Wednesday, August 19, 2015



ಹೀಗೊಂದು ಪ್ರಹಸನ :

ಈಗ್ಗೆ ಮೂರು ವರುಷಗಳ ಹಿಂದೆ ಇದೆ ದಿನದಂದು ಅಂದ್ರೆ ನಾಗರ ಪಂಚಮಿ ದಿನದಂದು ನನ್ನ ಕಸಿನ್ ಮಗ ಅನಿರುದ್ಹ್ ಅಂತ ನಮ್ಮ ಮನೆಯಲ್ಲಿ ಇರುತ್ತಿದ್ದ ಸಮಯವದು, ಅಂದ್ರೆ ಆಗಿನ್ನೂ UKG  ಓದುತ್ತಿದ್ದ .  ಅವರ ಅಪ್ಪ ಅಮ್ಮ ಇಬ್ಬರು ಐ ಟಿ ಕಂಪನಿ ಉದ್ಯೋಗಿಗಳು ಅವರು ಆಫೀಸ್ ಬಂದ ನಂತರ ಅವರ ಜೊತೆ ಮಲಗಲು ಹೋಗುತ್ತಿದ್ದ ಅಂದರೆ ಅವನ ಊಟ ತಿಂಡಿ ರಾತ್ರಿ ಊಟ ಎಲ್ಲ ನಮ್ಮ ಮನೆಯಲ್ಲೇ ಆಗುತ್ತಿತ್ತು .     ಆಗ ಅವನಿಗೆ ಸುಮಾರು ೪ ವರುಷ ಇರಬಹುದು.  ವಿಪರೀತ ತುಂಟ , ತಂಟೆಕೋರ ಅವ.  ಆದರೆ ಊಟದ ವಿಷಯದಲ್ಲಿ ಎಂತದ್ದು ತಂಟೆ ಇರಲಿಲ್ಲ.  ಎಲ್ಲ ರೀತಿ ತಿಂಡಿ ಊಟ, ಹಣ್ಣು, ತರಕಾರಿ ಎಲ್ಲವನ್ನು ತಿನ್ನುತ್ತಿದ್ದ .  ಊಟದ ವಿಷಯದಲ್ಲಿ ಎಷ್ಟು ಅಚ್ಚು ಕಟ್ಟು ಅಂದರೆ ಹಬ್ಬ-ಹರಿದಿನ  ಹುಣ್ಣಿಮೆ- ಸಂಕಷ್ಟಿ  ದಿನಗಳಂದು ಅವನಿಗೆ ಊಟದ ಜೊತೆ ಜೊತೆಗೆ ಪಲ್ಯಗಳು, ಕೋಸಂಬರಿ, ಪಾಯಸ , ಹಪ್ಪಳ ಸಂಡಿಗೆ ಉಪ್ಪಿನಕಾಯಿ , ಗೊಜ್ಜಿನ ಚಿತ್ರಾನ್ನ, ಹಬ್ಬದ ಅಡಿಗೆ ಅಗ ಬೇಕು.   ಮೂರು ವರುಷಗಳ ಹಿಂದೆ ಇದೆ ನಾಗರ ಪಂಚಮಿ ದಿನದಂದು ಆವ ಹೇಳಿದ್ದು ಹೀಗೆ '' ಉಮ ಅಂಟಿ ನೀವು ನಾಗಪ್ಪನಿಗೆ ತನಿ ಎರೆದು ಆದ ಮೇಲೆ , ನಿಮ್ಮ ಪೂಜೆ ಎಲ್ಲಾ ಮುಗಿದ ನಂತರ'   ತಿಂಡಿ ತೀರ್ಥ ಅಂತ ಟೈಮ್ ವೇಸ್ಟ್ ಮಾಡ ಬೇಡಿ , ಯಾಕಂದ್ರೆ ಈ ದಿನ ಹಬ್ಬ ಅಡುಗೆ ಆಗಬೇಕು ಅದಕ್ಕೆ ಬೇಗ ಬೇಗ ಕುಕ್ಕರ್ ಇಟ್ ಬಿಡಿ , ಕೋಸಂಬರಿ ಮಾಡೋಕೆ ಸೌತೆಕಾಯಿ ಹಚ್ಚಿ ಕೊಡ್ತೀನಿ, ತೆಂಗಿನ ಕಾಯಿ ನಾನೇ ತುರಿದು