Friday, October 7, 2016

Uma Prakash: ' ಸಾವು'
ಇಂದೇಕೋ ನನ್ನನ್ನು ಸಾವು ತುಂಬಾ ಕಾಡುತ್ತಿದೆ ಅನ್ನಿಸಿತು.  ಸಾವಿನ ಬಗ್ಗೆ ಬಹಳ ತೀವ್ರವಾಗಿ ಆಲೋಚಿಸಿದೆ! ಈ 'ಸಾವು' ಅಂದರೆ ಏನು? ಯಾತಕ್ಕಾಗಿ ಹುಟ್ಟಿರುವ ಪ್ರತಿ ಜೀವಿಯೂ ಸಾಯಲೇ ಬೇಕು ?  ಜೀವ ಇರುವ ಮಾನವ ಸಂಕುಲ, ಪಕ್ಷಿ ಸಂಕುಲ, ಪ್ರಾಣಿಗಳು, ಅದಷ್ಟೇ ಅಲ್ಲದೆ ಗಿಡ-ಮರಗಳು ಕೂಡ ಇಂತಿಷ್ಟೇ ವರುಷ ಎಂದು ಜೀವಿಸುತ್ತದೆ !!!! ಸಾವು ಪ್ರತಿಯೊಬ್ಬರನ್ನು ಒಂದಲ್ಲ ಒಂದು ರೀತಿ ಬಲಿ ತೆಗೆದುಕೊಂಡೆ ತೀರುತ್ತದೆ.  ಅದು ಸ್ವಾಭಾವಿಕ ಸಾವೇ ಆಗಬೇಕೆಂದಿಲ್ಲ; ಸಾವಿನಲ್ಲೂ ತುಂಬಾ ಪ್ರಾಕಾರಗಳಿವೆ.   ಆಕಸ್ಮಿಕ ಸಾವು ಅಂದರೆ ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಳ್ಳುವವರು, ವಾಹನಗಳಿಗೆ ಸಿಲುಕಿ ಮರಣ ಹೊಂದುವವರು, ವಾಹನಗಳಲ್ಲಿ ಪ್ರಯಾಣಿಸುವಾಗ ಸಾವನಪ್ಪುವವರು, ನದಿಯಲ್ಲಿ ಸ್ನಾನ ಮಾಡುವಾಗ ಸಾವನಪ್ಪುವವರು, ಬೆಂಕಿ ದುರಂತದಲ್ಲಿ ಸಾವನಪ್ಪುವವರು ಹೀಗೆ ಹಲವಾರು ಪ್ರಾಕಾರಗಳು.  ನನಗೆ ಸಾವು ಯಾವ ರೀತಿ ಬರಬಹುದು ಎಂದು ಬಹಳ ಯೋಚನೆ ಆಗಿದೆ? ಸ್ವಾಭಾವಿಕವಾಗಿ ನನ್ನ ಆಯಸ್ಸು ಮುಗಿದ ನಂತರ ಸತ್ತರೆ ಅಡ್ಡಿ ಇಲ್ಲ, ಬೇರೆ ಯಾವುದೇ ಅನಾಹುತಗಳಲ್ಲಿ ಸಾಯಬಾರದು ಎಂದು ನನ್ನ ಇಚ್ಛೆ.  ಕೆಲವೊಮ್ಮೆ ನನಗೆ ಅನ್ನಿಸುವುದು ನಾನ್ಯಾಕೆ ಸಾವಿಗೆ ಶರಣಾಗದೆ ಚಿರಂಜೀವಿ ಯಾಗಿರಬಾರದು ? ದೇವರನ್ನು ಬೇಡಿಕೊಂಡು ಪ್ರಾಣ ಭಿಕ್ಷೆ ಯಾಚಿಸಿದರೆ ಅವನು ಬಿಲ್ ಕುಲ್ ಒಪ್ಪುವುದಿಲ್ಲ, ಸಾವು ವಿಧಿ ನಿಯಾಮಕ !  ಆದರೆ ಸಾವಿತ್ರಿ ತನ್ನ ಗಂಡನ ಜೀವ ಕೊಂಡೊಯ್ಯ ಬೇಡ ಎಂದು ಯಮ ರಾಜನನ್ನು ಬೇಡಿ ಕೊಂಡಂತೆ ನಾನು ಪರಿ ಪರಿಯಾಗಿ ಯಮ ಧರ್ಮ ರಾಜನನ್ನು ಬೇಡಿಕೊಂಡರೆ ಅವನಿಗೆ ನನ್ನ ಮೇಲೆ ಕರುಣೆ ಹುತ್ತ ಬಹುದೇ ? ಛೆ ಛೆ ಇದೆಂಥ ಆಲೋಚನೆ ಬಂದಿತು ನನಗೆ ?  ಹುಟ್ಟು ಸಾವಿನ ಮಧ್ಯೆ ಇರುವ ಈ 'ಜೀವನ' ಕೆಲವರಿಗೆ ಅಲ್ಪಾವಧಿ, ಕೆಲವರಿಗೆ ಧೀರ್ಘಾವಧಿ ಅಲ್ಲವೇ ? ಅಂದ ಹಾಗೆ ನನಗೆ ಅಲ್ಪಾಯು ಎಂದಾಗ ಥಟ್ಟನೆ ನನ್ನ ಮನಸ್ಸಿಗೆ ಬರುವುದು 'ಭಕ್ತ ಮಾರ್ಕಂಡೇಯ'  ಹಾಗೂ 'ಭಕ್ತ ಧ್ರುವ'  ಇವರೀರ್ವರು ಅತಿ ಪುಟ್ಟ ವಯಸಿನಲ್ಲಿ ಯಮಧರ್ಮರಾಯನ  ಪಾಶಕ್ಕೆ ಆಹುತಿ ಯಾಗುತ್ತಾರೆ.   'ಧೀರ್ಘಾಯುಷಿ' ಎಂದಾಗ ನನ್ನ ಮನಸ್ಸಿಗೆ ಬಂದು ಹೋಗುವವರು ಶತಾಯು ಡಾ : ವಿಶ್ವೇಶ್ವರಯ್ಯ.  ನಾನು ಅತ್ತ ಕಡೆ 'ಅಲ್ಪಾಯು' ಆಗಲಾರೆ ಇತ್ತ ಕಡೆ 'ಧೀರ್ಘಾಯು' ಕೂಡ ಆಗಲಾರೆ 'ಅರ್ಧ ಶತಕ ' ಬಾರಿಸುತ್ತಿದಂತೆ ದೇವರು  ನನ್ನ
ಪ್ರಾಣ ಪಕ್ಷಿ ಯನ್ನು ನನ್ನ ಶರೀರ ದಿಂದ ಬೇರೆ ಮಾಡಿ ನನ್ನನ್ನು ಕರೆದೊಯ್ಯಲಿ ಎಂದು ಬೇಡಿಕೊಂಡು ನನ್ನ ಈ ಪುಟ್ಟ ಲೇಖನವನ್ನು ಮುಗಿಸುತ್ತೇನೆ. ಚಿಂತ್ಯಾಕೆ ಮಾಡುತಿ ಚಿನ್ಮಯ ನಿದ್ದಾನೆ ಅಲ್ಲವೇ ಎಂದು ನನ್ನ ಮನವೇ ಸಾಂತ್ವನ ಹೇಳುತಿದೆ ನೋಡಿ !!!!!!

No comments:

Post a Comment