮ ಪ್ರಭ ನಿರ್ವಿಘ್ನಂ ಕುರುಮೆ ದೇವ ಸರ್ವ ಕಾರ್ಯೇಷು ಸರ್ವದಾ '' ಈ ಶ್ಲೋಕಗಳನ್ನು ನನ್ನಿಂದ ಹೇಳಿಸಿ, ''ಒಳ್ಳೆ ವಿದ್ಯಾ ಬುದ್ದಿ ಕೊಡಪ್ಪ ದೇವ್ರೇ'' ಎಂದು ತಾನು ನನ್ನೊಂದಿಗೆ ಬೇಡಕೊಂಡರು ಅಮ್ಮ . ಮತ್ತೆ ಶಾರದೆ , ಗಣಪತಿ ಫೋಟೋ ಮುಂದೆ ಕೂರಿಸಿ ಕೊ೦ಡು '''ಅ ಆ ಇ ಈ '' ಬರೆದು ಕೊಟ್ಟು ತಿದ್ದಿಸಿದರು. ಎಲ್ಲಾ ಬಾಯಿ ಪಾಠ ಹೇಳಿಕೊಟ್ಟಿದ್ದರು . ಖುಷಿ ಇಂದ ಶಾಲೆಗೇ ಸೇರಿಸಿ ಬಂದರು. ಆಗ ನಮ್ಮ ಶಾಲೆಯಲ್ಲಿ ಶ್ರೀ ರಾಮಮೂರ್ತಿ ಸರ್ ಅಂತ ಇದ್ದರು ಅವರು ಒಂದರಿಂದ ಏಳನೇ ತ ರಗತಿಯವರಿಗೂ ಕ್ಲಾಸೆಸ್ ತೆಗೆದುಕೊಳ್ಳುತ್ತಿದ್ದರು. ಮೊದಲ ದಿನ ನನ್ನನ್ನು ಶಾಲೆಗೇ ಸೇರಿಸಿದಾಗ ರಾಮ ಮೂರ್ತಿ ಸರ್ ನನ್ನನ್ನು ಎತ್ತಿಕೊಂಡು ಹೋಗಿ ಕುಳ್ಳಿರಿಸಿದರು. ಅದ್ಯಾಕೋ ಅವರು ನನ್ನನ್ನು ತುಂಬಾ ಇಷ್ಟ ಪಡುತ್ತಿದ್ದರು. ನಮ್ಮ ಶಾಲೆಯಲ್ಲಿ ಇನ್ನೊಬ್ಬರು ಗಿರಿಜಾ ಟೀಚರ್ ಅಂತ ಇದ್ದರು. ಅವರು ರಾಮ ಮೂರ್ತಿ ಸರ್ ಹೆಂಡತಿ ಎಂದು ನನ್ನ ಅಣ್ಣಂದಿರು ಅಪ್ಪ ಅಮ್ಮನಿಗೆ ಹೇಳುತ್ತಿದ್ದರು. ಅವರಿಬ್ಬರೂ ಸಹ ಶಾಂತ ಸ್ವಭಾವ ದವರಾಗಿದ್ದು ಶಾಲೆಯ ಮಕ್ಕಳನ್ನು ತಮ್ಮ ಸ್ವಂತ ಮಕ್ಕಳಂತೆ ಅಕ್ಕರೆ ಇಂದ ನೋಡಿ ಕೊಳ್ಳುತ್ತಿದ್ದರು. ನಾನು ಬಾಲ್ಯದಲ್ಲಿ ಮುದ್ದು ಮುದ್ದಾಗಿ ಬೆಳ್ಳಗೆ ಇದ್ದೆ. ನಮ್ಮ ರಾಮ ಮೂರ್ತಿ ಸರ್ ದಂಪತಿಗಳಿಗೆ ಮಕ್ಕಳಿರಲಿಲ್ಲವಂತೆ. ಹಾಗಾಗಿ ಅವರು ಶಾಲೆ ಮುಗಿದ ನಂತರ ನನ್ನನ್ನು ಅವರ ಮನೆಗೆ ಕರೆದು ಕೊ೦ಡು ಹೋಗಿ ಬಿಡುತ್ತಿದ್ದರು. ಅವರ ಮನೆಯಲ್ಲೇ ಊಟ ತಿಂಡಿ ಎಲ್ಲಾ ಕೊಡುತ್ತಿದ್ದರು. ತುಂಬಾ ಪ್ರೀತಿ ಇಂದ ಮುದ್ದಾಗಿ ನೋಡಿ ಕೊಳ್ಳುತ್ತಿದ್ದರು. ರಾಮ ಮೂರ್ತಿ ಸರ್ ಯಾವಾಗಲು ಹೇಳುತ್ತಿದ್ದರು '' ನಿಮ್ಮ ಅಮ್ಮನಿಗೆ ಮನೆ ತುಂಬಾ ಮಕ್ಕಳು ನಮ್ಮ ಮನೆಯಲ್ಲಿ ಮಕ್ಕಳೇ ಇಲ್ಲ ನೀನು ನಮ್ಮ ಮನೆಯಲ್ಲೇ ಇದ್ದು ಬಿಡು ಅಂತ '' ಇನ್ನು ತಮಾಷೆ ಅಂದರೆ ಅವರು ಒಮ್ಮೆ ನಮ್ಮ ಮನೆಗೆ ಬಂದು ನಮ್ಮ ಅಪ್ಪ ಅಮ್ಮನನ್ನು ಸಹಾ ಕೇಳಿ ಕೊಂಡರಂತೆ ಪಾಪ ಸರ್ ಗೆ ನನ್ನ ಕಂಡರೆ ತುಂಬಾ ಪ್ರೀತಿ. ಆ ಕಾಲದಲ್ಲಿ ಸ್ವಲ್ಪ ಸ್ತಿತಿವನ್ತರಷ್ಟೇ ಹಾರ್ಲಿಕ್ಸ್ , ಒವಲ್ಟೇನ್ , ವಿವಾ ಇದನ್ನೆಲ್ಲಾ ಮ ಕ್ಕಳಿಗೆ ಹಾಲಿಗೆ ಹಾಕಿ ಕುಡಿಯಲು ಕೊಡು ತ್ತಿದ್ದರು. ಆದರೇ ನಮ್ಮ ಮನೆಯಲ್ಲಿ ಮನೆ ತುಂಬಾ ಮಕ್ಕಳು ಅಮ್ಮ ಒಂದು ಪಾವು ಹಾಲಿಗೆ ಒಂದು ಪಾವು ನೀರು ಬೆರೆಸಿ ನಮಗೆಲ್ಲ ಟೀ ಮಾಡಿ ಕೊಡುತ್ತಿದ್ದರು. ನಂತರ ನಮಗೆಲ್ಲಾ ಕೊಟ್ಟ ಮೇಲೆ ಅವಳಿಗೆ ಏನೂ ಉಳಿಯುತ್ತಿರಲಿಲ್ಲ ಅಗಾ ಟೀ ಸೊಪ್ಪಿನ ಮೇಲೆ ಮತ್ತೊಂದಿಷ್ಟು ನೀರು ಹಾಕಿ ಕುದಿಸಿ ತಾನು ಕುಡಿಯುತ್ತಿದ್ದರು ನಾನು ರಾಮ ಮೂರ್ತಿ ಸರ್ ದಂಪತಿ ಗಳಿಂದ ಪ್ರೀತಿ ಪಡೆಯುವುದರ ಜೊತೆ ಜೊತೆಗೆ ಹಾಲು, ತುಪ್ಪ,ಒಳ್ಳೊಳ್ಳೆ ಊಟ ತಿಂಡಿ, ಕುರುಕಲು ಎಲ್ಲ ತಿಂದುಂಡು ಗುಂಡು ಗುಂಡಾಗಿದ್ದೆ. ನನ್ನ ಆಟ ಆಟ ನೋಡಿ ಖುಷಿ ಪಡುತ್ತಿದ್ದರು ಸಿರ್. ಅವರ ಮನೆ ಇಂದ ಕರೆದೊಯ್ಯಲು ನನ್ನ ಅಣ್ಣ ಅಕ್ಕ ಬಂದು ಸರ್ ಕಳುಹಿಸಿ ಕೊಡಿ ಎಂದು ಕೇಳಿದರೆ ಸರ್ ಮತ್ತೆ ಗಿರಿಜಾ ಮಿಸ್ ಹ್ಯಾಪ್ ಮೊರೆ ಹಾಕಿ ಕೊಂಡು ಕಳುಹಿಸುತ್ತಿದ್ದರು . ಭಾನುವಾರ ಬಂತೆಂದರೆ ಶಾಲೆ ಇಲ್ಲ ಆದರೆ ನನ್ನ ಸರ್ ದಂಪತಿಗಳು ಲಾಲ್ ಬಾಗ್ , ಕಬ್ಬನ್ ಪಾರ್ಕ್ ಗೆ ಕರೆದೊಯ್ಯುತ್ತಿದ್ದರು ಅಲ್ಲಿ ಬಲೂನ್ , ಅವರು ಕಡಲೆಕಾಯಿ ತಿನ್ನುತ್ತ ನಂಗೆ ಐಸ್ ಕ್ರೀಮ್ ಕೊಡಿಸುತ್ತಿದ್ದರು. ನನಗೋ ಮಜವೋ ಮಜಾ. ನಾನು ನಾಲಕ್ಕು - ಐದನೇ ತರಗತಿಗೆ ಬರುವ ವೇಳೆಗೆ ರಾಮಮೂರ್ತಿ ಸರ್ ಗೆ ಹಾಸನಕ್ಕೋ , ಮೈಸೂರ್ ಗೋ ವರ್ಗ ಆಯಿತು. ಅವರು ಹೋಗುವಾಗ ಕಣ್ಣಿರು ಸುರಿಸುತ್ತ ನನ್ನನ್ನು ಮುದ್ದಾಡಿ ಹೋದರು. ಆಗ ಫೋನ್ ಇಲ್ಲ ಸರ್ ನನಗೆ ಕಾಗದ ಬರೆಯಲು ಹೇಳಿ ಕೊಟ್ಟಿದ್ದರು ಅವರ ಅಡ್ರೆಸ್ ಕೂಡ ಕೊಟ್ಟಿದ್ದರು. ನಾನು ನನ್ನ ಅಣ್ಣ ಇಬ್ಬರು ಒಂದೇ ಕಾರ್ಡಿನಲ್ಲಿ ಬರೆದು ಕಳುಹಿಸುತ್ತಿದ್ದೆವು ಅವರು ನಮ್ಮ ಕಾಗದಕ್ಕೆ ಉತ್ತರಿಸುತ್ತಿದ್ದರು. ನಾನು ಹತ್ತನೇ ತರಗತಿಯಲ್ಲಿ ಫಸ್ಟ್ ಕ್ಲಾಸಿನಲ್ಲಿ ಪಾಸಾದ ವಿಷಯ ತಿಳಿಸಿದಾಗ ತುಂಬಾ ಆನಂದ ಪಟ್ಟು ನನಗೆ ಒಂದು ಪಾರ್ಕರ್ ಪೆನ್ ಕೊಡಿಸಿದ್ದರು. ಅದು ನನ್ಬಳಿ ಈಗಲೂ ಇದೆ. ಈಗ ಅವರಿಲ್ಲ ಅವರ ನೆನಪು ನನ್ನಲ್ಲಿ ಹಚ್ಚ ಹಸಿರಾಗಿದೆ. ನನ್ನಮ್ಮ ಯಾವಾಗಲೂ ಹೇಳುತ್ತಿದ್ದರು ಅದ್ಯಾವ ಜನ್ಮದ ಋಣಾನು ಬಂಧವೋ ಎಂದು !!! ನಿಮ್ಮದು ಗುರು-ಶಿಷ್ಯರ ಸಂಭಂದ ಅಲ್ಲಾ ; ತಂದೆ - ಮಗಳ ಸಂಬಂದ ಎಂದು . ಆದರೆ ಈಗಿನ ದಿನಗಳಲ್ಲಿ ಗುರು-ಶಿಷ್ಯಳ ಮೇಲೆ ಅತ್ಯಾಚಾರ ಎಸಗುವ ಘಟನೆಗಳು ಟಿ ವಿ ಯಲ್ಲ್ಲಿ ಪ್ರಸಾರ ಆದಾಗ ಎಷ್ಟೊಂದು ವೇದನೆ ಯಾಗುತ್ತದೆ . ನಿಮಗೆ ಶಿರ ಸಾಷ್ಟಾಂಗ ವಂದನೆಗಳು ಸರ್ ಮತ್ತೆ ಹುಟ್ಟಿ ಬನ್ನಿ
Saturday, May 16, 2015
ನನ್ನ ನೆನಪಿನಂಗಳದಿಂದ ೫
