Wednesday, September 23, 2015

ಜಯ ದೇವ ಜಯ ದೇವ ಶ್ರೀ ಗಣಪತಿ ರಾಯ






ಧಾರ್ಮಿಕತೆಯ  ಹೆಸರಿನಲ್ಲಿ ಮಾನವೀಯತೆ ಮೆರೆದ ಗೋಕಾಕ್ ನಲ್ಲೊಂದು ಗಣಪತಿ  ಯುವಕ ಸಂಘದಿಂದ ಸ್ಮಶಾನ ಕಾಯುವ ಸೋಮಯ್ಯ  ಪೂಜಾರಿ ಎಂಬವವರಿಗೆ ನಾಲಕ್ಕೂ  ಲಕ್ಷ ರೂಪಾಯಿಗಳಿಂದ ಒಂದು ಸುಂದರ ಗೃಹವನ್ನು ನಿರ್ಮಿಸಿ ಗಣಪತಿ ಹಬ್ಬದಂದು ಅವರಿಗೆ ಹಸ್ತಾಂತರಿಸಿದ ಒಂದು ಘಟನೆಯನ್ನು ಖಾಸಗಿ ಚಾನೆಲ್ ಒಂದರಲ್ಲಿ ನೋಡಿ ಹೃದಯ ತುಂಬಿ ಬಂತು . ೪ ಹೆಣ್ಣು ಮಕ್ಕಳ ತಂದೆ ಯಾದ ಸೋಮಯ್ಯ ನವರು ಪತ್ನಿ ಮತ್ತು ಪುತ್ರಿಯರೊಡನೆ  ಸ್ಮಶಾನ ಕಾಯುವ ಕಾಯಕದಿಂದ ಜೀವನ ನಡೆಸುತ್ತಿದ್ದರು .  ಅವರಿಗೆ ಸೂರು ಕಲ್ಪಿಸಿ ಹೆಂಡತಿ ಮಕ್ಕಳೊಡನೆ ನೆಮ್ಮದಿಯ  ಬಾಳು ನಡೆಸುವಂತೆ  ಮಾಡಿ ಕೊಟ್ಟ ಗಣಪತಿ ಯುವಕ ಸಂಘದವರು ಕಳೆದ ೨೬ ವರುಷಗಳಿಂದ ಈ ರೀತಿ ಸಮಾಜಮುಖಿ ಕಾರ್ಯಕ್ರಮಗಳನ್ನು ಮುಂದುವರಿಸಿ ಕೊಂಡು  ಬರುತ್ತಿದ್ದಾರೆ .  ಅವರು ಇದೆ ರೀತಿಯ ಒಳ್ಳೊಳ್ಳೆ  ಯೋಜನೆಗಳನ್ನು ಆಯೋಜಿಸಿ ಅರ್ಹರಿಗೆ ಈ ರೀತಿ ಸಹಾಯ ಹಸ್ತ ಚಾಚುತ್ತಿರುವುದು ಪ್ರಶಂಸನೀಯ .  ಆ ವಿಘ್ನ ವಿನಾಶಕ  ಗಜಮುಖನು ಇವರ ಈ  ಸಮಾಜಮುಖಿ ಕಾರ್ಯಗಳಿಗೆ ಇನ್ನು ಹೆಚ್ಚಿನ ಹಣವನ್ನು , ಸಹಕಾರವನ್ನು ಅಲ್ಲಿನ ಜನರಿಂದ ಒದಗಿಸಿ ಅರ್ಹರಿಗೆ ಸೂರು ಇಲ್ಲದವರಿಗೆ ದೀನರಿಗೆ ಒಂದು ಸೂರು ದೊರಕಿಸಿ ಕೊಡುವಂತೆ ಆಶಿರ್ವಾದ ನೀಡಲಿ.  ಇಂತಹ ಸಂಘಗಳು ಅತಿ ಹೆಚ್ಚಿನ ಸಂಖೆಯಲ್ಲಿ  ಮುಂದೆ ಬರಲಿ.   ಧಾರ್ಮಿಕತೆಯ  ಹೆಸರಿನಲ್ಲಿ  ಆಡಂಬರ ದ ಸದ್ದು ಗದ್ದಲ ತೋರದೆ ಇವ ರುಗಳು ನಡೆದ ಹಾದಿಯಲ್ಲಿ,  ಎಲ್ಲ ಸಂಘಗಳು ಇದನ್ನು ಆದರ್ಶವಾಗಿ ಟ್ಟು  ಕೊಂಡು ಮುಂಬರುವ  ದಿನಗಳಲ್ಲಿ ಈ ರೀತಿ ಕೈಂಕರ್ಯ ಗಳನ್ನ ಮುಂದುವರಿಸಿ ಕೊಂಡು ಹೋದಲ್ಲಿ ನಮ್ಮದು ರಾಮ ರಾಜ್ಯ ವಾಗುವುದರಲ್ಲಿ ಸಂದೇಹವೇ ಇಲ್ಲ .    ಜಯ ದೇವ ಜಯ ದೇವ ಶ್ರೀ ಗಣಪತಿ ರಾಯ ಜಯ ಗಣಪತಿ ರಾಯ ಜಯ ಕಾರಕ ಭಾವ ಹಾರಕ ಓಂಕಾರ ಕಾಯ : ಜಯ ದೇವ ಜಯ ದೇವ ಜಯ ದೇವ ಜಯ ದೇವ . ಸಾರ್ವ  ಜನಿಕರು ಇಂತಹ ಕಾರ್ಯಗಳಿಗೆ ತಮ್ಮ ಒಪ್ಪಿಗೆ ಸೂಚಿಸುವದರ ಮೂಲಕ  ಇದನ್ನು ಲೈಕಿ ಸ ಬೇಕಾಗಿ ಕೋರಿಕೆ .  

No comments:

Post a Comment