ಕೊಡ್ತೀನಿ ನೀನೇನು ಯೋಚನೆ ಮಾಡಬೇಡ ಉಮ ಆಂಟಿ ನಾನ್ ನಿಂಗೆ ಹೆಲ್ಪ್ ಮಾಡ್ತೀನಿ, ಬೇಗ ಬೇಗ ಅಡುಗೆ ಮಾಡಿ ಅಂಕಲ್ ಗೆ, ಅಣ್ಣಂದಿರಿಗೆ ಊಟ ಮಾಡಿಕೊಂಡು ಆಫೀಸಿಗೆ ಹೋಗಲು ಹೇಳು ಆಮೇಲೆ ನಿಧಾನ ವಾಗಿ ಒಂದೊಂದೇ ಉಂಡೆ ಅಂದ್ರೆ ರವೆ ಉಂಡೆ, ಪುರಿ ಉಂಡೆ, ಎಳ್ಳಿನ ಉಂಡೆ ,ಚಕ್ಕುಲಿ ಎಲ್ಲ ಮಾಡೋಣ ನಮ್ ಅಜ್ಜಿ ಇದೆಲ್ಲ ಮಾಡ್ತಾರೆ .  ನೀನು ಮಾಡು ಉಮ ಆಂಟಿ ಅಂತ ಪೀಡಿಸ್ತ  ಇದ್ದ.  ನಾನು ''ಅಲ್ಲ ಪುಟ್ಟು ಇದೆಲ್ಲ ಅಜ್ಜಿ ಮಾಡ್ತಾರೆ ಕಣೋ ನಂಗೆ ಇವೆಲ್ಲ ಅಷ್ಟೊಂದು ಚೆನ್ನಾಗಿ ಮಾಡಲು ಬರೋಲ್ಲ '' ಅಂತ ಹೇಳಿದೆ.  ಅವನು ಕೇಳಬೇಕಲ್ಲ '' ನಂಗೆ ಅದೆಲ್ಲ ಗೊತ್ತಿಲ್ಲ ಅವೆಲ್ಲ ಮಾಡಿದ್ರೆನೇ ನಾನು ಊಟ ಮಾಡೋದು ಹೋಗು' ಅಂತ ಮುಖ ಓದಿಸಿಕೊಂಡು ಕುಳಿತ ಕಡೆಗೆ ಹೋಗಿ ಮಲ್ನಾಡ್ ಸ್ಟೋರ್ಸ್ ನಿಂದ ಅವನಿಗೆ ಏನೆಲ್ಲಾ ಬೇಕೋ ಅವೆಲ್ಲಾ  ಕೊಂದು ತಂದು , ಬಾಲೆ ಎಲೆ ಮೇಲೆ ಎಲ್ಲ ಬಡಿಸಿದ ಮೇಲೆ ಈ ಅಚ್ಚ ಕಟ್ ಬ್ರಾಹ್ಮಣ ಚೆನ್ನಾಗಿ ಊಟ ಮಾಡಿ ಎಲ್ಲವನ್ನು ತಿಂದು ತೇಗಿ ತೃಪ್ತನಾದ .  ನಂತರ ಉಮ ಅಂಟಿ ಒಂದು ಬಾಲೆ ಹಣ್ಣು ಕೊಡು ಎಂದು ತಿಂದು ಕೈ ಬಾಯಿ ತೊಳೆದು ಕೊಂಡು ಕಣ್ತುಂಬಾ ನಿದ್ದೆ ಮಾಡಿ ಸಂಜೆ ನಾಲ್ಕು ಘಂಟೆಗೆ ಎದ್ದ ಈ ಪುಣ್ಯಾತ್ಮ !!!! ನನಗೆ ಈ ದಿನ ಅನಿರುಧ್ ನೆನಪು ಬಹಳ ಬಂತು ಅವನು ಈಗ ಬೆಂಗಳೂರಿನಲ್ಲಿ ಇಲ್ಲಾ ನೆನೆಸಿಕೊಂಡಾಗ  ನೋಡಲು ಚಿಕ್ಕಮಂಗಳೂರಿನ  ಕಡುರಿಗೆ ಹೋಗಬೇಕು :) 

1 comment:

  1. ಧನ್ಯವಾದ ಸಮರ್ಪಣೆ ಹಾಗೂ thanks a lot Anirudh being my chota friend

    ReplyDelete