ನನ್ನ ಬಾಲ್ಯ ನನ್ನ ಸ್ಮೃತಿ ಪಟಲದಲ್ಲಿ ಅಚ್ಚಳಿಯದೆ ಬೇರೂರಿದೆ ನಾನೋದಿದ ಕೆಲವೊಂದು ಪುಸ್ತಕಗಳು ಕೂಡ . ಒಮ್ಮೆ 'ಅಲಿಬಾಬ ಮತ್ತು ನಲವತ್ತು ಮಂದಿ ಕಳ್ಳರು' ಪುಸ್ತಕ ಹಿಡಿದು ಕುಳಿತ್ತಿದೆ ; ಹಾಗೆ ಓದುತ್ತ ಓದುತ್ತ ನನ್ನ ಕಲ್ಪನೆಯಲ್ಲಿ ಅಲಿಬಾಬ ಕಥೆ ತುಂಬಾ ಚೆನ್ನಾಗಿ ಉಳಿದು ಹೊಯಿತು. ನನ್ನ ಮಕ್ಕಳಿಗೆ ನಾನು ಚಿಕ್ಕಂದಿನಲ್ಲಿ ಓದಿದ ಎಲ್ಲ ಕತೆಗಳನ್ನು ಹೇಳುತ್ತಾ ಬಂದಿದ್ದೇನೆ. ನನ್ನ ಕಥೆ ಹೇಳುವ ವೈಖರಿ ಕಂಡು ಒಮ್ಮೊಮ್ಮೆ ನಮ್ಮ ಅತ್ತೆ ಕೂಡ ''ಅಲ್ವೇ ಉಮ ಅದೆಷ್ಟು ಚೆನ್ನಾಗಿ ಕತೆ ಹೇಳುತ್ತೀಯ ನೀನು, ನಂಗೆ ನಿದ್ದೆ ಬರ್ತಿಲ್ಲ ನಿನ್ ಕತೆ ಕೇಳಿದ್ರೆ ಒಳ್ಳೇ ನಿದ್ರೆ ಬರುತ್ತೆ ನಂಗೂ ಕತೆ ಹೇಳು ಎಂದು ಎಷ್ಟೋ ಬಾರಿ ಹೇಳುವುದು ಇತ್ತು. ನಾನು ಸಣ್ಣವಳಿದ್ದಾಗ ಓದಿದ 'ಸಿನ್ ಡ್ರೆ ಲಾ', 'ಉದ್ದ ಕೂದಲಿನ ರಾಜ ಕುಮಾರಿ ಕತೆ', 'ಎರಡು ಗಿಳಿಗಳ ಕಥೆ' , 'ಕಪ್ಪೆ ರಾಜಕುಮಾರಿ ಕಥೆ' ಹಾಗೂ ಇನ್ನು ಮುಂತಾದ ಕಥೆಗಳನ್ನು ಅವರಿಗೆ ಹೇಳಿ ಅವರ ಮನಸಂತೋಶ ಪಡಿಸುತ್ತಿದ್ದೆ . ಆಗ ನನಗಾಗುತ್ತಿದ್ದ ಆನಂದ ಅಷ್ಟಿಷ್ಟಲ್ಲ. ಮತ್ತೆ ಇನ್ನು ಖುಷಿಯ ವಿಚಾರ ಎಂದರೆ ನಾನು ಕ್ಲಾಸ್ ಲೀಡರ್ ಆಗಿದ್ದೆ ನಮ್ಮ ಗುರುಗಳು ಏನಾದ್ರೂ ವಿಶ್ರಾಂತಿ ತಗೋ ಬೇಕಾದಾಗ ' ಉಮಾ, ಸ್ವಲ್ಪ ಇಲ್ಲಿ ಬಾಮ್ಮಾ , ಒಂದು ಒಳ್ಳೆ ಕಥೆ ಹೇಳು ಮಕ್ಕಳನ್ನು ನಿಶ್ಯಬ್ದವಾಗಿ ಇರುವಂತೆ ಮಾಡ ಬೇಕಾದರೆ ನಿನ್ನ ಕಥೆಗಳೇ ರಾಮ ಬಾಣ. ಹಾಗಾಗಿ ನನಗೆ ಅದೊಂದು ಕಲೆ ಚಿಕ್ಕಂದಿನಲ್ಲೇ ಇತ್ತು. ದೇವರ ನಾಮ ಹಾಡುವುದು, ಚಲನ ಚಿತ್ರ ಗೀತೆಗಳನ್ನು ಹಾಡುವುದು ,ಕಥೆ ಹೇಳುವುದು, ಇವೆಲ್ಲ ಹವ್ಯಾಸ ನನಗೆ ಚಿಕ್ಕಂದಿನಲ್ಲಿ ಬಂದ ಬಳುವಳಿ. ಮತ್ತೆ ಎಲ್ಲದಕ್ಕೂ ಮೊದಲ ಬಹುಮಾನ ! 'ಆ ದಿನಗಳು' ಅದೆಂಥ ಸುಂದರ !!! ನನಗೆ ಮತ್ತೆ ಬಾಲ್ಯಕ್ಕೆ ಹೋಗ ಬೇಕೆನ್ನುವ ಆಸೆ. ಆದರೂ ಅಡ್ಡಿ ಇಲ್ಲ ಬಾಲ್ಯದ ನೆನಪುಗಳು ನನ್ನಲ್ಲಿ ಇನ್ನು ಹಸಿರಾಗಿದೆ. ಯಾವಾಗ ಬೇಕಿದ್ದರೂ ಕಲ್ಪನೆಯಲ್ಲಿ ಬಾಲ್ಯಕ್ಕೆ ತೆರಳಿ ಮತ್ತೆ ನನ್ನ ಈಗಿನ ಅವಸ್ತೆಗೆ ಮರಳುತ್ತೇನೆ. ಒಮ್ಮೆ 'ಭಗೀರಥ ಪ್ರಯತ್ನ' ನಾಟಕದಲ್ಲಿ ನಾನು ಗಂಗೆಯಾಗಿ ಅಭಿನಯಿಸಿದ್ದೆ. ಭಗೀರಥ ಗಂಗೆಯನ್ನು ಇಳಿದು ಬಾ ಗಂಗೆ, ಇಳಿದು ಬಾ ಭುವಿಗೆ ಎಂದು ಹಾಡಿ ಕರೆಯುತ್ತಿದ್ದ, ನಾನು ಸ್ವಲ್ಪ ಎತ್ತರದಿಂದ ಇಳಿದು ಬರುವಂತೆ ವೇದಿಕೆ ನಿರ್ಮಿತವಾಗಿತ್ತು. ಆಗೆಲ್ಲ ಶಾಲೆಯಲ್ಲಿ ಇದ್ದ ಬೆಂಚನ್ನೆ ಒಂದರ ಮೇಲೊಂದು ಮೆಟ್ಟಿಲಿನಂತೆ ಇಟ್ಟಿದ್ದರು, ನಾನು ಬಿಳಿ ಸೀರೆಯುಟ್ಟು, ಉದ್ದವಾದ ಹೆರಳು ಬಿಚ್ಚಿಕೊಂಡು ಬರುತ್ತಿರುವಾಗ ಬೆನ್ಚಿಂದ ಎಡವಿ ಬಿದ್ದೆ ಬಿಟ್ಟೆ !!! ಎಂತಹ ಅನಾಹುತ ಅಂತೀರಾ?? ಒಂದೆಡೆ ನನ್ನ ಉದ್ದವಾದ ಜಡೆ ಬೆಚಿಗೆ ಸಿಕ್ಕಿಹಾಕಿ ಕೊಂಡಿದೆ, ಇನ್ನೊಂದೆಡೆ ಸೀರೆಯ ಸೆರಗು ಸಿಕ್ಕಿ ಕೊಂಡಿದೆ. ಒಳ್ಳೇ ಫಜೀತಿ ಸ್ವಲ್ಪ ಸಮಯ ಪರದೆ ಇಳಿಸಿದರು ; ನಂತರ ನಾಟಕ ಏನೋ ಚೆನ್ನಾಗಿ ಮೂಡಿ ಬಂತು; ಆದರೆ ನನ್ನ ಜಡೆ ಬಿಡಿಸಲಾರದೆ ಸ್ವಲ್ಪ ಕಟ್ ಮಾಡಿದರು ನಮ್ಮಮಿಸ್ !! ಅದನ್ನು ನೆನಪಿಸಿಕೊಂಡರೆ ಈಗ ನನ್ನ ಮೊಗದಲ್ಲಿ ಮುಗುಳ್ನಗೆ ಮಿಂಚಿ ಮಾಯವಾಗುತ್ತದೆ. ಆಹಾ ಬಾಲ್ಯವೇ, ಇನ್ನೊಮ್ಮೆ ಬಾರಲಾರೆಯ ನನ್ನ ಬದುಕಲ್ಲಿ !
ಇನ್ನೊಂದು ಹಾಸ್ಯ ಪ್ರಸಂಗ ನೆನಪಿಗೆ ಬಂತು . ಆ ಘಟನೆಯಂತು ಬಿದ್ದು ಬಿದ್ದು ನಗುವ ಹಾಗೆ ಮಾಡುತ್ತದೆ .
ಒಮ್ಮೆ ಹೀಗೊಂದು ದಿನ ಲೈಬ್ರರಿ ಇಂದ ತಂದ 'ಸಣ್ಣ ಕಥೆಗಳ ಸಂಕಲನ' ಮನೆ ಇಂದ ಶಾಲೆಗೆ ಹೋಗುವ ದಾರಿಯಲ್ಲಿ ಓದುತ್ತ ನಡೆಯುತ್ತಿದ್ದೆ . ಪುಸ್ತಕದಲ್ಲಿ ಹುದುಗಿ ಹೋಗಿದ್ದ ನನಗೆ ಯಾವುದರ ಪರಿವೆ ಇಲ್ಲದೆ ಪುಸ್ತಕ ಹಿಂತಿರುಗಿಸುವ ದಿನವಾದದರಿಂದ ಓದಿ ಮುಗಿಸಲೇ ಬೇಕು ಎಂಬ ಛಲ ಇತ್ತು ಹಾಗಾಗಿ ಓದುತ್ತ ಸಾಗಿದ್ದೆ. ೨-೩ ಕಿ. ಮಿ. ದಾರಿ ಸವೆಯ ಬೇಕಿತ್ತು. ಓದುತ್ತ ಓದುತ್ತ ಒಂದು ತೆರೆದ ಒಳ ಚರಂಡಿಗೆ ದೊಪ್ಪನೆ ಬಿದ್ದೆ ನೋಡಿ ; ಒಳ್ಳೆ ಪ್ರಪಾತಕ್ಕೆ ಬಿದ್ದ ಅನುಭವ!! ನಾನು ''ಅಪ್ಪ ದೇವರೆ ಈ ಕಂದಕದಿಂದ ಹೊರ ಬರುವಂತೆ ಮಾಡು ನಿನಗೆ ೧೦೧ ನಮಸ್ಕಾರ ಹಾಕುತ್ತೆನೆ. ಜೊತೆಗೆ ಹೆಜ್ಜೆ ನಮಸ್ಕಾರ, ೧ ೦ ೧ ಬಾರಿ ' ಓಂ ಶ್ರೀ ಗಣೇಶಾಯ ನಮಃ ' ಎಂದು ಭಕ್ತಿ ಇಂದ ಬರೆಯುತ್ತೇನೆ ಎಂದು ಹರಸಿಕೊಂಡೆ. ಯಾರಾದ್ರು ಕಾಪಾಡಿ ಎಂದು ಅರಚಿ ಅರಚಿ ಗಂಟಲ್ಲೆಲ್ಲ ಒಣಗಿ ಹೋಗಿ ನೀರು ಕುಡಿಯಬೇಕೆನಿಸಿತು. ಸುಮಾರು ತಾಸುಗಳೇ ಕಳೆದು ಹೋದವು . ಕೊನೆಗೆ ಒಬ್ಬರು ವಯಸ್ಸಾದ ತಾತ ಒಂದು ಹಗ್ಗವನ್ನು ಇಳಿ ಬಿಟ್ಟು ಅದನ್ನು ಗಟ್ಟಿಯಾಗಿ ಹಿಡಿದು ಕೊಳ್ಳುವಂತೆ ಹೇಳಿದರು. ಅವರ ಆ ಸಹಾಯ ನಾನು ಈಗಲೂ ಸ್ಮರಿಸುತ್ತೇನೆ. ಕೊನೆಗೆ ಮೇಲೆ ಬಂದ ಮೇಲೆ ಯುನಿಫಾರ್ಮ್ ಎಲ್ಲ ಕೊಳೆಯಾಗಿತ್ತು . ಇನ್ನು ಶಾಲೆಗೆ ಹೋಗುವುದರಲ್ಲಿ ಅರ್ಥ ಇಲ್ಲ ಎಂದು ಮನೆಗೆ ಓಡಿದೆ. ಮನೆಗೆ ಹೋಗಿ ಅಮ್ಮನಿಗೆ ನಡೆದ ವಿಚಾರ ಎಲ್ಲ ವಿವರಿಸಿದೆ. ಅಮ್ಮ ಬಿಸಿ ಬಿಸಿ ನೀರು ಹಂಡೆ ಇಂದ ಮೊಗೆದು ಮೊಗೆದೂ ಸುರಿದರು. ಮನಸ್ಸು ದೇಹ ಎಲ್ಲ ಹಾಯೆನಿಸಿತು. ಮತ್ತೆಂದೂ ನಾನು ದಾರಿಯಲ್ಲಿ ಪುಸ್ತಕ ಓದುವ ಸಾಹಸ ಮಾಡಲಿಲ್ಲ!!!!!!!
