Tuesday, December 16, 2014

<< ಸಾತ್ವಿಕ ಆಹಾರ >>





ಆಹಾರ 

ಆಹಾರ  ಸೇವನೆ ನಮ್ಮ ದೇಹಕ್ಕೆಗೆ ಮಾತ್ರ ಎಂದು ನಾವು ತಿಳಿದಿದ್ದೇವೆ. ಆದರೆ ದೇಹಧಾರಣೆಗಾಗಿ ನಾವು ಸೇವಿಸುವ ಆಹಾರ ನಮ್ಮ  ಗುಣ ಪರಿವರ್ತನೆಯನ್ನೂ ಮಾಡುತ್ತದೆ. ಈ ಸೃಷ್ಟಿಯಲ್ಲಿ ಇರುವುದು ಮೂರು ಗುಣಗಳು. 'ಸಾತ್ವಿಕ' , 'ರಾಜಸ'  ಹಾಗೂ  'ತಾಮಸ'. ಮನುಷ್ಯರನ್ನು ಸೇರಿ ಎಲ್ಲಾ ಪ್ರಾಣಿಗಳಲ್ಲೂ ಈ ಮೂರು ಗುಣಗಳು ಬೇರೆ ಬೇರೆ ಪ್ರಮಾಣಗಳಲ್ಲಿ ಇರುತ್ತದೆ. ಯಾವ ಗುಣದ ಪ್ರಮಾಣ ಯಾರಲ್ಲಿ ಅಧಿಕವಾಗಿರುತ್ತದೋ,  ಅವರ ಕಾರ್ಯ ಕೆಲಸಗಳು ಹಾಗಿರುತ್ತವೆ.  ನಮ್ಮ ಎಲ್ಲಾ ಕೆಲಸ ಕಾರ್ಯಗಳೂ ನಮ್ಮ ಮನಸ್ಸು ಬುಧ್ಧಿಯ ಮೇಲೆ ಅವಲಂಬಿಸಿರುತ್ತದೆ. ಮನಸ್ಸು ಬುಧ್ಧಿಗಳು ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಜೀವ ರಸಗಳನ್ನು ಅವಲಂಬಿಸಿರುತ್ತದೆ. ಈ ರಸಗಳ ಉತ್ಪತ್ತಿಯು ನಾವು ಸೇವಿಸುವ ಆಹಾರವನ್ನು ಅವಲಂಬಿಸಿರುತ್ತದೆ. ಹಾಗಾಗಿ ನೇರವಾಗಿ ನಮ್ಮ ಕೆಲಸ, ಸ್ವಭಾವ ಮತ್ತು ಗುಣ ನಾವು ಸೇವಿಸುವ ಆಹಾರದ  ಮೇಲೆ ಅವಲಂಬಿಸಿರುತ್ತದೆ.

ಮೇಲೆ ಹೇಳಿದ ಮೂರು ಗುಣಗಳು ಈ ರೀತಿಯಾಗಿ ಇರುತ್ತವೆ :

೧)  ಶಾಂತತೆ , ಕಾರುಣ್ಯ , ದಯೆ , ಪ್ರೇಮ, ಪೀತಿ,  ಸಹನೆ, ಸಹಿಷ್ಣುತೆ, ಸಭ್ಯತೆ, ಭಕ್ತಿ, ಮುಂತಾದ ಎಲ್ಲ ಗುಣಗಳೂ ಸಾತ್ವಿಕ ಗುಣದ ಪರಿಧಿಯಲ್ಲಿ ನಿಲ್ಲುತ್ತವೆ.

೨)  ವೇಗ, ಸಿಟ್ಟು, ಆತುರ,  ಕ್ರೋದ, ಅಸಹನೆ, ಹಠ, ಮೋಹ, ಮುಂತಾದ ಗುಣಗಳು 'ರಾಜಸ' ಗುಣದ ಪ್ರತೀಕವಾಗಿರುತ್ತದೆ.

೩)  ಆಲಸ್ಯ, ನಿದ್ದೆ, ಕ್ರಿಯಾಹೀನತೆ, ಕೊಳಕುತನ, ಕಳ್ಳಬುಧ್ಧಿ, ಅಸಭ್ಯತೆ,  ನಡತೆಯಲ್ಲಿ ಹೊಲಸುತನ ಮುಂತಾದವು ತಾಮಸಿಕ ಗುಣವನ್ನು ಸೂಚಿಸುತ್ತದೆ.

ಬನ್ನಿ ಸ್ನೇಹಿತರೆ ನಾವೆಲ್ಲರೂ ಸಾತ್ವಿಕ ಆಹಾರ ಸೇವಿಸಿ ಸಾತ್ವಿಕ ಗುಣವನ್ನು ನಮ್ಮದಾಗಿಸಿಕೊಳ್ಳೋಣ

2 comments:

  1. ಹೊಸ ಬ್ಲಾಗಿಗೆ ಅಭಿನಂದನೆಗಳು.

    ಆಹಾರ ಸೇವನೆಯು ಮನಸ್ಸನ್ನು ನೇರವಾಗಿ ಹೇಗೆ ನಿಯಂತ್ರಿಸುತ್ತದೆ ಎನ್ನುವುದನ್ನು ಸರಳವಾಗಿ ವಿವರಿಸಿದ್ದೀರ.
    ಸಾತ್ವಿಕ ಆಹಾರವು ನಮಗೆ ಸೂತ್ರವಾಗಲಿ.

    ReplyDelete
    Replies
    1. ಹೃದಯ ಪೂರ್ವಕ ಧನ್ಯವಾದಗಳು ; ತಮ್ಮ ಈ ಪ್ರೋತ್ಸಾಹಕ್ಕೆ ನಾನು ಸದಾ ಋಣಿ ನಿಮ್ಮ ಈ ಬೆಂಬಲ, ವಿಶ್ವಾಸ ಸದಾ ಹೀಗೆ ಇರಲಿ ಎಂದು ಆ ದೇವರನ್ನು ಪ್ರಾರ್ಥಿಸುತ್ತೇನೆ

      Delete