ನನ್ನ ನೆನಪಿನಂಗಳದಿಂದ ೪
ನನ್ನ ನೆನಪಿನಂಗಳದಿಂದ ೪
ಕಾಲೇಜ್ ಡೇಸ್ ಇಂದ ಬರೆಯಲು ಆರಂಭಿಸಿದೆ . ಅದು ಹೇಗೆ ಅಂದರೆ ಮೊದಲ ವರ್ಷದ ವಾಣಿಜ್ಯ ಪದವಿಯಲ್ಲಿ ಕಾಲೇಜ್ ಮ್ಯಾಗಜಿನ್ ಗೆ ಯಾರಾದ್ರು ಕಥೆ ಕವನ ಬರೆಯುವವರು ಬರೆದು ತಂದು ಕೊಡಿ ಎಂದು ಒಂದು ಮೆಮೊ ಬಂತು. ಸರಿ ಆ ದಿನವೇ ನಾನು ನಮ್ಮ ತಂದೆಯೊಂದಿಗೆ ಅಪ್ಪ ನಂಗೆ ಏನಾದ್ರೂ ಬರಿ ಬೇಕು ಅನ್ನಿಸ್ತ ಇದೆ ನಿನ್ನ ಸಹಾಯ ಬೇಕು ಅಂದೆ . ಅಪ್ಪ ತುಂಬಾ ಸಾಹಿತ್ಯಾಸಕ್ತರು ಅದರಲ್ಲೂ ಅ. ನ.ಕ್ರು. ಕು.ವೆಮ್.ಪು. ಕು. ರಾ. ಸು. ಎಸ್. ಎಲ್. ಭೈರಪ್ಪ ಅವರ ಪುಸ್ತಕ ಗಳನ್ನು ಕೊಂಡು ತಂದು ಓದುತ್ತಿದ್ದರು . ನಂತರದ ದಿನಗಳಲ್ಲಿ ಪಿ. ಲಂಕೇಶ್ ಅವರ ಕಟ್ಟಾ ಅಭಿಮಾನಿ ಗಳಾದರು . ಅದಾದ ನಂತರದ ದಿನಗಳಲ್ಲಿ ರವಿ ಬೆಳಗೆರೆ ಅವರ ಅಭಿಮಾನಿ ಕೂಡ. ಮತ್ತೆ ವಿಷಯಕ್ಕೆ ಬರುತ್ತೇನೆ . ಅದಕ್ಕೆ ಅಪ್ಪ ''ಏನಾದ್ರೂ ಬರೀ ಮಗಳೇ ಆದ್ರೆ ನಿನ್ನ ಸ್ವಂತದ್ದು ಆಗಿರ ಬೇಕು , ನಾನು ಕೊನೆಯಲ್ಲಿ ಏನಾದ್ರೂ ತಪ್ಪುಗಳಿದ್ರೆ ಅದನ್ನು ಸರಿ ಪಡಿಸಿ ಕೊಡುತ್ತೇನೆ, ನಂತರ ಅದನ್ನು ನಿನ್ನ ಕನ್ನಡದ ಅಧ್ಯಾಪಕರಿಗೆ ತೋರಿಸಿ ಅವರು ಸರಿ ಇದೆ ಅಂದರೆ ಮಾತ್ರ ಮ್ಯಾಗಜಿನ್ ಗೆ ಕಳಿಸು'' ಅಂದರು. ಅಷ್ಟೇ ಅಲ್ಲದೆ ''ಬರೆಯೋದು ಸಹ್ಹ ಒಂದು ಕಲೆ ಮಗಳೇ '' ಅಂತ ನಮ್ತಂದೆ ನಂಗೆ ಯಾವಾಗಲೂ ಹೇಳ್ತಿದ್ದರು. ನನ್ನ ಚೂರು ಪಾರು ಬರವಣಿಗೆಗೆ ನಮ್ತಂದೆ ನನ್ ಬಗ್ಗೆ ತೋರಿಸ್ತಿದ್ದ ಪ್ರೀತಿ, ಮುತುವರ್ಜಿ, ಕಾಳಜಿ, ಅವರು ಹುರಿದುಂಬಿಸುತ್ತಿದ್ದ ಪರಿ ನಾನು ಬರೆಯುವಾಗಲ್ಲೆಲ್ಲ ಅವರು ನನ್ನೊಂದಿಗೆ ಇದ್ದಾರೆ ಎಂಬ ನನ್ನ ಒಳ ಮನಸ್ಸಿನ ಆ ಚಿಂತನೆ ತುಂಬಿದ್ದೆ ನನ್ನ ಪೂಜ್ಯ ತಂದೆಯವರು . ಯಾಕೆಂದರೆ ಈಗ ನನ್ನ ತಂದೆ ನಮ್ಮೊo ದಿಗಿಲ್ಲ ಆದರೂ ಅವರ ಆ ನೆನಪು ನನ್ನ ಬರವಣಿಗೆಗೆ ಈಗಲೂ ತುಂಬಾ ಸಹಾಯಕವಾಗ್ತಾ ಇದೆ. ನನ್ನನ್ನು ತಿದ್ದಿ ತೀಡಿ ಒಳ್ಳೆ ಸಂಸ್ಕಾರ , ಗುರು ಹಿರಿಯರಲ್ಲಿ ಗೌರವ , ಪ್ರಕೃತಿಯನ್ನು ಪ್ರೀತಿಸುವುದರ ಜೊತೆ ಜೊತೆಗೆ ಪ್ರಾಣಿ-ಪಕ್ಷಿ ಸಂಕುಲ , ಅದಷ್ಟೇ ಯಾಕೆ ಈ ಇಡಿ ಪ್ರಪಂಚವನ್ನೇ ಪ್ರೀತಿಸುವುದನ್ನು ಹೇಳಿ ಕೊಟ್ಟ ನನ್ನ ಗುರುಗಳು ನಮ್ಮ ತಂದೆಯವರು. ಅವರ ಬಗ್ಗೆ ಎಷ್ಟು ಹೇಳಿದರೂ ಕಮ್ಮಿ ಅನ್ನಿಸುತ್ತೆ. ಈ ಲೇಖನವನ್ನು ಬರೆಯಲು ಅವರ ನೆನಪುಗಳೇ ಕಾರಣ. ನಾನು ಕಾಲೇಜ್ ಮ್ಯಾಗಜಿನ್ ಗಳಿಗೆ ಸಣ್ಣ ಕತೆ, ಕವನ ಬರೆಯಲು ಮೂಲ ಕಾರಣ ನನ್ನ ಪ್ರೀತಿಯ ತಂದೆಯವರು . ನನ್ನ ಪ್ರತಿ ಕತೆ, ಕವನ, ಅವರಿಗೆ ಮೊದಲು ತೋರಿಸಿ ಅವರಿಂದ ತಪ್ಪು - ಒಪ್ಪು ತಿದ್ದಿಸಿ, ಏನಾದ್ರು ಹೊಸ ಪದ ಪುಂಜಗಳು ಬೇಕಿದ್ದ ಪಕ್ಷದಲ್ಲಿ ಅಪ್ಪಾನೆ ನನ್ನ ನಿಘಂಟು; ಅವರಿಂದ ಕೆಲವೊಂದು ಪದಗಳನ್ನು ಸೇರಿಸಿ, ಅದನ್ನು ಮತ್ತೂ ಬೇಕೆಂದರೆ ಮುಂದುವರಿಸಿ ಅದಕ್ಕೆ ಏನಾದ್ರೂ ಮಾಹಿತಿ ಬೇಕಿದ್ರೆ ಲೈಬ್ರರಿಗೆ ಅಪ್ಪನ ಜೊತೆ ಹೋಗಿ ತುಂಬಾ ಕಾದಂಬರಿಗಳನ್ನು ಓಡುತ್ತಿದೆ; ನನ್ನ ಮೊಟ್ಟ ಮೊದಲ ಸ್ವಂತ ಕವನ ಹೀಗಿತ್ತು ನೋಡಿ
ಸಿಡಿದು ನಿಂತಿಹೆ ನಾನು
ಸರ್ಕಾರದ ಕಾನೂನಿನ ರೀತಿಯ ಕಂಡು
ಅದರೆನೂ ಮಾಡೆನು ನಾನೆನನ್ನು ಇಂದು
ಬಡವರನು ತುಳಿದು ನಿಂತಿಹ ಓ ನಿರ್ಧಯಿ ಸರ್ಕಾರವೇ
ನಲುಗಿಹರು ಅವರು ನಿನ್ನ ಅಲುಗಿನ ಇರಿತಕ್ಕೆ
ಏರಿಸಿರುವೆ ಬೆಲೆಗಳನು ಎವೆರೆಸ್ಟ್ ಶಿಖರದಂತೆ
ಹತ್ತಲಾರರು ಬಡವರು ತೆನಸಿಂಗನಂತೆ
ಇದ ಕಂಡು ನಾನು ಸಿಡಿದು ನಿಂತರೆ
ಈ ಬಡಪಾಯಿಗೆ ಬೆಂಬಲ ಸಿಗುವುದೇ?
ಅಪ್ಪ ಎಷ್ಟು ಖುಷಿ ಪಟ್ಟರು ಅಂದರೆ ಭೇಷ್ ಮಗಳೇ ಇದು ಸರ್ವ ಕಾಲಕ್ಕೂ ಅನ್ವಯ ಅಗುತ್ತೆ. ತುಂಬಾ ಸೊಗಸಾಗಿದೆ. ''ಏರಿಸಿರುವೆ ಬೆಲೆಗಳನು ಎವೆರೆಸ್ಟ್ ಶಿಖರದಂತೆ; ಹತ್ತಲಾರರು ಬಡವರು ತೆನಸಿಂಗನಂತೆ ಹತ್ತಲಾರರು ಬಡವರು ತೆನಸಿಂಗನಂತೆ'' ವಾಹ್ ಎಂಥ ಅದ್ಭುತವಾದ ಸಾಲುಗಳು ಎಂದು ತುಂಬಾ ಇಷ್ಟ ಪಟ್ಟು ಅಕ್ಕ ಪಕ್ಕದ ಮನೆಯವರಿಗೆ ಕೂಡ ಓದಿ ಹೇಳಿ ನನ್ನ ಮಗಳು ಬರೆದದ್ದು ಎಂದು ಸಂಭ್ರಮಿಸಿದ್ದರು. ಕಾಲೇಜ್ ಮ್ಯಾಗಜಿನ್ ಕಾಪಿ ಬಂದಾಗ ನಮ್ಮ ಮನೆಯಲ್ಲಿ ಎಲ್ಲರೂ ಓದಿ ಖುಷಿ ಪಟ್ಟರು ಮರೆಯಲಾಗದ ಕ್ಷಣಗಳು ನನ್ನ ಬಾಳಿನಲ್ಲಿ,. ಇದಾದ ನಂತರ ಕೂಡ ಅಪ್ಪಾನೆ ಒಳ್ಳೊಳ್ಳೆ ಪುಸ್ತಕ ಹುಡುಕಿ ತಂದು ಕೊಡುತ್ತಿದ್ದರು. ನನಗೆ ಈಗಲೂ ನೆನಪಿದೆ, ತಂದೆಯವರು ಕೊಡುತ್ತಿದ್ದ ಪುಸ್ತಕ ತ್ರಿವೇಣಿ, ಆರ್ಯಾಂಭ ಪಟ್ಟಾಭಿ ಅವರದು. ಅವರಿಬ್ಬರೂ ಅಕ್ಕ-ತಂಗಿ ಎಂದು ನನ್ನಮ್ಮ ನಿಂದ ನನಗೆ ತಿಳಿಯಿತು. ಅಮ್ಮ ತ್ರಿವೇಣಿ ಹಾಗು ಆರ್ಯಾಂಭ ಪಟ್ಟಾಭಿ ಅವರ ಕಟ್ಟಾ ಆಭಿಮಾನಿ. ಅವರ ಬುಕ್ಸ್ ಹುಡುಕಿ ಹುಡುಕಿ ತಂದು ಅಮ್ಮನಿಗೆ ಕೊಟ್ಟು ನಾನು ಸಹಾ ಓದುತ್ತಿದ್ದೆ. ತ್ರಿವೇಣಿಯವರು ಬರೆದ ಮೊದಲ ಕಾದಂಬರಿ 'ಬೆಕ್ಕಿನ ಕಣ್ಣು' ಹಾಗೂ ನಾನು ಅತ್ಯಂತ ಆಸಕ್ತಿ ಇಂದ ಓದಿದ ಮೊದಲ ಕಾದಂಬರಿ 'ಬೆಕ್ಕಿನ ಕಣ್ಣು' ತುಂಬಾ ಸೊಗಸಾಗಿ ಓದಿಸಿಕೊಂಡು ಹೋದ ಮೊದಲ ಕಾದಂಬರಿ. ಮೊದಲ ಪುಟದಿಂದ ಕೊನೆಯವರೆಗೂ ತಲೆ ಎತ್ತದೆ ಸಂಪೂರ್ಣ ಓದಿ ಮುಗಿಸಿದೆ. ನನ್ನ ಬಾಲ್ಯದಲ್ಲಿ ನಾನ್ಯಾವತ್ತೂ ಮಾರ್ಕೆಟಿಗಾಗಲೀ ಶಾಪಿಂಗ್ ಗಾಗಲೀ ಹೋಗುವುದು ವಾಡಿಕೆ ಇರಲಿಲ್ಲ ಶಾಲೆ, ಕಾಲೇಜ್, ತಪ್ಪಿದರೆ ಸಿಟಿ ಸೆಂಟ್ರಲ್ ಲೈಬ್ರರಿ . ನನಗಿನ್ನೂ ಚೆನ್ನಾಗಿ ಜ್ಞಾಪಕ ಇದೆ ; ಶಾಲೆಗೆ ಬೇಸಿಗೆ ರಜ ಬಂದರೆ ಸಾಕು, ಮನೆಗೆ ಕನ್ನಡ ಪ್ರಭ, ಸುಧಾ, ಪ್ರಜಾಮತ, ಚಂದಮಾಮ , ಗೊಂಬೆ ಮನೆ, ಮಯೂರ, ತುಷಾರ, ಇನ್ನು ಮುಂತಾದ ದೈಹಿಕ, ಸಾಪ್ತಾಹಿಕ, ಮಾಸಿಕ, ಎಲ್ಲವೂ ಮನೆ ಬಾಗಿಲಿಗೆ ಬರುತ್ತಿದ್ದವು. ಅಮ್ಮ, ಅಪ್ಪ, ಅಕ್ಕಂದಿರು, ಅಣ್ಣಂದಿರು, ಎಲ್ಲರು ಓದುವ ಗೀಳಿದ್ದವರೇ . ಎಲ್ಲರೂ ನಾ ಮುಂಚೆ, ತಾ ಮುಂಚೆ, ಎಂದು ಕಿತ್ತಾದುತ್ತಿದ್ದೆವು ಮತ್ತು ಆ ಗಲಾಟೆಗೆ ನಮ್ಮಮ್ಮ ಬಂದು ಹೀಗೆ ಹೇಳುತ್ತಿದ್ದರು ' ಅಯ್ಯೋ ಮಕ್ಕಳಾ ಯಾಕ್ಹೀಗೆ ಕಿತ್ತಾಡು ತೀರಾ ? ಮನೇಲೆ ಇರುತ್ತಲ್ಲ ನಿಧಾನ ವಾಗಿ ಓದಿ' ಎಂದರೂ ನಾವುಗಳು ಕಿವಿ ಮೇಲೆ ಹಾಕಿ ಕೊಳ್ಳುತ್ತಿರಲಿಲ್ಲ , ಎಲ್ಲ ಓದಿ ಮುಗಿಸಿ ಮತ್ತೆ ಮನೆ ಸಮೀಪ ಲೈಬ್ರರಿ ಗೆ ಹೋಗಿ ತುಂಬಾ ಬುಕ್ಸ್ ಓ ದುತ್ತಿದ್ದೆವು. ನಾನು ಶಾಲಾ ದಿನಗಳಲ್ಲಿ ಮೊದಲು ಓದಿದ ಒಂದು ಸಣ್ಣ ಕಥೆ 'ರಾ ಜು ಮತ್ತು ಹುರುಳಿ ಬೀಜ' ಅದೆಂತಹ ಕಲ್ಪನೆ ಎಂದರೆ ನನ್ನ ಮನಸ್ಸಿನಲ್ಲಿ ಅಚ್ಚು ಒತ್ತಿದ ಮೊದಲ ಕಥೆ. ಅದನ್ನು ನನ್ನ ಮಕ್ಕಳಿಗೆ ಹೇಳಿ ಖುಷಿ ಪಡು ತ್ತಿದ್ದೆ. ನನ್ನ ಮಕ್ಕಳು ಆಶ್ಚರ್ಯ ಚಕಿತರಾಗಿ ಬಿಟ್ಟ ಕಣ್ಣು ಬಿಟ್ಟಂತೆ ಕೇಳಿ ಖುಷಿ ಪಟ್ಟಿದ್ದು ಉಂಟು . ಇದೆಲ್ಲದರ ಪ್ರೇರೇಪಣೆ ನನಗೆ ಬರೆಯುವ ಹವ್ಯಾಸ ಮೂಡಿ ಬರಲು ಕಾರಣ ವಾಯಿತು. ಇನ್ನು ಬರೆಯುತ್ತ ಹೋದರೆ ನನ್ನ ಬಾಲ್ಯ , ನನ್ನ ಶಾಲಾ ದಿನಗಳು, ಎಲ್ಲ ನನ್ನ ಮನಸ್ಸಿನ ತೆರೆ ಮೇಲೆ ಮೂಡಿ ಬರುತ್ತೆ. ಅದನ್ನು ಮುಂದಿನ ದಿನಗಳಲ್ಲಿ ನಿರೀಕ್ಷಿಸಿ. ಮತ್ತೆ ಮುಂದುವರಿಸುತ್ತೇನೆ.
Friday, May 15, 2015
ಬೇಸಿಗೆ ರಜೆ
ನನ್ನ ನೆನಪಿನಂಗಳದಿಂದ ೩ :
ಪ್ರತಿ ವರುಷ ಬೇಸಿಗೆ ರಜೆ ಬಂತೆಂದರೆ ನಮಗೆ ಮಜವೋ ಮಜಾ! ಏಕೆಂದರೆ ಗೆಳತಿಯರೊಡನೆ ಅಳಗುಳಿ ಮನೆ, ಚೌಕ ಭಾರ, ರಿಂಗ್ ಆಟ , ಜೂಟಾಟ, ಕಣ್ಣಾ ಮುಚ್ಚಾಲೆ ಆಟ, ಕುಂಟೆ ಬಿಲ್ಲೆ , ಹೀಗೆ ಸುಮಾರು ಆಟಗಳನ್ನು ಖುಷಿ ಇಂದ ಆಡುತ್ತಿದ್ದೆವು. ದೇಹಕ್ಕೆ ಒಳ್ಳೆ ಗಾಳಿ ಬೆಳಕು, ವ್ಯಾಯಾಮ ಸಿಗುತಿಟ್ಟು, ಹಾಗಾಗಿ ದೇವರ ದಯೆ ಇಂದ ಸದಾ ಅರೊಗ್ಯವಂತರಾಗಿದ್ದೆವು. ಯಾವುದೇ ಕಾರಣಕ್ಕೂ ವೈದ್ಯರ ಬಳಿ ಹೋಗುವ ಪ್ರಮೇಯ ಬರುತ್ತಲೇ ಇರಲಿಲ್ಲ. ನನಗೋ ವಿಪರೀತ ಸ್ನೇಹಿತೆಯರು. ಒಬ್ರಾ ಇಬ್ರಾ, ಶಾಂತ, ಸುಜಾತ, ಜಯ (ಜಯ ಹೆಸರಿನ ೪ ಜನ ನಮ್ಮ ಶಾಲೆಯಲ್ಲಿ ನನ್ನದೇ ತರಗತಿಯಲ್ಲಿ ಓದುತ್ತಿದ್ದರು) ಹಾಗಾಗಿ ಅವರಿಗೆ ಅಡ್ಡ ಹೆಸರಿತ್ತು , ಒಬ್ಬಳು ಕುಳ್ಳಿ ಜಯ, ಬಿಳಿ ಜಯ, ಕರ್ಪಿ ಜಯ, ಗುಗುರು ಕೂದಲು ಜಯ) ಶಿವಮ್ಮ, ಶಿವನ ಹಳ್ಳಿಯಲ್ಲಿ ಹುಟ್ಟಿದ್ದರಿಂದ ಅವಳಿಗೆ ಶಿವಮ್ಮ ಎಂದೇ ನಾಮಕರಣ ಮಾಡಿದ್ದರಂತೆ ! ) ಕಾಡಮ್ಮ , ಸುಶೀಲ, ಇಂದ್ರ, ಲಲಿತ, ಲಕ್ಷ್ಮಿ, ಪ್ರಭ, ಉಷಾ, ಕೃಷ್ಣ ವೇಣಿ ( ಇವಳಂತೂ ಹೆಸರಿಗೆ ತಕ್ಕಂತೆ ಕಾಡುಗಪ್ಪು ಬಣ್ಣ) ಹೀಗೆ ಕೆಲವರ ಹೆಸರು ನೆನಪಿಗೆ ಬರುತ್ತಿಲ್ಲ. ಚೆನ್ನಾಗಿ ಬಿಸಿಲು ಮಳೆ ಎನ್ನದೆ ಶಾಲೆ ಸಮೀಪವೇ ಇದ್ದದರಿಂದ ಶಾಲೆಯ ಮೈದಾನದಲ್ಲಿ ದಣಿವಾಗುವವೆಗೂ ಆಟ ಆಡಿ ಊಟದ ಸಮಯದ ಹೊತ್ತಿಗೆ ಎಲ್ಲರೂ ಮನೆಗಳಿಗೆ ಹೋಗಿ ಊಟ ಮುಗಿಸಿ ಮತ್ತೆ ಆಡಲು ಶುರು ಮಾದುತ್ತಿದ್ದೆವು. ಮತ್ತೆ ಸಂಜೆ ರಾಜಾಜಿನಗರದ ನವರಂಗ್ ಥಿಯೇಟರ್ ಹತ್ತಿರ ನನಗೆ ಸರಿಯಾಗಿ ನೆನಪಿದೆ ಅಂದರೆ ನಿಜಲಿಂಗಪ್ಪ ಕಾಲೇಜ್ ಹತ್ತಿರ ಸಿಟಿ ಸೆಂಟ್ರಲ್ ಲೈಬ್ರರಿ ಒಂದಿತ್ತು , ಅಲ್ಲಿಗೆ ಮನೆ ಇಂದ ಸುಮಾರು ೩-೪ ಕಿ ಮೀ ಇದ್ದಿರಬಹುದು ನಡೆದು ಕೊಂಡು ಹೋಗಿ ಒಳ್ಳೊಳ್ಳೆ ಪುಸ್ತಕಗಳನ್ನು ಓದುವ ಅಭ್ಯಾಸ ಇಟ್ಟುಕೊಂಡಿದ್ದೆವು. ನನಗೆ ಎಷ್ಟೇ ವರುಷ ಆದರೂ ಮರೆಯಲಾರದ ಒಂದು ಮಕ್ಕಳ ಕಥೆ ಎಂದರೆ 'ರಾಜು ಮತ್ತು ಹುರುಳಿ ಬೀಜ' ಅದು ಎಷ್ಟೊಂದು ಚೆನ್ನಾಗಿತ್ತು ಎಂದರೆ ಮನೆಗೆ ಬಂದು ಅಪ್ಪನಿಗೆ ಅಮ್ಮನಿಗೆ ಅಕ್ಕ , ಅಣ್ಣಂದಿರಿಗೆ ಹೇಳಿದ್ದು ಹೇಳಿದ್ದೆ. ನನಗೆ ಈಗಲೂ ಆ ಕಥೆ ಅಚ್ಚು ಮೆಚ್ಚು . ನಂತರ ಸ್ವಲ್ಪ ಹೈ ಸ್ಕೂಲ್ ಗೆ ಬರೋ ಹೊತ್ತಿಗೆ ನನ್ನ ಮೆಚ್ಚಿನ ತ್ರಿವೇಣಿ ಯವರ ಕಾದಂಬರಿಗಳನ್ನು ಓದುತ್ತಿದ್ದೆ. ಅರ್ಯಾಭ ಪಟ್ಟಾಭಿ, ತ್ರಿವೇಣಿ, ಅವರ ಕಾದಂಬರಿ ಗಳು ತುಂಬಾ ಒದುತ್ತಿದ್ದೆ. ನನ್ನಮ್ಮನಿಗೂ ಅವರು ಬರೆದ ಕಾದಂಬರಿಗಳು ತುಂಬಾ ಇಷ್ಟ . ನಮ್ಮ ಮನೆಯಲ್ಲಿ ಎಲ್ಲರಿಗೂ ಓದುವ ಹುಚ್ಚು. ಲೈಬ್ರರಿಗೆ ಹೋಗುವುದು ಬಹಳ ದೂರ ಆಗುತ್ತಿತ್ತು, ಪಾಪ ಮಕ್ಕಳು ನಡೆದು ಹೊಗುವುದನ್ನು ನೋಡಲಾರದೆ ನನ್ನಮ್ಮ ಮನೆಯಲ್ಲೇ ದಿನ ಪತ್ರಿಕೆಯ ಜೊತೆ ಸುಧಾ, ಪ್ರಜಾಮತ, ತರಂಗ, ತುಷಾರ, ಚಂದಮಾಮ, ಬಾಲ ಮಿತ್ರ, ಈ ರೀತಿ ಸುಮಾರು ಪುಸ್ತಕ ಗಳನ್ನೂ ಕೊಂಡು ಕೊಂಡು ಓದಲು ಆರಂಭಿಸಿದೆವು . ಆಗ ಒಳ್ಳೆ ಪೀಕಲಾಟಕ್ಕೆ ಬಂತು ನೋಡಿ ಪೇಪರ್ ನವ ಪುಸ್ತಕ ಕೊಡಲು ಬಂದಾಗ ಓಡಿ ಹೋಗಿ ನಾ ಮೊದಲು ತಾ ಮೊದಲು ಎಂದು ಕಿತ್ತು ಕೊಂಡು ಓದುತ್ತಿದ್ದೆವು. ಧಾರಾವಾಹಿಗಳು ಮುಂದಿನ ವಾರ ಏನಾಗುತ್ತದೋ ಎಂದು ಕುತೂಹಲ ಹುಟ್ಟಿಸುತ್ತಿದ್ದವು , ಹಾಗಾಗಿ ಎಲ್ಲರು ಕಿತ್ತಾಡಿ ಓದುತ್ತಿದೆವು. ಟಿ ಕೆ ರಾಮರಾವ್ , ಎಂಡ ಮೋರಿ ಅವರ ಕಥೆಗಳು ಅಚ್ಚರಿ ಹುಟ್ಟಿಸುತ್ತಿದ್ದವು, ಮುಂದಿನ ವಾರಕ್ಕಾಗಿ ಕಾಯುವಂತೆ ಮಾಡುತ್ತಿದ್ದವು. ಅಂದಿನ ದಿನಗಳು ಇಂದೆಲ್ಲಿ ?? ಅಪ್ಪ ಕೂಡ ತುಂಬಾ ಓದುವ ಹವ್ಯಾಸ ಅವರು ಸಂಜೆ ಹೊತ್ತು ಕೆಲಸ ಮುಗಿಸಿ ಬಂದು ನವರಂಗ್ ಥಿಯೇಟರ್ ಪಕ್ಕದ ಪಾರ್ಕಿನಲ್ಲಿ ನಮ್ಮನ್ನು ಆಡಲು ಕರೆದು ಕೊಂಡು ಹೋಗಿ ಪಾರ್ಕ್ನಲ್ಲಿ ಕುಳಿತು ಸಂಜೆ ಬರುತ್ತಿದ್ದ ಸಂಜೆ ವಾಣಿ ಪತ್ರಿಕೆ ಸಹಾ ಕೊಂಡು ಓದಿ ಮುಗಿಸಿ , ನಮ್ಮನು ಪಾರ್ಕ್ ನಿಂದ ಕರೆದು ಕೊಂಡು ಬರುತ್ತಿದ್ದರು. ಅಹಾ ಎಂತಹ ದಿನಗಳವು !! ಮನೆಯಲ್ಲಿ ಟಿವಿ , ಮೊಬೈಲ್, ಒಂದೂ ಇರದಂಥ ಆ ಕಾಲದಲ್ಲಿ , ಆಟ, ಊಟ, ಓಟ ಎಂದು ನಮ್ಮ ಬಾಲ್ಯ ಎಷ್ಟು ಆನಂದಮಯ ವಾಗಿತ್ತು. ಮತ್ತೆ ನನ್ನಮ್ಮ ರಾಜಾಜಿನಗರದಲ್ಲಿ ಇದ್ದ 'ಮಾತೆ ಮಹಾದೇವಿ' ಅವರ ಪ್ರವಚನ ಇದ್ದ ದಿನಗಳು ಪ್ರವಚನಕ್ಕೆ ಕರೆದೊಯ್ಯುತ್ತಿದ್ದರು . ಶಾಂತ ಚಿತ್ತರಾಗಿ ಮಕ್ಕಳು ವೃಧ್ಧ ರೋಪಾದಿಯಾಗಿ ಎಲ್ಲರೂ ಪ್ರವಚನ ಆಲಿಸುತ್ತಿದ್ದರು. ೬ ರಿಂದ ೯ ಘಂಟೆಗಳ ಕಾಲ ಮುಗಿಸಿ ಕೊಂಡು ೩-೪ ಕಿ ಮೀ ಮಾತನಾಡುತ್ತ ನಡೆದು ಬರುತ್ತಿದ್ದೆವು ದಾರಿ ಸವೆದದ್ದೇ ಗೊತ್ತಗುತ್ತಲಿರಲಿಲ್ಲ. ಅಣ್ಣಾವ್ರ ಸಿನಿಮಾ ಬಂದರಂತೂ ಮನೆ ಮಂದಿಯೆಲ್ಲ ಟಿಕೆಟ್ ಕೊಂಡು ಒಂದೇ ಸಾಲಿನಲ್ಲಿ ಕುಳಿತು ನೋಡುವ ಆ ಮಜವೇ ಬೇರೆ ! ನನ್ನ ಅಣ್ಣಂದಿರು ಫಸ್ಟ್ ಡೇ ಫಸ್ಟ್ ಶೋ ನೋಡುವ ಹುಚ್ಚು ಆಗಿನಿಂದಲೂ ಇತ್ತು ಅದರಲ್ಲೂ ಅಣ್ಣಾವ್ರ ಚಿತ್ರಕ್ಕೆ ಕೇಳ ಬೇಕೇ ವಿಪರೀತ ಜನ ಜಂಗುಳಿ. ಆದರೂ ಅವರು ಫಸ್ಟ್ ಡೇ ಫಸ್ಟ್ ನೋಡಿಯೇ ತೇರುತ್ತಿದ್ದರು. ಹೇಗೆ ಕೇಳಿ ಮಜಾ ಇದೆ ಇಲ್ಲಿ, ಮಹಿಳೆಯರ ಸಾಲಿನಲ್ಲಿ ಅಂತಹ ಗಲಾಟೆ ಗಿಲಾಟೆ ಇರುತ್ತಿರಲಿಲ್ಲ ನಾವು ಊರಿಗೆ ಮುಂಚೆ ಹೋಗಿ ಸಾಲಿನಲ್ಲಿ ನಿಂತು ನಾನು ನನ್ನ ಚಿಕ್ಕ ಅಕ್ಕ ಎರಡು ಟಿಕೆಟ್ ಕೊಂಡು ಅಣ್ಣಂದಿರಿಗೆ ಟಿಕೆಟ್ ಕೊಡಿಸಿ ಅವರ ಆಸೆ ಪೂರೈಸುತ್ತಿದ್ದೆವು. ಕೆಲವೊಮ್ಮೆ ಮಹಿಳೆಯರ ಸಾಲಿನಲ್ಲೂ ಟಿಕೆಟ್ ದೊರೆಯದೆ ಬ್ಲಾಕ್ ಮಾರ್ಕೆಟ್ ನಲ್ಲಿ ಟಿಕೆಟ್ ಕೊಂಡು , ಮಕ್ಕಳು ಎಂದರೆ ಕಮ್ಮಿ ದರದಲ್ಲಿ ಕೊಡುತ್ತಿದ್ದರು, ಅದನ್ನು ಅಣ್ಣನಿಗೆ ಕೊಟ್ಟು ಬರುತ್ತಿದ್ದೆವು. ಮತ್ತೆ ನನ್ನ ಅಣ್ಣ ನಮಗೆ ಕಡ್ಲೆ ಮಿಟಾಯಿ , ಕಡಲೆ ಕೊಡಿಸುತ್ತಿದ್ದ ಅದನ್ನು ತಿನ್ನುತ್ತ ಮನೆ ತಲುಪಿದ್ದೆ ಆಯಿತು . ನಂತರ ರಶ್ ಕಡಿಮೆ ಆದ ಕೆಲವು ದಿನಗಳ ನಂತರ ಮನೆ ಮಂದಿ ಎಲ್ಲ ಹೋಗಿ ಅಣ್ಣಾವ್ರ ಯಾವ ಚಿತ್ರವನ್ನು ಮಿಸ್ ಮಾಡದೆ ನೋಡಿದ್ದೇವೆ . ನನ್ನ ಅಣ್ಣಂದಿರು ಎರಡೆರಡು ಬಾರಿ ನೋಡುತ್ತಿದ್ದರು !! ಒಂದೇ ಒಂದು ಚಿತ್ರ ಕೂಡ ಮಿಸ್ ಮಾಡದೆ ನೋಡಿದ್ದೇವೆ. ಎಲ್ಲ ಚಿತ್ರಗಳನ್ನು ನಮ್ಮ ನೆಚ್ಚಿನ 'ನವರಂಗ್' ಚಿತ್ರಮಂದಿರದಲ್ಲಿ ನೋಡೇ ನೋಡುತ್ತಿದೆವು. ನಾನು ಆರತಿ ಅವರ ದೊಡ್ಡ ಅಭಿಮಾನಿ ಕನ್ನಡ ಪ್ರಭ ದಿನ ಪತ್ರಿಕೆಯಲ್ಲಿ ಬರುತ್ತಿದ್ದ ಆರತಿ , ಅಣ್ಣಾವ್ರು, ಚಿತ್ರ ಗಳನ್ನೂ ಕಟ್ ಮಾಡಿ ಒಂದು ಆಲ್ಬಮ್ ಮಾಡಿ ಇಟ್ಟು ಕೊಂಡಿದ್ದೆ , ಅದರಲ್ಲೂ ಡಾ ರಾಜ್ ಆರತಿ ಅವರ ಜೋಡಿ ನನಗೆ ಬಹಳ ಬಹಳಾ ಇಷ್ಟ . ಕಸ್ತೂರಿ ನಿವಾಸದಿಂದ ಹಿಡಿದು ಅವರ ಬಂಗಾರದ ಪಂಜರ, ರಾಜ ನನ್ನ ರಾಜ, ಮೂರುವರೆ ವಜ್ರಗಳು, ಹೀಗೆ ಹಲವಾರು ಚಿತ್ರದ ಅವರಿಬ್ಬರ ಆಲ್ಬಮ್ ಈಗಲೂ ನನ್ನ ಅಣ್ಣನ ಬಳಿ ಇದೆ. ಆರತಿ ವಿಷ್ಣು ಅವರ ಹೊಂಬಿಸಿಲು, ಹೊಸಿಲು ಮೆಟ್ಟಿದ ಹೆಣ್ಣು, ವಸಂತ ಲಕ್ಷ್ಮಿ ಇವನ್ನೆಲ್ಲ ಕಟ್ ಮಾಡಿ ಒಂದು ಹಳೆ ಪುಸ್ತಕ ದಲ್ಲಿ ಅಂಟಿಸಿ ಇಡುತ್ತಿದೆ. ನನ್ನ ಅಣ್ಣನ ಆಲ್ಬಮ್ ನಲ್ಲಿ ಅಣ್ಣಾವ್ರ ಚಿತ್ರಗಳನ್ನು ಅಂಟಿಸಿ ಕೊಟ್ಟರೆ ಅವನು ಒಂದು ಚಿತ್ರಕ್ಕೆ ೨ ಪ್ಯಾರಿಸ್ ಚಾಕಲೇಟ್ ಕೊಡಿಸುತ್ತಿದ್ದ. ಈ ಕಡ್ಡಾಯದ ಮೇರೆಗೆ ಅವನಿಗೆ ಎಷ್ಟೊಂದು ಅಣ್ಣಾವ್ರ ಚಿತ್ರಗಳನ್ನು ಕನ್ನಡ ಪ್ರಭ ದಿಂದ ಹರಿದು ಅಂಟಿಸಿ ಕೊಡುತ್ತಿದ್ದೆ . ನನ್ನಮ್ಮ ಕೂಡ ಇಂದಿರಾ ಗಾಂಧಿ, ಎಮ್.ಎಸ್ ಸುಬ್ಬಲಕ್ಷ್ಮಿ , ಲತಾ ಮಂಗೇಶ್ಕರ್ , ಆಶಾ ಭೋಂಸ್ಲೆ ಸುನಿಲ್ ಗಾವಸ್ಕರ್, ಕಪಿಲ್ ದೇವ್, ಅವ್ರ ಮದುವೆ ಆದ ಚಿತ್ರಗಳು ಇವೆಲ್ಲಾ ಸಂಗ್ರಹಿಸಿ ಇಡುತ್ತಿದ್ದರು . ಇಂತಹ ಹವ್ಯಾಸಗಳು ಎಷ್ಟು ಮುದ ಕೊಡುತ್ತವೆ ಅಲ್ಲವೇ ? ಈಗ ಇವೆಲ್ಲ ಮರೆಯಾಗುತ್ತಿದೆ. ಅಣ್ಣಾವ್ರ ಒಂದು ಹಾಡಿನ ಸಾಲು ನೆನಪಾಗುತ್ತಿದೆ '' ಕೈ ಜಾರಿ ಒಡೆದ ಮುತ್ತು, ನೀವೀಗ ಕಳೆದಾ ಹೊತ್ತು ಬೇಕೆಂದು ಬಯಸಲು ಮತ್ತೆ ದೊರಕುವುದೇ ದೊರಕುವುದೇ ??? ಎಷ್ಟು ನಿಜ ಅಲ್ಲವೇ ??
ನಾಯಿಗೆ ಇನ್ನೊದು ಹೆಸರು 'ನಿಯತ್ತು' (ಎಂದೋ ಓದಿದ ಕಥೆ )
ಎಂದೋ ಓದಿದ ಕಥೆ
ಮಲ್ಲಿಗೆ ಹಳ್ಳಿಯಲ್ಲಿ ಮಲ್ಲಿಗೆ ಸೋಮಯ್ಯನೆಂಬ ಮಲ್ಲಿಗೆ ಹೂ ಬೆಳೆಯುವ ರೈತನಿದ್ದ. ಅವನನ್ನು ಮಲ್ಲಿಗೆ ಸೋಮಯ್ಯಎಂದೇ ಊರಿನ ಜನರೆಲ್ಲಾ ಕರೆಯುತ್ತಿದ್ದರು. ಅವನಿಗೆ ಸುಂದರವಾದ ಏಕಮಾತ್ರ ಕುವರಿಯಿದ್ದಳು. ಅವಳ ಹೆಸರು ರಜನಿ . ಅವಳು ಸೋಮಯ್ಯ ಬೆಳೆಸಿದ ಹೂಗಳನ್ನು ಮಾಲೆಕಟ್ಟಿ ಬುಟ್ಟಿಯಲ್ಲಿ ಹೊತ್ತುಕೊಂಡು ಹೋಗಿ ಊರಿನಲ್ಲಿ ಸುತ್ತಾಡಿ ಮಾರಾಟ ಮಾಡುತ್ತಿದ್ದಳು. ತದನಂತರ ಊರಿನ ಕಾಳಿಕಾ ದೇವಿಯ ಗುಡಿಯ ಎದುರುಗಡೆ ವ್ಯಾಪಾರ ಮಾಡುತ್ತಿದ್ದಳು. ಈ ರೀತಿಯಲ್ಲಿ ರಜನಿ ತಂದೆಯ ಕಾಯಕದಲ್ಲಿ ಸಹಕಾರಿಯಾಗುತ್ತಿದ್ದಳು. ತಂದೆಗೆ ಮಗಳ ಮೇಲೆ ಎಲ್ಲಿಲ್ಲದ ಪ್ರೀತಿ. ತಾಯಿ ಇಲ್ಲದ ತಬ್ಬಲಿ ಎಂದು ಅವಳನ್ನು ಅತಿ ಮುದ್ದಿನಿಂದ ತಾಯಿ ಇಲ್ಲ ಎಂಬ ಕೊರತೆ ಬಾರದಂತೆನೋಡಿಕೊಂಡಿದ್ದ
ಹೀಗೊಂದು ದಿನ ರಜನಿ ಹೂ ವ್ಯಾಪಾರ ಮಾರಿ ಬರುವಾಗ ಕಾಳಿಕಾ ದೇವಿಯ ಗುಡಿಯ ಹತ್ತಿರ ಆಹಾರವಿಲ್ಲದೆ ಹಸಿವಿನಿಂದ ಕೊರಗಿ ಕೃಶವಾದ ಬಡಕಲು ಶರೀರದ ನಾಯಿ ಮರಿಯೊಂದು ಕಾಣಿಸಿತು. ಆ ಮೂಕ ಪ್ರಾಣಿಯನ್ನು ನೋಡಿ ಅವಳಿಗೆ ಪಾಪ ಎನಿಸಿ ಅದನ್ನು ಕರೆದು ಕೊಂದು ಹೋಗಿ ತನ್ನ ಮನೆಗೆ ಹೊತ್ತುತಂದು ಹಾಲು ಅನ್ನ ಕೊಟ್ಟು ಚೆನ್ನಾಗಿ ಸಾಕಿದಳು. ಒಳ್ಳೆ ಊಟ ಪ್ರೀತಿ ಸಿಕ್ಕ ನಾಯಿ ಬಲಿಷ್ಟವಾಗಿ ಬೆಲೆಯಿತು. ಚೆನ್ನಾಗಿ ಬುದ್ಧಿ ಕಳಿಸಿ ಅವಳ ಹಿಂದೆ ಮುಂದೆ ಓಡಾಡಿ ಕೊಂಡು ಇದ್ದ ತನ್ನ ಪ್ರೀತಿಯ ನಾಯಿಗೆ ಪ್ರೀತಿ ಇಂದ 'ರಾಜ ' ಎಂದು ಹೆಸರಿಟ್ಟಳು. ರಜನಿ ಎಲ್ಲಿಗೆ ಹೊರಟರೂ ಅವಳನ್ನು ಹಿಂಬಾಲಿಸಿ ಬರುತ್ತಿತ್ತು ಹೋಗುತಿತ್ತು . ಅಷ್ಟರಮಟ್ಟಿಗೆ ಆವರಿಬ್ಬರ ನಡುವೆ ಬಿಟ್ಟಿರಲಾರದ ಬಾಂಧವ್ಯ ಬೆಸೆದು ಕೊಂಡಿತ್ತು.
ಮಟಮಟ ಮಧ್ಯಾಹ್ನದ ಏರುಹೊತ್ತಿನ ಸಮಯದಲ್ಲಿ ರಜನಿ ಪಟ್ಟಣದಲ್ಲಿ ಹೂ ವ್ಯಾಪಾರ ಮಾಡಿ ಹಿಂತಿರುಗಿ ಬರುವಾಗ ನಡುದಾರಿಯಲ್ಲಿ ಕಾಮುಕನೊಬ್ಬ ತಡೆದು ನಿಲ್ಲಿಸಿದ. ಆತ ರಜನಿಯ ಸೌಂದರ್ಯದ ಮೇಲೆ ಕಣ್ಣಿಟ್ಟಿದ. ರಾಜ ಇಲ್ಲದ ಸಮಯದಲ್ಲಿ ಮತ್ತು ಆ ಸಂದರ್ಭಕ್ಕಾಗಿ ಕಾಯುತ್ತಿದ. ರಜನಿಯ ಸೀರೆ ಸೆರೆಗೆಳೆದು ಬಲಾತ್ಕರಿಸಲು ಯತ್ನಿಸಿದ. ಮಾನ ರಕ್ಷಣೆಗಾಗಿ ಪುಷ್ಪಗಂಧಿನಿ 'ರಾಜ ರಾಜಾ'' ಎಂದು ಕೂಗಿಟ್ಟಳು ಅವಳ ಆಕ್ರಂದನ ಆಲಿಸಿದ ರಾಜಾ ಎಲ್ಲಿಂದಲೋ ಶರವೇಗದಲ್ಲಿ ಓಡಿ ಬಂದು ಕಾಮುಕನನ್ನು ಕಚ್ಚಿ ರಕ್ತಬರಿಸಿ ಅಟ್ಟಿಸಿ ಕೊಂಡು ಹೋಗಿ ಓಡಿಸಿಬಿಟ್ಟಿತು. ಅವಳ ಮಾನ ಕಾಪಾದಿತು. ರಜನಿ ಕಣ್ಣೀರು ಹಾಕುತ್ತ 'ಮೂಕ ಪ್ರಾಣಿಯಾದ ನಿನಗೆ ನಿಯತ್ತಿದೆ. ಅನ್ನದ ಋಣದ ಅರಿವಿದೆ. ಆದರೆ ಆ ರಾಕ್ಷಸ ಗುಣದ ಕೆಲವು ಮನುಜರ ಬಗ್ಗೆ ಅಸಹ್ಯ ಅನಿಸುತ್ತಿದೆ. ನೀನು ನನ್ನನ್ನು ಕಾಪಾಡಿದ ನಾರಾಯಣ ರೂಪಿ ಭಗವಂತ' ಎನ್ನುತ್ತ ಮನೆಯ ಹಾದಿಯತ್ತ ನಡೆಯಲಾರಂಭಿಸಿದಳು. ಆದ್ದರಿಂದಲೇ ನಾಯಿಯನ್ನು ನಾರಾಯಣ ಎನ್ನುತಾರೆ, ನಾಯಿಗೆ ಇನ್ನೊದು ಹೆಸರು 'ನಿಯತ್ತು' ಎಂದೋ ಓದಿದ ಕಥೆ ನೆನಪಾಯಿತು ಹಂಚಿ ಕೊಂಡೆ ( ಈ ಚಿತ್ರದಲ್ಲಿರುವುದು ನಮ್ಮ ಮನೆಯ ನಾರಾಯಣ ಕಿಲ್ಲರ್ ಎಂದು ಇವನ ಹೆಸರು )
ಈ ಜಗವೆಂಥಾ ಸುಂದರ !!
ಸ್ನೇಹಿತರೆ ನನ್ನ ವಿಚಾರಧಾರೆಗಳು ಮತ್ತೆ ನನ್ನನ್ನು ನನ್ನ ಬಾಲ್ಯಕ್ಕೆ ಕರೆದು ಕೊಂಡು ಹೋಗುತ್ತಿದೆ
ನಮ್ಮ ಬಾಲ್ಯದಲ್ಲಿ ಆರ್ಥಿಕವಾಗಿ ಸುಖ ಕಾಣದಿದ್ದರೂ' ಪ್ರೀತಿಯ ಸುಖ ಉಂಡು ಬೆಳೆದಿದ್ದೆವು. ಕಷ್ಟದಲ್ಲಿ ಬೆಳೆದಿದ್ದರೂ ನನ್ನ ತಾಯಿ ''ಕಷ್ಟವೇನೆ ಇದ್ದರೂ ಬಾಳಿ ಮರೆತು'' ಎಂದು ನಮ್ಮನು ಪ್ರತಿ ದಿನ ಮಂತ್ರ , ಭಜನೆ , ಶ್ಲೋಕಗಳನ್ನು ಬಾಯಿ ಪಾಠ ಮಾಡಿಸುವ ಮುಖಾಂತರ ನಮ್ಮಲ್ಲಿ ಅದನ್ನು ತಪ್ಪದೆ ರೂಡಿಯಲ್ಲಿ ಇಟ್ಟಿದ್ದರು. ದೇವರ ತಲೆ ಮೇಲೆ ಹೂ ತಪ್ಪಿದ್ದರೂ ಬಹುಶಃ ನಮ್ಮ ದೈನಂದಿನ ಭಜನೆ, ಶ್ಲೋಕ ಪಠಣ ಯಾವುದೇ ಕಾರಣಕ್ಕೂ ತಪ್ಪದೆ ಅವ್ಯಾಹತವಾಗಿ ನಡೆಯುತ್ತಿತ್ತು . ಮಂತ್ರ ಶ್ಲೋಕಗಳ ಪಠಣದಿಂದ ಮನಸ್ಸು ಹುರುಪು ಉಲ್ಲಾಸಗಳಿಂದ ಮತ್ತು ತೇಜಸ್ಸಿನಿಂದ ತುಂಬಿರುತ್ತಿತ್ತು . ಆ ದಿನಗಳಲ್ಲಿ ನನಗೆ ತಿಳಿದಂತೆ ಕೊಲೆ, ಸುಲಿಗೆ, ಅತ್ಯಾಚಾರ ಪ್ರಕರಣಗಳು ಬಹಳ ವಿರಳ ಅಥವಾ ಇಲ್ಲವೇ ಇಲ್ಲ ಎಂಬಂತೆ ನಮ್ಮ ಮುಗ್ದ ಮನಸ್ಸುಗಳಲ್ಲಿ ನೆಲೆ ಮಾಡಿತ್ತು . ಯಾಕೆಂದ್ರೆ ನಮ್ಮ ತಂದೆ ತಾಯಿಗಳು ನಮ್ಮ ಮನಸ್ಸುಗಳಿಗೆ ಧಾರೆ ಏರೆದಿದ್ದ ಒಳ್ಳೆಯ ಅಂಶಗಳು. ಮಂತ್ರ ಶ್ಲೋಕಗಳು ನಮ್ಮ ಮನಸ್ಸುಗಳಿಗೆ ದೇವರಲ್ಲಿ, ಗುರು ಹಿರಿಯರಲ್ಲಿ, ಮಹಿಳೆಯರಲ್ಲಿ ಒಳ್ಳೆಯ ಭಾವನೆ ಮುಡುವಂತೆ ಮಾಡಿತ್ತು . ''ಒಳ್ಳೆಯ ಗುಣಗಳಿಂದ ಮನುಷ್ಯ ಮನುಷ್ಯ ನಾಗುತ್ತಾನೆ ಹಾಗೂ ಕೆಟ್ಟ ಗುಣಗಳಿಂದ ಮನುಷ್ಯ ಮನುಷ್ಯ ರೂಪದ ರಾಕ್ಷಸನಾಗುತ್ತಾನೆ'' ಎಂದು ನನ್ನಮ್ಮ ಯಾವಾಗಲು ಹೇಳುತ್ತಿದ್ದರು. ಯಾವುದೇ ಕಾರಣಕ್ಕೆ ನಾವು ಮಕ್ಕಳು ಕೋಪ ಮಾಡಿ ಕೊಂಡರೂ ಸಹಾ ನನ್ನಮ್ಮ ಕೋಪ ಬಂದಾಗ ನಮ್ಮಲ್ಲಿ ರಕ್ಕಸ ಗುಣ ಗಳು ಬರುತ್ತವೆ ಎಂದು ಹೇಳಿದ್ದ ನೆನಪು ನನಗಿನ್ನೂ ನನ್ನ ನೆನಪಿಂದ ಮಾಸಿಲ್ಲ. ಅಂತಹ ಸಹನಾಮಯಿ ಆಕೆ. ಆಹಾ ! ಬಾಲ್ಯದ ನೆನಪುಗಳು ಎಂತಹ ಸುಂದರ !! ಮತ್ತೆ ಬಾಲ್ಯಕ್ಕೆ ಹೋಗಿ ಬಂದಷ್ಟೇ ಖುಷಿ ಕೊಡುತ್ತೆ 'ಆ ದಿನಗಳು' ಆದರೆ ಈಗಿನ ದಿನಗಳಲ್ಲಿ ಎಲ್ಲಿ ನೋಡಿದರೂ ಕೊಲೆ, ಸುಲಿಗೆ, ಕಳ್ಳತನ, ಅತ್ಯಾಚಾರ, ಅನಾಚಾರದ ಬೀಡಾಗಿದೆ. ಮಕ್ಕಳು ದೇವರ ಸಮಾನ ಎನ್ನುತ್ತಿದ್ದ ದಿನಗಳೆಲ್ಲಿ ಹೋದವು ?? ಈಗ ಮಕ್ಕಳು , ಹಸುಗೂಸುಗಳ ಮೇಲೂ ಅತ್ಯಾಚಾರ ಪ್ರಕರಣಗಳು ದಿನೇ ದಿನೇ ಹೆಚ್ಚುತಲೇ ಇವೆ. ಓ ದೇವರೇ ಇಂತಹ ಅನಾಚಾರಗಳಿಗೆ ಕೊನೆ ಎಂದು?? ಇಂತಹ ಅನಾಚಾರಿಗಳಿಗೆ ನೀನೆ ಒಳ್ಳೆಯ ಬುದ್ದಿ ಕೊಟ್ಟು ಅವರಲ್ಲಿ ಒಳ್ಳೆಯ ಗುಣಗಳು ಮೂಡುವಂತೆ ಮಾಡು ಇದು ನನ್ನ ಸವಿನಯ ಕೋರಿಕೆ. ಓ ದಯಾಮಯ ಭಗವಂತ ನಿನ್ನಲ್ಲಿ ನನ್ನ ಒಂದೇ ಕೊನೆ ಅಸೆ ಎಂದರೆ ಎಲ್ಲರೂ ಒಳ್ಳೆಯವರಾಗ ಬೇಕು, ಈ ಪ್ರಪಂಚದಲ್ಲಿ ಕೆಟ್ಟವರೆ ಇಲ್ಲದಂತೆ ಮಾಡು. ಅಗ ಈ ಜಗವೆಂಥಾ ಸುಂದರ !! ಒಹ್ ನನಗೆ ಅಣ್ಣಾವ್ರ ಹಾಡು ನೆನಪಿಗೆ ಬಂತು '' ಈ ಲೋಕವೆಲ್ಲ ನೀನೆ ಇರುವಾ ಪೂಜಾ ಮಂದಿರ, ನಾ ಕಾಣುತ್ತಿರುವ ನೋಟವೆಲ್ಲಾ ಸತ್ಯಾ ಸುಂದರ!! ವಾಹ್ ಆ ದಿನಗಳು ಬಹು ಬೇಗ ನೋಡುವಂತಾಗಲಿ !!!
ಬಾಲ್ಯದ ಮಧುರ ಕ್ಷಣಗಳು !! ನನ್ನ ನೆನಪಿನಂಗಳದಿಂದ
ನನ್ನ ನೆನಪಿನಂಗಳದಿಂದ ೧
ನಾನು ತುಂಬಾ ಚಿಕ್ಕವಳಿದ್ದಾಗ ನನ್ನಮ್ಮ ನಮ್ಮನ್ನೆಲ್ಲ ಕುಳ್ಳಿರಿಸಿ ಕೊಂಡು ಸಂಜೆ ದೇವರ ಮುಂದೆ ದೀಪ ಹಚ್ಚಿ ನಾವೆಲ್ಲಾ ಮಕ್ಕಳು ಕೈ ಕಾಲು ತೊಳೆದು ಕೊಂಡು ದೇವರ ನಾಮ ಶ್ಲೋಕಗಳನ್ನು ಬಾಯಿ ಪಾಠ ಮಾಡಿಸಿ, ಪ್ರತಿ ದಿನ ದೀಪ ಹಚ್ಚಿದ ನಂತರ ನಾವುಗಳೆಲ್ಲ ಅಮ್ಮನೊಂದಿಗೆ ದೇವರ ನಾಮ, ಕೇಶವ ನಾಮ, ರಾಮ ನಾಮ, ಗಣಪತಿ, ಶಾರದೆ ಶ್ಲೋಕಗಳನ್ನು ಭಜನೆ ರೀತಿ ಹಾಡಿ ಕೊಳ್ಳುತ್ತಿದೆವು . ನಂತರ ಎರಡು ತಾಸು ಓದಿ ಕೊಂಡು , ಬರೆದು ಕೊಂಡು , ನಂತರ ದೇವರು ಕೊಟ್ಟದ್ದನು ತಿಂದು ಮಲಗುವ ಮುನ್ನ ದುಃಸ್ವಪ್ನಗಳು ಬೀಳದಂತೆ ನಮ್ಮಮ್ಮ ಹೇಳಿ ಕೊಟ್ಟಿದ್ದ ''ರಾಮಸ್ಕಂದಂ ಹನುಮಂತಂ ವೈನತೆಯಮ್ ವ್ರುಕೊದರಂ, ಶಯನೇಯಾ ಸ್ಮರೆನಿತ್ಯಂ ದುಃಸ್ವಪ್ನನಂ ತಷ್ಯ ನಶ್ಯತಿ'' ಈ ಶ್ಲೋಕ ವನ್ನು ಹೇಳಿಕೊಂಡು ನಿದಿರೆಯ ಮಡಿಲಿಗೆ ಜಾರುತ್ತಿದೆವು. ನನಗೇನಾದರೂ ನಿದ್ದೆ ಇನ್ನು ಬಂದಿಲ್ಲ ಎಂದರೆ ನನ್ನಮ್ಮ ನನಗೆ ಶ್ರೀ ರಾಮನ ಕಥೆಗಳು, ಶ್ರೀ ಕೃಷ್ಣನ ಕಥೆಗಳು, ಭಕ್ತ ಧ್ರುವ, ಭಕ್ತ ಪ್ರಹ್ಲಾದ, ಸತ್ಯ ಹರಿಶ್ಚಂದ್ರ ಇಂತಹ ಒಳ್ಳೊಳ್ಳೆ ಕಥೆಗಳನ್ನು ಹೇಳಿ ಮಲಗಿಸುತ್ತಿದ್ದರು. ಹೀಗೆ ಸುಖ ನಿದ್ದೆಗೆ ಜಾರುತ್ತಿದೆ. ಮತ್ತೆ ಬೆಳಿಗ್ಗೆ ಏಳುವ ಮುನ್ನಕೈಗಳನ್ನು ಎರಡೂ ಕೈ ಜೋಡಿಸಿ ಕರ ದರ್ಶನ ಮಾಡಿ 'ಕರಾಗ್ರೆ ವಸತೇ ಲಕ್ಷ್ಮಿ ಕರಮಧ್ಯೇ ಸರಸ್ವತಿ ಕರಮೂರ್ಲೆ ಸ್ತಿತೆ ಗೌರಿ ಪ್ರಭಾತೆ ಕರದರ್ಶನಂ '' ಎಂದು ಹೇಳಿಕೊಂಡು ದೇವರ ಫೋಟೋ ನೋಡಿ ನಂತರ ಬೇವಿನ ಕಡ್ಡಿ ಇಂದ ಹಲ್ಳುಜಿ ಕೊಂಡು , ಹಂಡೆ ಇಂದ ಬಿಸಿ ನೀರು ಬಸಿದು ಕೊಂಡು ಎಲ್ಲರು ಕೈ ಕಾಲು ಮುಖ ತೊಳೆದು ಕೊಂಡು ಕಾಪಿ ಸೇವಿಸುವ ಹೊತ್ತಿಗೆ ಅಪ್ಪನ ಸ್ನಾನ ಸಂಧ್ಯಾವಂದನೆ , ದೇವರ ಪೂಜೆ ಎಲ್ಲ ಮುಗಿದು ಅಪ್ಪ ಸೈಕಲ್ ಏರಿ ಕೆಲಸಕ್ಕೆ ಹೊರಡುತ್ತಿದ್ದರು . ಅಮ್ಮ ಬೆರಣಿ ಸೌದೆ ಇತ್ತು ಓಲೆ ಹೊತ್ತಿಸಿ ನಮಗೆಲ್ಲ ಏನಾದರು ತಿನ್ನಲು ತಯಾರಿಸಿ ನಮ್ಮಣ್ಣ ಶಾಲೆಗೇ ಸಾಗ ಹಾಕುತ್ತಿದ್ದರು. ನಂತರ ನಮ್ಮ ಶಾಲೆ ಸಮೀಪ ಇದ್ದ ಕೆರೆಯಲ್ಲಿ ನಮ್ಮ ಬಟ್ಟೆಗಳನ್ನು ಶುಭ್ರ ವಾಗಿ ಒಗೆದು ಒಣಗಿಸಿಕೊಂಡು ನಂತರ ಮನೆಗೆ ಹೋಗಿ ಮನೆ ಕೆಲಸ ಎಲ್ಲ ಮುಗಿಸಿ ನಮ್ಮ ಬರುವನ್ನು ನಿರೀಕ್ಷಿಸಿ ನಮಗಾಗಿ ಕಾಯುತ್ತ ಬಾಗಿಲ ಬಳಿಯೇ ಇರುತ್ತಿದ್ದರು. ನಮ್ಮನ್ನೆಲ್ಲ ಕಂಡಾಗ ಆಕೆಯ ಕಂಗಳಲಿ ಕಾಣುತ್ತಿದ್ದ ಆ ಆನಂದ ವರ್ಣಿಸಲಸಾಧ್ಯ ಆಗ ನಮ್ಮ ಮನೆಯಲ್ಲಿ ರೇಡಿಯೋ ಸಹಾ ಇರಲಿಲ್ಲ. ಅಂದಿನ ದಿನಗಳಲ್ಲಿ ಪಾಪ ಆಕೆಗೆ ಎಂತಹ ಮನರಂಜನೆ ಕೂಡ ಇಲ್ಲ. ನಮ್ಮ ಲಾಲನೆ ಪೋಷಣೆ ಯಲ್ಲೇ ಅದೆಂತಹ ಆನಂದಮಯಿ ಆಕೆ. ನಮ್ಮ ಬೆಳವಣಿಗೆಯಲ್ಲೆ ನಮ್ಮ ತಾಯಿ ಸ್ವರ್ಗ ಸುಖ ಅನುಭವಿಸುತ್ತಿದ್ದರು. ಎಂದೂ ಶಾಪಿಂಗ್ ಆಗಲಿ, ಅಥವಾ ನಮ್ಮ ತಂದೆ ಯೊಂದಿಗೆ ಎಲ್ಲಾದರೂ ಹೊರಗಡೆ ಹೋಗುವುದಾಗಲೀ ಇಂತಹ ಕ್ಷಣಗಳು ದೊರೆಯುತ್ತಲೇ ಇರಲಿಲ್ಲ ಯಾಕೆಂದ್ರೆ ನಮ್ಮ ತಂದೆ ತಮ್ಮ ಹೋಟೆಲ್ ನಡೆಸುವ ಕೆಲಸದೊಂದಿಗೆ, ಸ್ವತಂತ್ರ ಹೋರಾಟಗಾರರು ಕೂಡ, ಇದ್ದ ಬದ್ದದನ್ನೇಲ ದಾನ ಧರ್ಮ ಮಾಡುವ ಪರಿ ಕೇಳಲೇ ಬೇಡಿ ಕಸ್ತೂರಿ ನಿವಾಸದ ರಾಜಣ್ಣ ನ ಕಥೆಯೇ ನಮ್ಮ ತಂದೆಯದು. ಅವರು ಹೋಟೆಲ್ ಉದ್ಯಮದಲ್ಲಿ ಒಳ್ಳೆ ಹೆಸರು ಮಾಡಿದ್ದರು ಅದೇ ಸಮಯದಲ್ಲಿ ರಾಜ ಶಂಕರ್ ನಂತೆ ಒಬ್ಬರು ನಮ್ಮ ತಂದೆಯ ಪಾಲುದಾರರಾಗಿ ಬಂದು ಅಪ್ಪನ ಮನ ವೊಲಿಸಿ ಇದ್ದ ಬದ್ದದ್ದನ್ನೆಲ್ಲ ಅವನ ಹೆಸರಿಗೆ ಮಾಡಿಕೊಂಡು ಅಪ್ಪನಿಗೆ ಮೋಸ ಮಾಡಿ ಅವರು ಉದ್ಧಾರ ಆದರಂತೆ . ನಮ್ಮ ತಂದೆಯೇ ಹೇಳಿದಂತೆ ಅವರು ಮಾಡಿದ ದಾನ-ಧರ್ಮ ನಮ್ಮನ್ನು ಕಾಯುತ್ತಿದೆ'' ದೇವರು ಒಳ್ಳೆಯವರನ್ನು ಎಂದಿಗೂ ಕಾಯುತ್ತಾನೆ ಎಂದು ನಮ್ಮ ಅಪ್ಪ ಅಮ್ಮ ಯಾವಾಗಲೂ ಹೇಳುತ್ತಿದ್ದರು . ಅದು ಖಂಡಿತ ಸತ್ಯ ನಾವೆಲ್ಲಾ ಅಂದರೆ ನನ್ನ ಅಕ್ಕಂದಿರು ಅಣ್ಣಂದಿರು ಹಾಗು ನಾನು ಕೂಡ ಈಗ ತುಂಬಾ ಸುಖವಾಗಿದ್ದೇವೆ ಅದು ನಮ್ಮ ತಂದೆ ತಾಯಿ ಮಾಡಿದ ಪುಣ್ಯದ ಫಲ. ಅಂತಹ ತಂದೆ ತಾಯಿಗಳನ್ನು ಪಡೆದ ನಾವೇ ಧನ್ಯರು! ನಾನು ದೇವರಿಗೆ ಸದಾ ಚಿರಋಣಿ. ಇಂತಹ ನೂರು ನೆನಪುಗಳು , ನಮ್ಮ ಬಾಲ್ಯದ ಆ ಸಿಹಿ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿ ಕೊಂಡರೆ ನನಗೂ ಅದೆಂತಹ ಆನಂದ ವಾಗುತ್ತಿದೆ ಗೊತ್ತೇ !!!
ನೆನಪು ಮರುಕಳಿಸಿದಾಗ !!
ಯಾಕೋ ಹೀಗೆ ಬರೆಯಬೇಕು ಅನ್ನಿಸಿತು . ಹಿಂದೆಲ್ಲ ನಾವು ಚಿಕ್ಕವರಿದ್ದಾಗ ಫಲಿತಾಂಶದ ದಿನ ಬಂತೆಂದರೆ ಅದೇನು ಹಬ್ಬದಸಂಭ್ರಮ ಅಂತೀರಾ . ಆಗ ಈಗಿನಂತೆ %, ಪ್ರಥಮ ರ್ಯಾಂಕಿಗೆ ಅಂತ ಮಹತ್ವ ಇದ್ದ ಮಟ್ಟಿಗೆ ನನಗೆ ತಿಳಿದಿಲ್ಲ. ಒಟ್ಟು ಎಲ್ಲರೂ ಫಸ್ಟ್ ಕ್ಲಾಸಿನಲ್ಲಿ ಪಾಸಾಗುತ್ತಿದ್ದೆವು. ನಮ್ಮ ಮನೆಯಲ್ಲಿ ಎಲ್ಲರಿಗೂ ೨-೩ ವರ್ಷದ ಅಂತರ. ನಾನು ಕಡೆಯವಳು. ಎಲ್ಲಾ ಅಣ್ಣಂದಿರು ಅಕ್ಕಂದಿರೆ ಇದ್ದದ್ದು. ಉಡುಪಿ ಇಂದ ಅಪ್ಪ ಅಮ್ಮ ಬೆಂಗಳೂರಿಗೆ ಬಂದು ಇಲ್ಲೇ ಉದ್ಯೋಗ ಹಿಡಿದು ಅಪ್ಪ ನಮ್ಮನ್ನೆಲ್ಲ ರಾಜಾಜಿನಗರದ ಶಿವನಹಳ್ಳಿ ಯಲ್ಲಿ ಇರುವ ಒಂದು ಸರ್ಕಾರಿ ಶಾಲೆಯಲ್ಲಿ ಓದಿಸುತ್ತಿದ್ದರು. ನಾವೆಲ್ಲರೂ ದೇವರ ದಯೆ ಇಂದ ಬುದ್ದಿವಂತರೇ ಅಗಿದ್ವಿ. ಸೊ ಹಾಗಾಗಿ ಶಾಲೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಯಾವಾಗಲು ಪ್ರಥಮ ದರ್ಜೆ ಯಲ್ಲಿ ತೇರ್ಗಡೆ ಆಗುತ್ತಿದ್ದೆವು. ಆಗ ಪುಸ್ತಕಗಳನ್ನು ಜೋಪಾನವಾಗಿ ಕಾಪಾಡಿಕೊಂಡು ಬರುತ್ತಿದ್ದೇವು. ನನ್ನ ಅಕ್ಕ ದೊಡ್ಡವಳು ಅವಳ ನಂತರ ಆ ಪುಸ್ತಕಗಳು ನನ್ನ ದೊಡ್ಡ ಅಣ್ಣನಿಗೆ ಹೊಗುತ್ತಿದ್ದವು. ಅವನು ಓದಿದ ನಂತರ ಅದನ್ನು ಜೋಪಾನವಾಗಿರಿಸಿ ನಂತರ ನನ್ನ ಎರಡನೇ ಅಕ್ಕನಿಗೆ ಅದೇ ಪುಸ್ತಕಗಳು ಅವಳ ನಂತರ ಅದೇ ಪುಸ್ತಕಗಳು ನನ್ನ ಎರಡನೇ ಅಣ್ಣನಿಗೆ ಓದು ಮುಗಿಸಿದ ನಂತರ ನನ್ನ ಅಮ್ಮ ಮೂರು ವರುಷ ಅದನ್ನೇ ಜೋಪಾನವಾಗಿರಿಸಿ ಅದಕ್ಕೆ ನ್ಯೂಸ್ ಪೇಪರ್ ಶೀಟ್ಸ್ ನಿಂದ ಹೊದಿಕೆ ಹೊದಿಸಿ ನನಗೆ ಕೊಡುತ್ತಿದ್ದರು. ನನ್ನ ನಂತರ ಅದನ್ನ ಅರ್ಧ ಬೆಲೆಗೆ ನಮ್ಮ ಜೂನಿಯರ್ಸ್ ಯಾರಿಗಾದರು ಪುಸ್ತಕ ಬೇಕಿದ್ರೆ ಅದನ್ನೇ ಕೊಟ್ಟು ಬಂದ ಹಣದಿಂದ ಪೆನ್ನೊ ಪೆನ್ಸಿಲ್ಲೋ ರಬ್ಬರೋ, ನೋಟ್ ಬುಕ್ಸ್ ಗಳನ್ನೊ ಕೊಳ್ಳುತ್ತಿದ್ದೇವು. ಅಷ್ಟಕ್ಕೇ ನಿಲ್ಲಲಿಲ್ಲ ಇನ್ನೂ ಹೇಳ್ತೀನಿ ಕೇಳಿ ಎಲ್ಲರ ನೋಟ್ ಬುಕ್ಸ್ ನಿಂದ ಉಳಿದ ಹಾಳೆಗಳನ್ನು ಕಿತ್ತು ಅದರಿಂದ ೧೦೦ ಪೇಜ್ ಪುಸ್ತಕಗಳನ್ನು ಮಾಡಿ ನಮ್ಮ ಅಪ್ಪ ಹೊಲಿದು ಅದಕ್ಕೆ ನ್ಯೂಸ್ ಪೇಪರ್ ನಿಂದ ಹೊದಿಕೆ ಹೊದಿಸಿ ಹೊಸ ನೋಟ್ ಬುಕ್ಸ್ ಮಾಡಿ ಕೊಡುತ್ತಿದ್ದರು. ನಮಗೋ ಖುಷಿಯೋ ಖುಷಿ ಅಪ್ಪ ಉಳಿದ ಹಾಳೆಗಳನ್ನು ಒಟ್ಟು ಮಾಡಲು ಹೇಳಿ ಜೋಡಿಸಿದಳು ನಮ್ಮ ಅಣ್ಣ ಅಕ್ಕಂದಿರಿಗೆ ಹೇಳುತ್ತಿದ್ದರು. ಎಲ್ಲರ ಫಲಿತಾಂಶ ಬಂದ ದಿನ ಇದನ್ನೆಲ್ಲಾ ಒಟ್ಟು ಮಾಡಿ ರಫ್ ನೋಟ್ ಕಾಪಿ ನೋಟ್ ಬುಕ್ಸ್ ಮತ್ತೆ ಡಬಲ್ ಶೀಟ್ಸ್ ಮಧ್ಯದಲ್ಲಿ ಸಿಕ್ಕರೆ ಅದನ್ನು ಹಾಗೆ ಇಟ್ಟು ಕೊಂಡು ಟೆಸ್ಟ್ ಬರೆಯಲು ಆ ಡಬಲ್ ಶೀಟ್ಸ್ ಹಾಳೆಗಳನ್ನು ಉಪಯೋಗಿಸುತ್ತಿದ್ದೆವು. ನಮ್ಮ ಅಮ್ಮ ಫಲಿತಾಂಶದ ದಿನ ಒಂದಷ್ಟು ಪಾಯಸ ಮಾಡುತ್ತಿದ್ದರು. ನಮ್ಮ ತಂದೆಯವರು ಬಂದ ಕೂಡಲೇ ''ಏನೂಂದ್ರೆ ನೋಡಿ ನಮ್ಮ ಮಕ್ಕಳೆಲ್ಲಾ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಯಾಗಿದ್ದಾರೆ ಶಾಲೆಯ ಮುಖ್ಯೋಪಾಧ್ಯರು ತುಂಬಾ ಮೆಚ್ಚುಗೆ ವ್ಯಕ್ತ ಪಡಿಸಿ ಹೊಗಳಿದರು. ಇದಕ್ಕಿಂತ ಸಂತೋಷ ಬೇಕೇ ನಮಗೆ, ನೋಡಿ ಅದಕ್ಕೆಂದೇ ಇಂದು ಪಾಯಸ ಮಾಡಿದ್ದೇನೆ ಕುಡಿಯಿರಿ'' ಎಂದು ಅದೆಷ್ಟು ಖುಷಿ ಇಂದ ನಮ್ಮ ತಂದೆಗೆ ನಮಗೆಲ್ಲ ಪಾಯಸ ಕೊಟ್ಟು ನಂತರ ಪಾತ್ರೆಯ ತಳಕ್ಕೆ ಸ್ವಲ್ಪ ನೀರು ಬೆರೆಸಿ ಪಾತ್ರೆ ಆಡಿಸಿ ಅದನ್ನು ತಾನು ಕುಡಿಯುತ್ತಿದ್ದರು. ಅದೆಂಥಾ ಮಹಾ ತಾಯಿ ನನ್ನಮ್ಮ ನಮ್ಮ ವಿದ್ಯಾಭ್ಯಾಸ ನಮ್ಮ ಏಳಿಗೆ ಕಂಡು ಹೊಟ್ಟೆ ತುಂಬಾ ಊಟ ಇರದಿದ್ದರೂ ೭ ಜನ ಮಕ್ಕಳನ್ನು ಒಳ್ಳೆಯ ವಿದ್ಯಾವಂತರಾಗಿ ಬುದ್ದಿವಂತರನ್ನಾಗಿ ಮಾಡಿ ಈ ದೇಶಕ್ಕೆ ಒಳ್ಳೆಯ ಪ್ರಜೆಗಳನ್ನಾಗಿ ಮಾಡಿ ತನ್ನ ಕರ್ತವ್ಯ ಪೂರ್ಣ ಮಾಡಿ ಅಪ್ಪ ಅಮ್ಮ ದೇವರ ಪಾದ ಸೇರಿದರು. ಆಗಿನ ಕಾಲದಲ್ಲಿ ದುಡ್ಡು ಇರಲಿಲ್ಲ ಆದರೂ ಆಗ ಸಿಕ್ಕುತ್ತಿದ್ದ ಪ್ರೀತಿ, ಕಾಳಜಿ, ಆ ಆತ್ಮ ಸ್ತೈರ್ಯ , ವಿದ್ಯೆಯಾ ಬಗ್ಗೆ ಇದ್ದಂಥ ಆ ಗೌರವ, ಈಗ ಎಲ್ಲೋ ಕಾಣೆಯಾಗುತ್ತಿದ್ದಂತೆ ಭಾಸವಾಗುತ್ತಿದೆ. ನಾವು ಹತ್ತನೇ ತರಗತಿಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದಾಗ ನನಗೆ ಚೆನ್ನಾಗಿ ನೆನಪಿದೆ, ನಮ್ಮ ಶಾಲೆಯ ಮುಖ್ಯೋಪಾಧ್ಯಾಯರು ನಮಗೆ ಒಂದು ಒಳ್ಳೆಯ ಶಾಯಿ ತುಂಬುವ ಪೆನ್ ಕೊಟ್ಟು ನಮ್ಮನು ಹರಸಿ ಸಿಹಿ ಕೊಟ್ಟು ಶಾಲೆ ಇಂದ ಬೀಳ್ಕೊಟ್ಟಿದ್ದು ನನಗೆ ಇನ್ನೂ ನನ್ನ ನೆನಪಿನ ಸಾಗರದಲ್ಲಿ ಹಾಗೆ ಉಳಿದು ಕೊಂಡಿದೆ. ಆಮೇಲೆ ನನ್ನಮ್ಮ ಏನು ಮಾಡುತ್ತಿದ್ದರು ಅಂದರೆ , ನಮ್ಮನ್ನೆಲ್ಲ ಬೇಸಿಗೆ ರಜದಲ್ಲಿ ಕುಳ್ಳಿರಿಸಿ ಮುಂದಿನ ತರಗತಿಯ ಪುಸ್ತಕ ಕೊಟ್ಟುರಫ್ ನೋಟ್ ಪುಸ್ತಕದಲ್ಲಿ ಅದನ್ನೆಲ್ಲ ಪ್ರತಿ ದಿನ ಎರಡೆರಡು ಪುಟ ಬರೆಯುವಂತೆ ಹೇಳಿ ತಾನು ನಮ್ಮೊಂದಿಗೆ ಕುಳಿತು ನಮ್ಮ ಅಕ್ಷರಗಳನ್ನು ಮುತ್ತಿನಂತೆ ಬರೆಯುವಂತೆ ತೋರಿಸಿಕೊಟ್ಟವರೇ ನನ್ನಮ್ಮ. ನಮ್ಮ ಮನೆಯಲ್ಲಿ ನನ್ನ ಅಣ್ಣಂದಿರಿಗೆ , ಅಕ್ಕಂದಿರಿಗೆ, ಹಾಗೂ ನನಗೂ ಸಹ ನಮ್ಮ ನೀಟ್ ಬುಕ್ , ಮತ್ತೆ ಎಲ್ಲ ನೋಟ್ಸ್ ನಲ್ಲಿ ಪ್ರತಿಯೊಂದು ಪಾಟಕ್ಕು 'ಬರವಣಿಗೆ ಅಂದವಾಗಿದೆ' ಎಂದು ಬರೆದು ಟೀಚರ್ಸ್ ಸಹಿ ಹಾಕುತ್ತಿದ್ದರು. ಅದೆಷ್ಟು ಆನಂದ ನಮಗಾಗ ಅದನ್ನು ಶಾಲೆ ಇಂದ ಓಡಿ ಬಂದು ಅಮ್ಮನಿಗೆ ನಮ್ಮ ಪುಸ್ತಕ ತೆರೆದು ತೊರಿಸುತ್ತಿದೆವು. ಅಮ್ಮನ ಕಂಗಳಲ್ಲಿ ಅದೆಂತಹ ಆನಂದ ಅಂದರೆ ವರ್ಣಿಸಲಸಾಧ್ಯ !!!!
Subscribe to:
Posts (Atom)